ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಮಗನ ನೆನಪಲ್ಲೇ ಕೊನೆಯುಸಿರೆಳೆದ ತಂದೆ
x

ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಮೃತಪಟ್ಟ ಅಕ್ಷಯ್ ಅವರ ತಂದೆ ಶಿವರಾಮ್ ಮಗನ ನೆನಪಿನಲ್ಲೇ ಕೊನೆಯುಸಿರೆಳೆದಿದ್ದಾರೆ. 

ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ ಮಗನ ನೆನಪಲ್ಲೇ ಕೊನೆಯುಸಿರೆಳೆದ ತಂದೆ

ಡಯಾಲಿಸಿಸ್‌ಗೆ ಒಳಗಾಗಿದ್ದ ಶಿವರಾಮ್‌ ಅವರು ತಮ್ಮ ಪುತ್ರ ಅಕ್ಷಯ್‌ ದುಡಿಮೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಪುತ್ರನ ಅಗಲಿಕೆ ಬಳಿಕ ಆತನ ನೆನಪಿನಲ್ಲಿಯೇ ಹಾಸಿಗೆ ಹಿಡಿದು ಮೃತಪಟ್ಟಿದ್ದಾರೆ.


ಬೆಂಗಳೂರಿನ ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಬೈಕ್‌ ಸವಾರ ಅಕ್ಷಯ್‌ ಮೃತಪಟ್ಟು ತಿಂಗಳು ಕಳೆಯುವಷ್ಟರಲ್ಲಿಯೇ ಮಗನ ಅಗಲಿಕೆಯ ನೋವಲ್ಲೇ ತಂದೆ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ಅಪ್ಪನ ಹುಟ್ಟುಹಬ್ಬಕ್ಕೆ ಮಟನ್ ತರಲು ಹೋಗಿದ್ದ ವೇಳೆ ಮರದ ಕೊಂಬೆ ಬಿದ್ದು ಅಕ್ಷಯ್‌ ಪ್ರಜ್ಞೆ ಕಳೆದುಕೊಂಡಿದ್ದ. ಹಲವು ದಿನಗಳವರೆಗೆ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಿಸದೇ ಕೋಮಾಗೆ ಜಾರಿದ್ದರು. ಅಂತಿಮವಾಗಿ ವೈದ್ಯರು ಅಕ್ಷಯ್‌ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದ್ದರು. ಅಂದಿನಿಂದ ಮಗನ ಸಾವಿನ ದುಃಖದಲ್ಲೇ ನರಳುತ್ತಿದ್ದ ಅಕ್ಷಯ್‌ ಅವರ ತಂದೆ ಶಿವರಾಮ್‌ ಕೊನೆಯುಸಿರೆಳೆದಿದ್ದಾರೆ.

ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದ ಶಿವರಾಮ್‌ ಅವರು ಅಕ್ಷಯ್‌ ದುಡಿಮೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಪುತ್ರನ ಅಗಲಿಕೆಯ ಬಳಿಕ ಮಗ ಆತನ ನೆನಪಿನಲ್ಲಿಯೇ ಮತ್ತಷ್ಟು ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ.

ಅಕ್ಷಯ್​ ಜೂನ್​ 19ರಂದು ಮಧ್ಯಾಹ್ನ 1 ಗಂಟೆಗೆ ಮೃತಪಟ್ಟಿದ್ದರು. ಅಕ್ಷಯ್‌ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದರು.

Read More
Next Story