New Year Celebration | ಮೆಟ್ರೋ ರೈಲು ಕಾರ್ಯಾಚರಣೆ ಅವಧಿ ವಿಸ್ತರಣೆ
x

New Year Celebration | ಮೆಟ್ರೋ ರೈಲು ಕಾರ್ಯಾಚರಣೆ ಅವಧಿ ವಿಸ್ತರಣೆ

ಡಿ.31 ಹಾಗೂ ಜ.1 ರಂದು ಮಟ್ರೋ ಕಾರ್ಯಾಚರಣೆ ಅವಧಿಯನ್ನು ನಮ್ಮ ಮೆಟ್ರೋ ನಿಗಮ ವಿಸ್ತರಿಸಿದೆ.


ಹೊಸ ವರ್ಷ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಶಾಪಿಂಗ್ ಮಾಲ್, ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್‌ಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಹೊಸ ವರ್ಷಾಚರಣೆಗೆ ಹೆಚ್ಚು ಜನರು ಆಗಮಿಸುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಿದೆ.

ಡಿ.31ರ ಮಧ್ಯರಾತ್ರಿಯಿಂದ ಜ.1 ರ ಮುಂಜಾನೆ 2ಗಂಟೆಯವರೆಗೆ ಮಟ್ರೋ ರೈಲುಗಳ ಕಾರ್ಯಾಚರಣೆ ಅವಧಿಯನ್ನು ನಮ್ಮ ಮೆಟ್ರೋ ನಿಗಮ ವಿಸ್ತರಿಸಿದೆ. ಜ.1 ರಂದು ಬೆಳಗಿನಜಾವ 2 ಗಂಟೆಗೆ ಎಲ್ಲ ಟರ್ಮಿನಲ್‌ಗಳಲ್ಲಿ ಕೊನೆಯ ರೈಲು ಹೊರಡಲಿದೆ. ಮೆಜೆಸ್ಟಿಕ್‌ ನಿಲ್ದಾಣದಿಂದ 2.40 ಕ್ಕೆ ಕೊನೆಯ ರೈಲು ಹೊರಡಲಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತದೆ. ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ಹಲವೆಡೆ ಜನಸಂದಣಿ ಹೆಚ್ಚಿರುತ್ತದೆ. ಜನರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಮೆಟ್ರೋ ರೈಲಿನ ಕಾರ್ಯಾಚರಣೆ ಅವಧಿ ವಿಸ್ತರಿಸಲಾಗಿದೆ ಎಂದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಡಿಸೆಂಬರ್ 31ರ ರಾತ್ರಿ 11ರಿಂದ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಬಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಹೆಚ್ಚಿನ ಜನರು ಒಟ್ಟಿಗೆ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಆಗಮಿಸುತ್ತಾರೆ. ಇದರಿಂದ ಭಾರೀ ಜನಸಂದಣಿಯಾಗಲಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಡಿಸೆಂಬರ್ 31ರ ರಾತ್ರಿ 11 ಗಂಟೆಯ ನಂತರ ಪ್ರವೇಶ ಹಾಗೂ ನಿರ್ಗಮನ ದ್ವಾರ ಬಂದ್ ಮಾಡಲಾಗುವುದು. ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಕ್ಕೆ ಬಂದು ಪ್ರಯಾಣಿಸಬೇಕು ಎಂದು ಸೂಚಿಸಿದೆ.

ಅಂದು ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಲು 50 ರೂ. ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಪೇಪರ್ ಟಿಕೆಟ್ ಬೇಗ ಹರಿದು ಕೊಡಬಹುದು. ಯಾವುದೇ ಸ್ಕ್ಯಾನ್ ಮಾಡುವ ಪ್ರಮೇಯ ಇರುವುದಿಲ್ಲ. ಇದರಿಂದ ಜನಸಂದಣೆ ಇರುವುದಿಲ್ಲ. ಡಿ.31 ರಂದು ಬೆಳಿಗ್ಗೆ 8ರಿಂದಲೇ ಪೇಪರ್‌ ಟಿಕೆಟ್‌ ನೀಡಲಾಗುವುದು ಎಂದು ತಿಳಿಸಿದೆ.

Read More
Next Story