ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ರೇವ್‌ ಪಾರ್ಟಿ | ಸಿನಿಮಾ ನಟ-ನಟಿಯರು ಸೇರಿ ಪ್ರತಿಷ್ಠಿತರು ಸಿಸಿಬಿ ವಶಕ್ಕೆ
x

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ರೇವ್‌ ಪಾರ್ಟಿ | ಸಿನಿಮಾ ನಟ-ನಟಿಯರು ಸೇರಿ ಪ್ರತಿಷ್ಠಿತರು ಸಿಸಿಬಿ ವಶಕ್ಕೆ


ಬೆಂಗಳೂರಿನ ಟೆಕ್ಕಿಗಳ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಡ್ರಗ್ಸ್ಸಹಿತ ಐವರನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿ ಆರ್ ಫಾರ್ಮ್ಹೌಸ್ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದ ತಂಡ ದಾಳಿ ನಡೆಸಿ ಎಂಡಿಎಂಎಂ, ಕೊಕೇನ್, ಹೈಡ್ರೋ ಗಾಂಜಾ ಸೇರಿದಂತೆ ಭಾರೀ ಪ್ರಮಾಣದ ಡ್ರಗ್ಸ್ ಮತ್ತು ಆಯೋಜಕರಲ್ಲಿ ಐವರನ್ನು ವಶಕ್ಕೆ ಪಡೆದಿದ್ದಾರೆ.

“ಗೋಪಾಲ ರೆಡ್ಡಿ ಎಂಬುವರಿಗೆ ಸೇರಿದ ಫಾರ್ಮ್ ಹೌಸ್ನಲ್ಲಿ ʼಸನ್ಸೆಟ್ ಟು ಸನ್ರೈಸ್ ವಿಕ್ಟರಿʼ ಎಂಬ ಹೆಸರಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಡ್ರಗ್ಸ್ ಸರಬರಾಜು ಮಾಡಿದ ಪೆಡ್ಲರ್ ಸೇರಿ ಐವರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅವರಲ್ಲಿ ಉದ್ಯಮಿಗಳು, ಪ್ರಭಾವಿಗಳ ಮಕ್ಕಳು, ಸಿನಿ ತಾರೆಯರು ಸೇರಿದಂತೆ ಹಲವು ಪ್ರತಿಷ್ಠಿತರು ಭಾಗವಹಿಸಿರುವ ಮಾಹಿತಿ ಇದೆ. ಅವರೆಲ್ಲರನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪಾರ್ಟಿಯ ಆಯೋಜಕರು ಯಾರು ಎಂಬುದು ಪತ್ತೆಯಾಗಬೇಕಿದೆ” ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

Read More
Next Story