E- Khata | ಜು.15 ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಖಾತೆ
x

E- Khata | ಜು.15 ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಸಿಗಲಿದೆ ಇ-ಖಾತೆ

ಬೆಂಗಳೂರಿನಲ್ಲಿ ಈಗಾಗಲೇ 50 ಲಕ್ಷ ಇ-ಖಾತಾ ನೋಂದಣಿಯಾಗಿದೆ. ಬ್ಯಾಟರಾಯನಪುರ ವ್ಯಾಪ್ತಿ ಒಂದರಲ್ಲೇ 50 ಸಾವಿರ ನೋಂದಣಿಯಾಗಿದೆ.


ಜುಲೈ 15 ರಿಂದ ರಾಜ್ಯವ್ಯಾಪಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರಸ್ತುತ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ಆರಂಭಿಸುವಂತೆ ಭಾರೀ ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜು.15 ರಿಂದ ಇ-ಖಾತಾ ನೋಂದಣಿಗೆ ಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬೆಂಗಳೂರಿನಲ್ಲಿ ಈಗಾಗಲೇ 50 ಲಕ್ಷ ಇ-ಖಾತಾ ನೋಂದಣಿಯಾಗಿದೆ. ಬ್ಯಾಟರಾಯನಪುರ ವ್ಯಾಪ್ತಿ ಒಂದರಲ್ಲೇ 50 ಸಾವಿರ ನೋಂದಣಿಯಾಗಿದೆ. ಮನೆ ಮನೆಗೆ ಇ-ಖಾತಾ ಆಂದೋಲನ ಆರಂಭಿಸಲಿದ್ದೇವೆ. ಜನರಿಗೆ ಮೇಳದ ಮೂಲಕ ಖಾತಾ ವಿತರಿಸುತ್ತಿದ್ದೇವೆ ಎಂದು ಹೇಳಿದರು.

ಕ್ಷೇತ್ರಗಳಲ್ಲಿ ಮೇಳ ಆಯೋಜನೆಗೆ ಸೂಚನೆ

ಭಾನುವಾರ(ಜೂ.29) ಯಲಹಂಕ ವಲಯದಲ್ಲಿ ಇ - ಖಾತಾ ಮೇಳ ಆಯೋಜಿಸಲಾಗಿದೆ. ಇದೇ ರೀತಿ ಬೇರೆ ಬೇರೆ ಕ್ಷೇತ್ರಗಳಲ್ಲೂ ಮೇಳ ನಡೆಸಲು ಆಯಾ ಕ್ಷೇತ್ರದ ಶಾಸಕರಿಗೆ ಸೂಚನೆ ನೀಡಲಾಗಿದೆ. ಇದರಿಂದ ಜನರು ಸುಲಭವಾಗಿ ಇ-ಖಾತಾ ಪಡೆಯಬಹುದಾಗಿದೆ.ಇ-ಖಾತಾ ಇದ್ದರೆ ನಿಮ್ಮ ಆಸ್ತಿಗೆ ಸುರಕ್ಷತೆ ಇರಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

Read More
Next Story