ದಸರಾ ಆನೆ ʻಅಶ್ವತ್ಥಾಮ ಸಾವು; ತನಿಖೆಗೆ ಆದೇಶ
x
ದಸರಾ ಆನೆ ʻಅಶ್ವತ್ಥಾಮ' ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ.

ದಸರಾ ಆನೆ ʻಅಶ್ವತ್ಥಾಮ' ಸಾವು; ತನಿಖೆಗೆ ಆದೇಶ

ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ 'ಅಶ್ವತ್ಥಾಮ' ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿದೆ.


Click the Play button to hear this message in audio format

ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ 'ಅಶ್ವತ್ಥಾಮ' ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ( ಜೂನ್‌ 11) ಮೃತಪಟ್ಟಿದೆ.

ಹುಣಸೂರು- ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಅಶ್ವತ್ಥಾಮ ಮೇವು ಅರಸಿ ಕಾಡಿಗೆ ತೆರಳಿತ್ತು. ಸೋಲಾರ್‌ ಬೇಲಿ ಮೇಲೆ ವಿದ್ಯುತ್‌ ತಂತಿಯು ಬಿದ್ದಿದ್ದು, ವಿದ್ಯುತ್‌ ಪ್ರವಹಿಸಿ ಆನೆ ಮೃತ ಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಈ ಆನೆಯನ್ನು 2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಸೆರೆ ಹಿಡಿಯಲಾಗಿತ್ತು. ಶಾಂತ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರಾಗಿದ್ದ ಅಶ್ವತ್ಥಾಮನನ್ನು ನಾಲ್ಕು ವರ್ಷದಲ್ಲಿಯೇ 2021ರ ದಸರೆಗೆ ಕರೆತರಲಾಗಿತ್ತು. ಅದಕ್ಕೆ ನಡಿಗೆ ತಾಲೀಮು ಸೇರಿದಂತೆ ವಿವಿಧ ತಾಲೀಮನ್ನು ನೀಡಲಾಗಿತ್ತು.


ತನಿಖೆಗೆ ಸೂಚನೆ

ಅಶ್ವತ್ಥಾಮ (38) ಆನೆಯ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆಘಾತ ವ್ಯಕ್ತಪಡಿಸಿದ್ದು, ಈ ಆಕಸ್ಮಿಕ ಸಾವಿನ ಬಗ್ಗೆ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. "ದಸರಾ ಮಹೋತ್ಸವದಲ್ಲಿ 2 ಬಾರಿ ಭಾಗಿಯಾಗಿದ್ದ ನಾಗರಹೊಳೆ ಅರಣ್ಯ ವ್ಯಾಪ್ತಿಯ ಭೀಮನಕಟ್ಟೆ ಶಿಬಿರದಲ್ಲಿದ್ದ ಅಶ್ವತ್ಥಾಮ ಸೌರ ವಿದ್ಯುತ್ ಬೇಲಿಯ ಮೇಲೆ ಬಿದ್ದು ಸಾವಿಗೀಡಾಗಿರುವುದಾಗಿ ವರದಿಯಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ತನಿಖೆ ನಡೆಸಲಾಗುವುದು," ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story