ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ: 72 ಚಾಲಕರ ವಿರುದ್ಧ ಎಫ್‌ಐಆರ್
ಈ ವರೆಗೆ ಒಟ್ಟು 12,165 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಕೆಲ ಚಾಲಕರಿಂದ ಅಪಘಾತ, ಎಲ್ಲೆಂದರಲ್ಲಿ ಶಾಲಾ ವಾಹನಗಳ ನಿಲುಗಡೆ ಮುಂತಾದ ಆರೋಪಗಳು ಬಂದಿದ್ದವು.
ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈವರೆಗೆ ಒಟ್ಟು 72 ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ವರೆಗೆ ಒಟ್ಟು 12,165 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಕೆಲ ಚಾಲಕರಿಂದ ಅಪಘಾತ, ಎಲ್ಲೆಂದರಲ್ಲಿ ಶಾಲಾ ವಾಹನಗಳ ನಿಲುಗಡೆ ಮುಂತಾದ ಆರೋಪಗಳು ಬಂದಿದ್ದವು.
ಜ.23ರಂದು 3,414 ವಾಹನಗಳ ತಪಾಸಣೆ ಮಾಡಿ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 16 ಚಾಲಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಫೆಬ್ರವರಿ 22ರಂದು 2,059 ವಾಹನಗಳನ್ನು ತಪಾಸಣೆ ಮಾಡಿ, ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಅಲ್ಲದೇ ಜುಲೈ 9ರಂದು 3,016 ಶಾಲಾ ವಾಹನ ತಪಾಸಣೆ ನಡೆಸಿ, 23 ಮಂದಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಆಗಸ್ಟ್ 4ರಂದು ವಿಶೇಷ ಕಾರ್ಯಾಚರಣೆ ನಡೆಸಿ, 3,676 ಚಾಲಕರನ್ನು ತಪಾಸಣೆಗೆ ಒಳಪಡಿಸಿ 26 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.