ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜಲಕ್ಷಾಮ: ತಜ್ಞರ ತಂಡ ರಚಿಸಲು ಈಶ್ವರ್‌ ಖಂಡ್ರೆ ಸೂಚನೆ
x
ಈಶ್ವರ್‌ ಖಂಡ್ರೆ

ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಜಲಕ್ಷಾಮ: ತಜ್ಞರ ತಂಡ ರಚಿಸಲು ಈಶ್ವರ್‌ ಖಂಡ್ರೆ ಸೂಚನೆ

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚಿನ ಮಳೆಯಾಗಿದ್ದು, ಫೆಬ್ರವರಿಯವರೆಗೆ ಹಳ್ಳಕೊಳ್ಳಗಳು ತುಂಬಿ ಹರಿಯಬೇಕಿತ್ತು. ಆದರೆ ನವೆಂಬರ್‌ ಮುಗಿಯುವುದರೊಳಗೆ ಹಳ್ಳಕೊಳ್ಳಗಳು ಬತ್ತಿಹೋಹೋಗುತ್ತಿವೆ. ನೀರಿನ ಸುಸ್ಥಿರತೆ ದೃಷ್ಟಿಯಿಂದ ಇದು ಅಘಾತಕಾರಿ ವಿಚಾರ.


Click the Play button to hear this message in audio format

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ನವಳಸೆ ಅರಣ್ಯ ವಿಭಾಗದಲ್ಲಿ ಹಳ್ಳಗಳು ಬರಿದಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿನ ಜಲಕ್ಷಾಮ ಅಧ್ಯಯನಕ್ಕೆ ತಜ್ಞರ ತಂಡವನ್ನು ರಚಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚಿನ ಮಳೆಯಾಗಿದ್ದು, ಫೆಬ್ರವರಿಯವರೆಗೆ ಹಳ್ಳಕೊಳ್ಳಗಳು ತುಂಬಿ ಹರಿಯಬೇಕಿತ್ತು. ಆದರೆ ನವೆಂಬರ್‌ ಮುಗಿಯುವುದರೊಳಗೆ ಹಳ್ಳಕೊಳ್ಳಗಳು ಬತ್ತಿಹೋಹೋಗುತ್ತಿವೆ. ನೀರಿನ ಸುಸ್ಥಿರತೆ ದೃಷ್ಟಿಯಿಂದ ಇದು ಅಘಾತಕಾರಿ ವಿಚಾರ. ಇದು ಜಲಕ್ಷಾಮದ ಸೂಚನೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಅಧ್ಯಯನ ನಡೆಸಲು ಅರಣ್ಯ, ಪರಿಸರ ಇಲಾಖೆ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪಿ) ಸಹಯೋಗದಲ್ಲಿ ತಜ್ಞರ ತಂಡ ರಚಿಸಬೇಕು. ತಂಡ ಪರಿಶೀಲನೆ ನಡೆಸಿ, ಪರಿಹಾರದ ಮಾರ್ಗೋಪಾಯಗಳನ್ನು ಒಳಗೊಂಡ ವರದಿ ನೀಡಲು ಮೂರು ತಿಂಗಳ ಗಡುವು ನಿಗದಿ ಮಾಡಬೇಕು' ಎಂದು ಅವರು ಸೂಚಿಸಿದ್ದಾರೆ.

Read More
Next Story