ಡಾ. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ: ನಾಗತಿಹಳ್ಳಿ ಚಂದ್ರಶೇಖರ್
ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ʼಎಕ್ಸ್ʼ ನಲ್ಲಿ ಪೋಸ್ಟ್ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್, ನಮ್ಮ ಪ್ರೀತಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ರಾಜಕಾರಣ ಪ್ರವೇಶಿಸಿದ್ದು ದುರದೃಷ್ಟಕರ. ಕಾರಣ ಏನೇ ಇರಲಿ. ಇಲ್ಲಿ ಪಡೆದುದನ್ನು ಅಲ್ಲಿ ಕಳೆದುಕೊಳ್ಳಬಹುದೇನೋ. ಜನರ ಸೇವೆ ಮಾಡಲು ರಾಜಕಾರಣ ಒಂದೇ ದಾರಿ ಅಂತ ಯಾವ ಮೂರ್ಖ ಹೇಳಿದ? ಸಮಾಜವನ್ನು ಕಟ್ಟಲು ಸಾವಿರ ದಾರಿಗಳಿವೆ. ಮಂಜುನಾಥ್ ಇದು ನಿಮಗೆ ಬೇಕಿತ್ತೆ?’ ಎಂದು ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾಗಿ ನಿಸ್ವಾರ್ಥದ ಸೇವೆಯ ಮೂಲಕ ನಾಡಿನುದ್ದಗಲಕ್ಕೆ ಮನೆಮಾತಾಗಿದ್ದ ಡಾ ಮಂಜುನಾಥ್ ಅವರು, ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು. ನಿವೃತ್ತಿಯ ಬಳಿಕ ಅವರು ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆ ಅವರು ಇದೀಗ ಬಿಜೆಪಿಯ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅಲ್ಲಿನ ಹಾಲಿ ಸಂಸದ, ಕಾಂಗ್ರೆಸ್‌ನ ಡಿ ಕೆ ಸುರೇಶ್ ವಿರುದ್ಧ ಡಾ ಮಂಜುನಾಥ್ ಇದೀಗ ಹೋರಾಟಕ್ಕೆ ಇಳಿದಿದ್ದಾರೆ. ಆ ಹಿನ್ನೆಲೆಯಲ್ಲಿ ಡಾ ಮಂಜುನಾಥ್ ಅವರ ರಾಜಕೀಯ ಪ್ರವೇಶ ರಾಜ್ಯದ ಉದ್ದಗಲಕ್ಕೆ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.