Mysore MUDA Case | ದಾಖಲೆ ನಾಪತ್ತೆ ದೂರು; ಆರ್‌ಟಿಐ ಕಾರ್ಯಕರ್ತನಿಗೆ ಇ.ಡಿ. ನೋಟಿಸ್‌
x

Mysore MUDA Case | ದಾಖಲೆ ನಾಪತ್ತೆ ದೂರು; ಆರ್‌ಟಿಐ ಕಾರ್ಯಕರ್ತನಿಗೆ ಇ.ಡಿ. ನೋಟಿಸ್‌

ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಆದರೆ, ಯಾವ ಪ್ರಕರಣ ಎಂದು ಉಲ್ಲೇಖಿಸಿಲ್ಲ. ನಾನು ಸಾಕಷ್ಟು ವಿಚಾರವಾಗಿ ಹೋರಾಟ ಮಾಡಿದ್ದೇನೆ. ಮುಡಾದಲ್ಲಿ ಹಲವಾರು ದಾಖಲೆ ನಾಪತ್ತೆಯಾಗಿವೆ ಎಂಬ ದೂರು ನೀಡಿದ್ದೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ತಿಳಿಸಿದ್ದಾರೆ


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಪಡೆದಿದ್ದ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಸಂಬಂಧ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಜಾರಿ ನಿರ್ದೇಶನಾಲಯದ ನೋಟಿಸ್ ನೀಡಿದೆ.

ಅಗತ್ಯ ದಾಖಲೆಗಳೊಂದಿಗೆ ಸೋಮವಾರ ಬೆಂಗಳೂರಿನ ಇಡಿ ಕಚೇರಿಗೆ ಬರಲು ಸೂಚಿಸಲಾಗಿದೆ. ಆದರೆ ಯಾವ ನಿರ್ದಿಷ್ಟ ವಿಚಾರಕ್ಕೆ ನೋಟಿಸ್‌ ನೀಡಲಾಗಿದೆನ ಎಂಬುದರ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ನೀಡಿಲ್ಲ. ಹೀಗಾಗಿ ಇಡಿ ಅಧಿಕಾರಿಗಳ ನಡೆ ತೀವ್ರ ಕುತೂಹಲ ಮೂಡಿಸಿದೆ.

ಈ ಮಧ್ಯೆ, ಇಡಿ ನೋಟಿಸ್‌ ವಿಚಾರವಾಗಿ ಪ್ರತಿಕ್ರಿಯಿಸಿರುವ ಆರ್‌ಟಿಇ ಕಾರ್ಯಕರ್ತ ಗಂಗರಾಜು ಅವರು, ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಆದರೆ, ಯಾವ ಪ್ರಕರಣ ಎಂದು ಉಲ್ಲೇಖಿಸಿಲ್ಲ. ನಾನು ಸಾಕಷ್ಟು ವಿಚಾರವಾಗಿ ಹೋರಾಟ ಮಾಡಿದ್ದೇನೆ. ಮುಡಾದಲ್ಲಿ ಹಲವಾರು ದಾಖಲೆ ನಾಪತ್ತೆಯಾಗಿವೆ ಎಂಬ ದೂರು ನೀಡಿದ್ದೆ. ಇಡಿ ಕೇಳುವ ಎಲ್ಲಾ ದಾಖಲೆಗಳನ್ನು ಕೊಡಲು ನಾನು‌ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಈಚೆಗಷ್ಟೇ ಜಾರಿ ನಿರ್ದೇಶನಾಲಯದ ಮುಡಾದ ಆರು ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿತ್ತು. ಮುಡಾ ಕಚೇರಿ ಹಾಗೂ ತಾಲೂಕಿನ ಕಚೇರಿಯ ಮೇಲೆ ದಾಳಿ ನಡೆಸಿ, ನಿವೇಶನ ಹಂಚಿಕೆ ಕುರಿತು ದಾಖಲಾತಿಗಳನ್ನು ಪರಿಶೀಲನೆ ನಡೆಸಿತ್ತು.

Read More
Next Story