ಹಳೇಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಪಾರುಪತ್ಯ: ಡಿಕೆಶಿಗೆ ಹಿನ್ನಡೆ
x

ಹಳೇಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಪಾರುಪತ್ಯ: ಡಿಕೆಶಿಗೆ ಹಿನ್ನಡೆ


ಹಳೇ ಮೈಸೂರು ಪ್ರಾಂತ್ಯದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಕ್ಕಲಿಗ ಸಮೂದಾಯದ ನಾಯಕನಾಗಲು ಪ್ರಯತ್ನಿಸುತ್ತಿದ್ದ ಹಾಗೂ ಒಂದು ಹಂತದಲ್ಲಿ ಸಫಲತೆ ಪಡೆದಿದ್ದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಸ್ವತಃ ತನ್ನ ತಮ್ಮ ಮೂರು ಬಾರಿಯ ಸಂಸದ ಡಿ.ಕೆ. ಸುರೇಶ್‌ ಹೀನಾಯ ಸೋಲು ಹಾಗೂ ತಮ್ಮ ರಾಜಕೀಯ ಬದ್ಧವೈರಿ ಎಚ್‌.ಡಿ. ಕುಮಾರಸ್ವಾಮಿ ಅವರ ಭರ್ಜರಿ ಗೆಲುವು, ಒಕ್ಕಲಿಗರ ಪ್ರಾಂತ್ಯದ ಪಾರುಪತ್ಯ ವಹಿಸಲು ಸಿದ್ಧರಾಗಿದ್ದ ಶಿವಕುಮಾರ್‌ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೆಂಗಳೂರು ಗ್ರಾಮಾಂತರದಿಂದ ಮೂರು ಬಾರಿ ಸಂಸದರಾಗಿದ್ದ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರು ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ವಿರುದ್ಧ ಸೋಲು ಕಂಡಿದ್ದಾರೆ. 2013ರಲ್ಲಿ ಆಗಿನ ಹಾಲಿ ಸಂಸದ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಲು ರಾಜೀನಾಮೆ ನೀಡಿದ ನಂತರ ಡಿ.ಕೆ . ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು. ಸುರೇಶ್ ನಂತರ 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಗೆದ್ದರು ಮತ್ತು ಈಗ ಅವರು ಬಿಜೆಪಿಗೆ ದೊಡ್ಡ ಸೋಲು ಕಂಡಿದ್ದಾರೆ.

ಒಕ್ಕಲಿಗ ಭದ್ರಕೋಟೆಯ ನಾಯಕತ್ವ ಪಡೆಯಲು ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಗಳ ನಡುವಿನ ಜಿದ್ದಾಜಿದ್ದಿ ಏರ್ಪಟ್ಟಿರುವುದರಿಂದ ಡಿ.ಕೆ.ಸುರೇಶ್ ಸೋಲು ಸ್ವತಃ ಡಿಕೆ ಶಿವಕುಮಾರ್ ಸೋಲು ಎಂದೇ ಪರಿಗಣಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಸೋಲಿನ ಮೂಲಕ ಒಕ್ಕಲಿಗರ ಬೆಂಬಲ ಪ್ರಮುಖವಾಗಿ ಜೆಡಿಎಸ್‌ ಮತ್ತು ಅದರ ಎನ್‌ಡಿಎ ಸಹವರ್ತಿ ಬಿಜೆಪಿಗೆ ವ್ಯಕ್ತವಾದಂತಾಗಿದೆ.

ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಸೇರಿದಂತೆ ಏಳು ಕ್ಷೇತ್ರಗಳು ಒಕ್ಕಲಿಗ ಭದ್ರಕೋಟೆಯಾಗಿವೆ. ಅವುಗಳಲ್ಲಿ ಚಾಮರಾಜನಗರ ಮತ್ತು ಕೋಲಾರ ಮೀಸಲು ಕ್ಷೇತ್ರಗಳಾಗಿದ್ದರೂ, ಒಕ್ಕಲಿಗರು ಅಲ್ಲೂ ಯಾವುದೇ ಅಭ್ಯರ್ಥಿಯ ಜಯವನ್ನು ನಿರ್ಧರಿಸಬಹುದಾದಷ್ಟು ಶಕ್ತಿಯನ್ನು ಹೊಂದಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಡಾ.ಸಿ.ಎನ್.ಮಂಜುನಾಥ್, ತುಮಕೂರಿನಿಂದ ವಿ.ಸೋಮಣ್ಣ, ಕೋಲಾರದಿಂದ ಡಾ.ಕೆ.ಸುಧಾಕರ್, ಕೋಲಾರದಿಂದ ಮಲ್ಲೇಶ್ ಬಾಬು ಗೆಲುವು ಸಾಧಿಸುವ ಮೂಲಕ ಆ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಹೋಗಿವೆ. ಚಾಮರಾಜನಗರ, ಹಾಸನ ಸೇರಿ ಎರಡು ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ಕೈ ಪಾಲಾಗುತ್ತಿವೆ. ಈ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿನಿಧಿಸಿದ್ದ ಹಾಸನ ಜೆಡಿಎಸ್ ಪ್ರಬಲ ಕ್ಷೇತ್ರವಾಗಿದ್ದರೂ, ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಹಗರಣದಿಂದ ಜೆಡಿಎಸ್ ಆ ಕ್ಷೇತ್ರವನ್ನು ಕಳೆದುಕೊಂಡಿದೆ.

ಇದು ಹೇಗೆ ಸಂಭವಿಸಿತು?

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ, ಜೆಡಿಎಸ್ ಉನ್ನತಿಯ ಸಾಧ್ಯತೆಗೆ ಅಡ್ಡಿಯಾಗಲಿದೆ ಎಂದು ಪರಿಗಣಿಸಲಾಗಿತ್ತು. ಆದರೆ, ಹಳೇ ಮೈಸೂರು ಭಾಗದ ಒಕ್ಕಲಿಗ ಭದ್ರಕೋಟೆ ತನ್ನ ಬೆಂಬಲವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಮತ್ತು ನಿರ್ದಿಷ್ಟವಾಗಿ ಜೆಡಿಎಸ್‌ಗೆ ಬೆಂಬಲ ನೀಡಿರುವುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಒಕ್ಕಲಿಗ ಸಮುದಾಯ ಜೆಡಿಎಸ್ ಅನ್ನು ತಮ್ಮದೇ ಮೂಲ ಪಕ್ಷ ಎಂದು ಪರಿಗಣಿಸಿ ಜೆಡಿಎಸ್ ಮತ್ತು ಬಿಜೆಪಿಗೆ ಬೆಂಬಲ ನೀಡಿರುವುದು ಫಲಿತಾಂಶದಿಂದ ಗೊತ್ತಾಗಿದೆ. ಹೀಗಾಗಿ ಚಾಮರಾಜನಗರ ಮತ್ತು ಹಾಸನ ಹೊರತುಪಡಿಸಿ ಐದು ಕ್ಷೇತ್ರಗಳಲ್ಲಿ ಗೆದ್ದಿರುವ ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿ ಬಲ ಪಡೆದುಕೊಂಡಿದೆ. ಚಾಮರಾಜನಗರ

ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೀಮಿತವಾಗಿದ್ದರು. ಆದರೆ ಇತ್ತೀಚಿಗೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ನಾಯಕರಾಗಿ ಹೊರಹೊಮ್ಮುತ್ತಿರುವುದು ಮತ್ತು ಅದೇ ಹೊತ್ತಿನಲ್ಲಿ ಚುನಾವಣಾ ಫಲಿತಾಂಶ ಅವರಿಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಇದೀಗ ಹೆಚ್.ಡಿ.ಕುಮಾರಸ್ವಾಮಿ ಅವರೂ ಮಂಡ್ಯ ಕ್ಷೇತ್ರವನ್ನು ದೊಡ್ಡ ಅಂತರದಿಂದ ಗೆದ್ದುಕೊಂಡು 2019 ರ ಚುನಾವಣೆಯಲ್ಲಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಜತೆಗೆ ಹಳೇ ಮೈಸೂರ ಭಾಗದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಕಾರುಬಾರು ನಡೆಯುವುದಿಲ್ಲ ಎಂದೂ ಸಂದೇಶ ನೀಡಿದ್ದಾರೆ.

ಕುಮಾರಸ್ವಾಮಿ ಅವರ ಬಾವನೆಂಟ ಹಾಗೂ ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್‌ ಅವರನ್ನು ಭರ್ಜರಿಯಾಗಿ ಸೋಲಿಸಿರುವುದು ಡಿಕೆಶಿ ಅವರಿಗೆ ಆಘಾತ ಉಂಟುಮಾಡಿದೆ ಎಂಬ ವಿಶ್ಲೇಷಣೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡ್ರೈವ್‌ಗಳನ್ನು ಹಂಚಲು ಡಿಕೆ ಶಿವಕುಮಾರ್ ಕಾರಣ ಎಂದು ಜೆಡಿಎಸ್ ಈ ಹಿಂದೆ ಆರೋಪಿಸಿತ್ತು ಮತ್ತು ಬಿಜೆಪಿಯಿಂದ ಡಾ.ಮಂಜುನಾಥ್ ಅವರನ್ನು ತನ್ನ ಸಹೋದರನ ವಿರುದ್ಧ ಕಣಕ್ಕಿಳಿಸಿರುವುದರ ಸೇಡು ತೀರಿಸಿಕೊಳ್ಳಲು ಡಿಕೆಶಿ ಈ ರೀತಿ ಮಾಡಿದ್ದಾರೆ ಎಂದು ಹೇಳಿತ್ತು. ಮಂಜುನಾಥ್ ಹಾಗೂ ಬದ್ಧ ಪ್ರತಿಸ್ಪರ್ಧಿ ಎಚ್‌ಡಿ ಕುಮಾರಸ್ವಾಮಿ ಇಬ್ಬರೂ ಗೆದ್ದಿದ್ದು, ಡಿಸಿಎಂ ಡಿಕೆಶಿ ಅವರ ಮುಖಭಂಗಕ್ಕೂ ಕಾರಣವಾಗಿದೆ ಎಂದು ಹೇಳಲಾಗಿದೆ.

Read More
Next Story