Dinner Politics | ಗೃಹ ಸಚಿವರ ಡಿನ್ನರ್‌ ಮೀಟ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್
x

Dinner Politics | ಗೃಹ ಸಚಿವರ ಡಿನ್ನರ್‌ ಮೀಟ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರ ಸೂಚನೆ ಮೇರೆಗೆ ಡಾ ಪರಮೇಶ್ವರ್ ಅವರ ಡಿನ್ನರ್ ಮೀಟ್ ರದ್ಧಾಗಿದ್ದು, ಈ ಬಗ್ಗೆ ಖುದ್ದು ಗೃಹ ಸಚಿವರೇ ಮಾಧ್ಯಮ ಪ್ರಕಟಣೆ ಹೊರಡಿಸಿ ಔತಣಕೂಟದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ.

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಜ್ಯ ಕಾಂಗ್ರೆಸ್ ನಾಯಕರ ಡಿನ್ನರ್ ಪಾಲಿಟಿಕ್ಸ್ಗೆ ಹೈಕಮಾಂಡ್ ಬ್ರೇಕ್ ಬಿದ್ದಿದೆ.

ಹೊಸ ವರ್ಷದ ಆರಂಭದಲ್ಲೇ ಸಚಿವ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಡಿನ್ನರ್ ಮೀಟ್ ನಡೆದಿತ್ತು, ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಆದ ಡಿ ಕೆ ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ನಡೆಸಿದ ಸಚಿವರು ಮತ್ತು ಶಾಸಕರ ಡಿನ್ನರ್ ಮೀಟ್ ನಡೆಸಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ನಾಳೆ(ಜ.8) ಗೃಹ ಸಚಿವ ಪರಮೇಶ್ವರ್ ಅವರು ಎಸ್ಸಿ/ ಎಸ್ಟಿ ಶಾಸಕರು ಮತ್ತು ಸಚಿವರ ಡಿನ್ನರ್ ಮೀಟ್ ಕರೆದಿದ್ದರು. ಸ್ವತಃ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಇರುವ ನಾಯಕರು ಹೀಗೆ ಸರಣಿ ಡಿನ್ನರ್ ಮೀಟ್ ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸಭೆಗಳು ನಡೆಯುತ್ತಿವೆ ಎಂಬ ವಿಶ್ಲೇಷಣೆಗೆ ಕಾರಣವಾಗಿತ್ತು.

ಪಕ್ಷದ ಮುಂಚೂಣಿ ನಾಯಕರ ಈ ಡಿನ್ನರ್ ಪೊಲಿಟಿಕ್ಸ್ ಪಕ್ಷದ ವರ್ಚಸ್ಸು ಮತ್ತು ಸರ್ಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಎಂಬ ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್ ಹೈಕಮಾಂಡ್ ಇದೀಗ ದಿಢೀರನೇ ಪರಮೇಶ್ವರ್ ಅವರ ಡಿನ್ನರ್ ಮೀಟ್ಗೆ ಬ್ರೇಕ್ ಹಾಕಿದೆ. ಹಾಗಾಗಿ ನಾಳೆ ನಿಗದಿಯಾಗಿದ್ದ ಡಾ ಜಿ ಪರಮೇಶ್ವರ್ ಅವರ ಎಸ್ಸಿ ಎಸ್ಟಿ ಸಚಿವರು, ಶಾಸಕರೊಂದಿಗಿನ ಔತಣಕೂಟ ಕೊನೇ ಕ್ಷಣದಲ್ಲಿ ರದ್ದಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರ ಸೂಚನೆ ಮೇರೆಗೆ ಡಾ ಪರಮೇಶ್ವರ್ ಅವರ ಡಿನ್ನರ್ ಮೀಟ್ ರದ್ಧಾಗಿದ್ದು, ಈ ಬಗ್ಗೆ ಖುದ್ದು ಗೃಹ ಸಚಿವರೇ ಮಾಧ್ಯಮ ಪ್ರಕಟಣೆ ಹೊರಡಿಸಿ ಔತಣಕೂಟದ ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಒಟ್ಟಾರೆ, ಪಕ್ಷದ ನಾಯಕರ ಡಿನ್ನರ್ ಪೊಲಿಟಿಕ್ಸ್ ವಿಷಯವನ್ನು ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎಂಬುದಂತೂ ಇದೀಗ ಖಾತರಿಯಾಗಿದೆ.

Read More
Next Story