ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಐಜಿ ಪತ್ರ
x
ನಟ ದರ್ಶನ್‌

ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಡಿಐಜಿ ಪತ್ರ

ದರ್ಶನ್‌ ಬಳ್ಳಾರಿ ಕಾರಾಗೃಹದ ಒಳ ಪ್ರವೇಶಿಸುವಾಗ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವ ಆಗಿದೆ.


Click the Play button to hear this message in audio format

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ಫೋಟೋ ವೈರಲ್‌ ಆದ ಬಳಿಕ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿಗೆ ದರ್ಶನ್‌ ಬರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡು ಬಂದಿದೆ. ನಟನಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಸಿಬ್ಬಂದಿ ಅನುಮತಿ ನೀಡಿದ್ದು, ಆ ಬಗ್ಗೆ ಕರ್ತವ್ಯ ಲೋಪ ಎಸಗಿದ ಭದ್ರತಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರಾಗೃಹ ಇಲಾಖೆಯ ಡಿಜಿಪಿಗೆ ಡಿಐಜಿ ಟಿ.ಪಿ. ಶೇಷ ಅವರು ಪತ್ರ ಬರೆದಿದ್ದಾರೆ.

ದರ್ಶನ್‌ ಬಳ್ಳಾರಿ ಜೈಲಿನ ಒಳ ಪ್ರವೇಶಿಸುವಾಗ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಂಡರು. ಅವರಿಗೆ ಕೂಲಿಂಗ್​ ಗ್ಲಾಸ್​ ಧರಿಸಲು ಏಕೆ ಅನುಮತಿ ನೀಡಲಾಯಿತು ಎಂಬ ಪ್ರಶ್ನೆ ಉದ್ಭವ ಆಗಿದೆ.

ಜೈಲಿನ ನಿಯಮಾನುಸಾರ ಮುಖ್ಯ ದ್ವಾರದಲ್ಲಿ ಸ್ವಂತ ವಸ್ತುಗಳನ್ನು ಒಪ್ಪಿಸಬೇಕು. ಆದರೆ ದರ್ಶನ್​ಗೆ ಕೂಲಿಂಗ್ ಗ್ಲಾಸ್‌ ಧರಿಸಲು ಅನುಮತಿ ನೀಡಿದ್ದರಿಂದ ಕರ್ತವ್ಯಲೋಪ ಆಗಿದೆ. ಈ ಹಿನ್ನೆಲೆಯಲ್ಲಿ, ದರ್ಶನ್ ಅವರನ್ನು ಕರೆತಂದ ಭದ್ರತಾ ಸಿಬ್ಬಂದಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಪತ್ರ ಬರೆದಿದ್ದಾರೆ. ಶಿಸ್ತು ಕ್ರಮ ಜರುಗಿಸಲು ಜೈಲು ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ.

ಬಳ್ಳಾರಿ ಜೈಲಿನ​ ಒಳಗೆ ಹೋಗುವಾಗ ಪೊಲೀಸ್ ಅಧಿಕಾರಿಗಳಿಗೆ ಹಸ್ತಲಾಘವ ಮಾಡಲು ದರ್ಶನ್ ಮುಂದಾದರು. ಬೆಂಗಳೂರು ಜೈಲಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಬಂದಿದ್ದ ಎಸಿಪಿಗೆ ಶೇಕ್​ ಹ್ಯಾಂಡ್​ ನೀಡಲು ದರ್ಶನ್​ ಪ್ರಯತ್ನಿಸಿದರು. ಆದರೆ ದರ್ಶನ್​ ಜೊತೆ ಕೈ ಕುಲುಕಲು ಪೊಲೀಸ್ ಅಧಿಕಾರಿ ನಿರಾಕರಿಸಿದರು.

ಬೇರೆ ಖೈದಿಗಳಿಗೆ ಸಂಕಷ್ಟ

ದರ್ಶನ ಆಗಮನದಿಂದ ಬಳ್ಳಾರಿ ಜೈಲಿನಲ್ಲಿರುವ ಉಳಿದ ಕೈದಿಗಳಿಗೆ ಸಂಕಷ್ಟ ಹೆಚ್ಚಾಗಿದೆ. ಜೈಲಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ. ಖೈದಿಗಳಿಗೆ ಹೊರಗಿನ ಊಟ ಕೊಡಲು ಕುಟುಂಬದವರಿಗೆ ಜೈಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ಮೊದಲು ಊಟ ಕೊಡಲು ಅವಕಾಶ ನೀಡುತ್ತಿದ್ದ ಬಳ್ಳಾರಿ ಜೈಲು ಸಿಬ್ಬಂದಿ ಈಗ ಖೈದಿಗಳಿಗಾಗಿ ಊಟ ತಂದಿದ್ದ ಹಲವರನ್ನು ವಾಪಸ್ ಕಳಿಸಿದ್ದಾರೆ. ದರ್ಶನ್‌ಗಾಗಿ ತಿರುಪತಿ ಪ್ರಸಾದ ತಂದಿದ್ದ ಅಭಿಮಾನಿಯನ್ನೂ ವಾಪಸ್​ ಕಳಿಸಲಾಗಿದೆ.

Read More
Next Story