ಗೌಪ್ಯ ಮಾಹಿತಿ ಸರ್ಕಾರಕ್ಕೆ ಸಿಕ್ಕಿದ್ದು ಹೇಗೆ?: ರಾಜ್ಯಪಾಲ ಗೆಹಲೋತ್ ಪ್ರಶ್ನೆ
x
ಥಾವರ್‌ ಚಂದ್ರ ಗೆಹ್ಲೋಟ್‌

ಗೌಪ್ಯ ಮಾಹಿತಿ ಸರ್ಕಾರಕ್ಕೆ ಸಿಕ್ಕಿದ್ದು ಹೇಗೆ?: ರಾಜ್ಯಪಾಲ ಗೆಹಲೋತ್ ಪ್ರಶ್ನೆ

'ಎಚ್.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜಿ. ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಅನುಮತಿ ಕೋರಿ ಲೋಕಾಯುಕ್ತವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ ಎಂಬ ಗೌಪ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ' ಎಂದು ರಾಜ್ಯಪಾಲರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.


Click the Play button to hear this message in audio format

'ಎಚ್.ಡಿ.ಕುಮಾರಸ್ವಾಮಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜಿ. ಜನಾರ್ದನ ರೆಡ್ಡಿ ಅವರ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಅನುಮತಿ ಕೋರಿ ಲೋಕಾಯುಕ್ತವು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ ಎಂಬ ಗೌಪ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ' ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು, ಆಗಸ್ಟ್ 22ರಂದು ನಡೆದ ಸಂಪುಟ ಸಭೆಯ ಖಂಡಿಸಿತ್ತು. ಜತೆಗೆ ಪ್ರತಿಪಕ್ಷಗಳ ಮುಖಂಡರಾದ ಎಚ್‌ ಡಿ ಕುಮಾರಸ್ವಾಮಿ, ಮುರುಗೇಶ್‌ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜಿ ಜನಾರ್ದನ ರೆಡ್ಡಿ ಅವರ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ತನಿಖಾ ಏಜೆನ್ಸಿಗಳು ಕೋರಿರುವ ಅನುಮತಿಯನ್ನು ಕೂಡ ನೀಡಬೇಕು ಎಂದೂ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿತ್ತು.

'ಈ ನಾಲ್ವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಿಂದ ರಾಜಭವನಕ್ಕೆ ಸಲ್ಲಿಕೆಯಾಗಿರುವ ಮನವಿಗಳು ಮತ್ತು ಅವುಗಳ ದಿನಾಂಕಗಳನ್ನು ಸಂಪುಟ ಸಭೆಯ ನಿರ್ಣಯಗಳಲ್ಲಿ ಉಲ್ಲೇಖಿಸಲಾಗಿದೆ. ಈ ರಹಸ್ಯ ಮಾಹಿತಿ ರಾಜ್ಯ ಸರ್ಕಾರಕ್ಕೆ ಗೊತ್ತಾಗಿದ್ದಾದರೂ ಹೇಗೆ' ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ.

'ಈ ದಾಖಲೆಗಳ ಪ್ರತಿಗಳು ಮಾಧ್ಯಮಗಳಲ್ಲೂ ಹರಿದಾಡುತ್ತಿರುವುದನ್ನು ನಾನು ನೋಡಿದ್ದೇನೆ. ಲೋಕಾಯುಕ್ತ ಪೊಲೀಸ್ ವಿಭಾಗವು ಒಂದು ಸ್ವತಂತ್ರ ಸಂಸ್ಥೆ. ಅನುಮತಿ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಮಾಹಿತಿಯ ಗೌಪ್ಯತೆಯನ್ನು ಅದು ಕಾಪಾಡಿಕೊಳ್ಳಬೇಕು. ಹೀಗಿರುವಾಗ ಆ ಮಾಹಿತಿಗಳನ್ನು ಸಂಬಂಧವೇ ಇಲ್ಲದವರೊಂದಿಗೆ ಹಂಚಿಕೊಂಡದ್ದು ಹೇಗೆ' ಎಂದೂ ರಾಜ್ಯಪಾಲರು ಪ್ರಶ್ನಿಸಿದ್ದಾರೆ.

Read More
Next Story