Dharmasthala Case: Witness and Complainant Appear in Court for Confession Statement
x

ದೂರುದಾರನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 

ಧರ್ಮಸ್ಥಳ ಪ್ರಕರಣ: ತಪ್ಪೊಪ್ಪಿಗೆ ಹೇಳಿಕೆಗಾಗಿ ಸಾಕ್ಷಿ ದೂರುದಾರ ನ್ಯಾಯಾಲಯಕ್ಕೆ ಹಾಜರು

ಶಿವಮೊಗ್ಗ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿ ಸ್ವಯಂಪ್ರೇರಿತ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಕರೆತರಲಾಗಿತ್ತು.


Click the Play button to hear this message in audio format

ಇಡೀ ರಾಜ್ಯವನ್ನೇ ತಲ್ಲಣಗೊಳಿಸಿರುವ ಧರ್ಮಸ್ಥಳದ ಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡದಿಂದ (SIT) ಬಂಧನಕ್ಕೊಳಗಾಗಿರುವ ಸಾಕ್ಷಿ ದೂರುದಾರನನ್ನು ಮಂಗಳವಾರ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಶಿವಮೊಗ್ಗ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 183ರ ಅಡಿ ಸ್ವಯಂಪ್ರೇರಿತ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ತಾನೇ ಹೂತು ಹಾಕಿರುವುದಾಗಿ ಆರೋಪಿಸಿದ್ದ ಈತ, ಅದಕ್ಕೆ ಸಾಕ್ಷಿಯಾಗಿ ತಲೆಬುರುಡೆಯೊಂದನ್ನು ಪೊಲೀಸರಿಗೆ ಒಪ್ಪಿಸಿದ್ದ. ಆದರೆ, ಎಸ್‌ಐಟಿ ತನಿಖೆ ಆರಂಭವಾದಾಗ, ‘ತಾನು ಹೂತಿದ್ದ ಮೃತದೇಹದ ಅವಶೇಷ ಇದಲ್ಲ’ ಎಂದು ಹೇಳಿಕೆ ಬದಲಿಸಿದ್ದ. ಅಲ್ಲದೆ, ತಲೆಬುರುಡೆಯನ್ನು ಹೊರತೆಗೆದ ಜಾಗವನ್ನು ತೋರಿಸಲು ಕೂಡ ವಿಫಲನಾಗಿದ್ದ.

ತನಿಖೆಯ ದಾರಿ ತಪ್ಪಿಸಿದ ಮತ್ತು ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಎಸ್‌ಐಟಿ ಅಧಿಕಾರಿಗಳು ಆಗಸ್ಟ್ 23 ರಂದು ಆತನನ್ನು ಬಂಧಿಸಿದ್ದರು. ನಂತರ, ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಸೆಪ್ಟೆಂಬರ್ 18 ರಂದು ಕೂಡ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತಾದರೂ, ಅಂದು ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ ಮಂಗಳವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನ ತಪ್ಪೊಪ್ಪಿಗೆ ಹೇಳಿಕೆಯು ಪ್ರಕರಣದ ತನಿಖೆಗೆ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.

Read More
Next Story