ಧರ್ಮಸ್ಥಳ  ಪ್ರಕರಣ: ಯೂಟ್ಯೂಬರ್‌ಗಳ ವಿರುದ್ಧ ದೂರು
x

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್‌ಗಳ ವಿರುದ್ಧ ದೂರು

ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿ ರಕ್ಷಣೆ ಪಡೆಯುತ್ತಿದ್ದ ಚಿನ್ನಯ್ಯನನ್ನು ಕಾನೂನು ಬಾಹಿರವಾಗಿ ಸಂದರ್ಶನ ನಡೆಸಲಾಗಿದೆ ಎಂದು ಪ್ರಶಾಂತ್ ಸಂಬರಗಿ ದೂರು ನೀಡಿದ್ದಾರೆ.


Click the Play button to hear this message in audio format

ಧರ್ಮಸ್ಥಳದ ಪ್ರಕರಣದಲ್ಲಿ ಕೆಲವು ಯೂಟ್ಯೂಬರ್‌ಗಳು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಿಂದೂ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರು ವಿಶೇಷ ತನಿಖಾ ದಳ (ಎಸ್‌ಐಟಿ) ಗೆ ದೂರು ಸಲ್ಲಿಸಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ಇಲ್ಲದೆ ಹಲವು ಯೂಟ್ಯೂಬ್ ಚಾನೆಲ್‌ಗಳು ಸುದ್ದಿ ಹಾಗೂ ಸುಳ್ಳು ಸುದ್ದಿಗಳನ್ನು ಬಿತ್ತರಿಸಿವೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಪ್ರೊಟೆಕ್ಟೆಡ್ ವಿಟ್ನೆಸ್ ಸ್ಕೀಮ್ ಅಡಿಯಲ್ಲಿ ರಕ್ಷಣೆ ಪಡೆಯುತ್ತಿದ್ದ ಭೀಮನನ್ನು ಕಾನೂನು ಬಾಹಿರವಾಗಿ ಸಂದರ್ಶನ ನಡೆಸಲಾಗಿದೆ. ಈ ಸಂದರ್ಶನ ದೂರು ದಾಖಲಾಗುವ ಮೊದಲು, ನಂತರ ಅಥವಾ ಆರೋಪಿ ಆದ ನಂತರ ನಡೆಸಲಾಗಿದ್ದು, ಇದು ಸ್ಪಷ್ಟ ಅಪರಾಧವೆಂದು ಸಂಬರಗಿ ಹೇಳಿದ್ದಾರೆ.

ಯೂಟ್ಯೂಬರ್‌ಗಳ ಹಣಕಾಸು ಮೂಲಗಳ ಮೇಲೂ ತನಿಖೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸಂಬರಗಿ ಅವರ ದೂರುವನ್ನು ಎಸ್‌ಐಟಿ ಅಧಿಕಾರಿ ಸೈಮನ್ ಸ್ವೀಕರಿಸಿ ಹಿಂಬರಹ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Read More
Next Story