ಧರ್ಮಸ್ಥಳ ಪ್ರಕರಣ| ಚಿನ್ನಯ್ಯ, ಮಟ್ಟಣ್ಣವರ್‌, ತಿಮರೋಡಿ ಸೇರಿ ಆರು ಮಂದಿ ಮೇಲೆ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ
x

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಆರು ಮಂದಿ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ  ತನಿಖಾ ವರದಿ ಸಲ್ಲಿಸಿದೆ. 

ಧರ್ಮಸ್ಥಳ ಪ್ರಕರಣ| ಚಿನ್ನಯ್ಯ, ಮಟ್ಟಣ್ಣವರ್‌, ತಿಮರೋಡಿ ಸೇರಿ ಆರು ಮಂದಿ ಮೇಲೆ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ

ನ್ಯಾಯಾಧೀಶ ಹೆಚ್‌.ಟಿ. ವಿಜಯೇಂದ್ರ ಅವರ ಪೀಠದ ಮುಂದೆ ಈ ತನಿಖಾ ವರದಿಯನ್ನು ಸಲ್ಲಿಸಲಾಗಿದೆ. ಇನ್ನು ಒಂದು ತಿಂಗಳ ಬಳಿಕ ಆರೋಪ ಪಟ್ಟಿಯನ್ನೂ ಎಸ್‌ಐಟಿ ಸಲ್ಲಿಸಲಿದೆ.


Click the Play button to hear this message in audio format

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಎಸ್‌ಐಟಿಯು ಬೆಳ್ತಂಗಡಿ ಕೋರ್ಟ್‌ಗೆ ತನ್ನ 3,923 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿದೆ. ರಾಜ್ಯ ಸರ್ಕಾರಕ್ಕೂ ಈ ತನಿಖಾ ವರದಿಯನ್ನು ಸಲ್ಲಿಸಲು ಎಸ್‌ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್‌ ಮೊಹಾಂತಿ ಸಿದ್ಧತೆ ನಡೆಸುತ್ತಿದ್ದಾರೆ.

ತನಿಖಾಧಿಕಾರಿ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಒಟ್ಟು 3,923 ಪುಟಗಳ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. 5 ತಿಂಗಳ ಬಳಿಕ ತನಿಖಾ ವರದಿ ಸಲ್ಲಿಕೆ ಮಾಡಲಾಗಿದೆ. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವ‌ರ್, ಸುಜಾತಾ ಭಟ್, ಜಯಂತ್‌ ಟಿ, ವಿಠಲ್‌ ಗೌಡ ಸೇರಿ ಒಟ್ಟು 6 ಮಂದಿ ವಿರುದ್ಧ ತನಿಖಾ ವರದಿಯನ್ನು ಬೆಳ್ತಂಗಡಿಯ ಜೆಎಂಎಫ್‌ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಲಾಗಿದೆ. BNSS 215ರ ಅಡಿಯಲ್ಲಿ ಸುಳ್ಳು ಸಾಕ್ಷ್ಯದ ಕುರಿತ ಪ್ರಕರಣದ ತನಿಖಾ ವರದಿಯಾಗಿದ್ದು, ಸುಮಾರು 3,923 ಸಾವಿರ ಪುಟಗಳ ವರದಿ ಇದಾಗಿದೆ ಎಂದು ತಿಳಿದುಬಂದಿದೆ.

ನ್ಯಾಯಾಧೀಶ ಹೆಚ್‌.ಟಿ. ವಿಜಯೇಂದ್ರ ಅವರ ಪೀಠದ ಮುಂದೆ ಈ ತನಿಖಾ ವರದಿಯನ್ನು ಸಲ್ಲಿಸಲಾಗಿದೆ. ಇನ್ನು ಒಂದು ತಿಂಗಳ ಬಳಿಕ ಆರೋಪ ಪಟ್ಟಿಯನ್ನೂ ಎಸ್‌ಐಟಿ ಸಲ್ಲಿಸಲಿದೆ.

ಎಸ್‌ಐಟಿ ರಚನೆಯ ಹಿನ್ನೆಲೆ

ಕೆಲವು ತಿಂಗಳ ಹಿಂದೆ, ವ್ಯಕ್ತಿಯೊಬ್ಬ ತಾನು ಆ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿದ್ದ. ಈ ಆಘಾತಕಾರಿ ವಿಷಯವನ್ನು ಆಧರಿಸಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು 2025ರ ಜುಲೈ 4 ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಕಳೆದ ಎರಡು ದಶಕಗಳಲ್ಲಿ ನಡೆದ ಮಹಿಳೆಯರ ನಾಪತ್ತೆ, ಅಸಹಜ ಸಾವು, ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ಒತ್ತಾಯಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು.

ಎಸ್‌ಐಟಿ ತನಿಖೆಯು ಕೇವಲ ದೂರುದಾರನ ಹೇಳಿಕೆ ಮತ್ತು 'ತಲೆಬುರುಡೆ-ಮೂಳೆಗಳ' ಸುತ್ತಲಿನ ಮಾಧ್ಯಮ ಪ್ರಚಾರಕ್ಕೆ ಸೀಮಿತವಾದಂತೆ ಕಾಣುತ್ತಿದೆ ಎಂದು ಮಹಿಳಾ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಇದರಿಂದಾಗಿ ಮೂಲ ಉದ್ದೇಶವಾದ ಮಹಿಳೆಯರ ಮೇಲಿನ ದೌರ್ಜನ್ಯಗಳ ತನಿಖೆ ದಾರಿ ತಪ್ಪುತ್ತಿದೆ ಎಂದು ಸಂಘಟನೆಗಳು ಆತಂಕ ಹೊರಹಾಕಿವೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದ ಪ್ರಕರಣವು ನಾಟಕೀಯ ತಿರುವು ಪಡೆದಿತ್ತು. ಪ್ರಕರಣದ ಮಹತ್ವಕ್ಕೆ ಪ್ರಮುಖ ಕಾರಣನಾಗಿದ್ದ, ಮುಸುಕುಧಾರಿ ಚಿನ್ನಯ್ಯ ಎಂಬ ವ್ಯಕ್ತಿಯನ್ನು ವಿಶೇಷ ತನಿಖಾ ದಳ (SIT) ಪ್ರಥಮ ಆರೋಪಿ (A-1) ಎಂದು ತನಿಖಾ ವರದಿಯಲ್ಲಿ ಹೆಸರಿಸಲಾಗಿದೆ. ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ, ತನಿಖೆಯ ದಿಕ್ಕು ತಪ್ಪಿಸಿದ ಆರೋಪದ ಮೇಲೆ ಆತನ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆಯ (BNS) 10 ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ಕೇಂದ್ರಬಿಂದುವಾಗಿದ್ದ ತಲೆಬುರುಡೆಯ ವಿಚಾರದಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಚಿನ್ನಯ್ಯ ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆಯನ್ನು ತೆಗೆದ ಸ್ಥಳದ ಮಹಜರು ಪ್ರಕ್ರಿಯೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಾಗೂ ಈತ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ, ತನಿಖಾ ತಂಡ ಈ ಕ್ರಮ ಕೈಗೊಂಡಿದೆ. ಈ ಹಿಂದೆ ನ್ಯಾಯಾಧೀಶರ ಮುಂದೆ ಸೆಕ್ಷನ್ 164ರ ಅಡಿ ನೀಡಿದ್ದ ಹೇಳಿಕೆಗೆ ಸಂಪೂರ್ಣ ವ್ಯತಿರಿಕ್ತವಾದ ಹೇಳಿಕೆಯನ್ನು ಭೀಮ ಇದೀಗ ಎಸ್‌ಐಟಿ ಮುಂದೆ ನೀಡಿದ್ದಾನೆ. ಈ ಹೇಳಿಕೆಯನ್ನು ಸಹ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದು, ಅದರ ಆಧಾರದ ಮೇಲೆ ತನಿಖೆ ವರದಿ ಸಿದ್ಧಪಡಿಸಲಾಗಿತ್ತು.

Read More
Next Story