Dengue Outbreak | ರಾಜ್ಯದಲ್ಲಿ ಈ ಬಾರಿ ದಶಕದಲ್ಲೇ ದಾಖಲೆ ಪ್ರಕರಣ!
x
ಡೆಂಗ್ಯೂ ಪ್ರಕರಣ

Dengue Outbreak | ರಾಜ್ಯದಲ್ಲಿ ಈ ಬಾರಿ ದಶಕದಲ್ಲೇ ದಾಖಲೆ ಪ್ರಕರಣ!

ರಾಜ್ಯದಲ್ಲಿ ಈ ಬಾರಿ ದಶಕದಲ್ಲೇ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಬೆಂಗಳೂರು ಡೆಂಗ್ಯೂ ಹಾಟ್ಸ್ಟಾಟ್ ಆಗಿ ಹೊರಹೊಮ್ಮುತ್ತಿದೆ.


ರಾಜ್ಯದಲ್ಲಿ ಈ ವರ್ಷ ಡೆಂಗ್ಯೂ ಉಲ್ಬಣಗೊಂಡಿದ್ದು, ದಶಕದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಬೆಂಗಳೂರು ನಗರ ಡೆಂಗ್ಯೂ ಪ್ರಕರಣಕ್ಕೆ ಹಾಟ್‌ಸ್ಟಾಟ್‌ ಆಗಿ ಹೊರಹೊಮ್ಮಿದೆ.

ರಾಜ್ಯದಲ್ಲಿ ಆಗಸ್ಟ್ 12 ರವರೆಗೆ 22,442 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದು 2023 ರಲ್ಲಿ ವರದಿಯಾದ 19,300 ಸೋಂಕುಗಳ 10 ವರ್ಷಗಳ ಗರಿಷ್ಠ ಪ್ರಮಾಣವನ್ನು ಮೀರಿಸಿದೆ. ರಾಜ್ಯದಲ್ಲಿಈ ವರ್ಷ 10 ಮಂದಿ ಡೆಂಗ್ಯೂಗೆ ಬಲಿಯಾಗಿದ್ದಾರೆ.

ಬಿಬಿಎಂಪಿ ಪ್ರದೇಶಗಳಲ್ಲಿ 10,175 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದ ಒಟ್ಟು ಶೇ.46ದಷ್ಟಿದೆ. ರಾಜ್ಯದಲ್ಲಿ ಈ ವರ್ಷದ ಒಟ್ಟು ದೃಢ ಪ್ರಕರಣಗಳ ಸಂಖ್ಯೆ 2023 ರಲ್ಲಿ 10 ವರ್ಷಗಳ ಗರಿಷ್ಠ ಪ್ರಮಾಣವಾಗಿದ್ದ 11,136 ಪ್ರಕರಣಗಳ ದಾಖಲೆಯನ್ನೂ ಹಿಂದಿಕ್ಕಿದೆ. ಜನನಿಬಿಡ ಪ್ರದೇಶಗಳಲ್ಲಿ ಸೊಳ್ಳೆಗಳಿಂದ ಹರಡುವ ರೋಗವನ್ನು ಎದುರಿಸುವಲ್ಲಿ ಅಧಿಕಾರಿಗಳು ಎದುರಿಸುತ್ತಿರುವ ಸವಾಲು ದೊಡ್ಡದಿದೆ ಎಂಬುದನ್ನು ಈ ಅಂಕಿಅಂಶಗಳು ಎತ್ತಿ ತೋರಿಸಿವೆ.

ಡೆಂಗ್ಯೂ ದೈನಂದಿನ ಪ್ರಕರಣಗಳು ದಿನಕ್ಕೆ 200 ರಿಂದ 100 ಕ್ಕೆ ಇಳಿದಿವೆ. ದೈನಂದಿನ ಪ್ರಕರಣಗಳು ಕಡಿಮೆಯಾಗಿದ್ದು, ನಾವು ಇನ್ನೂ ಡೆಂಗ್ಯೂ ಸಂಪೂರ್ಣವಾಗಿ ತಡೆಗಟ್ಟಲು ಫಾಗಿಂಗ್ ಮತ್ತು ದುರ್ಬಲ ಪ್ರದೇಶಗಳಿಗೆ ನಿಯಮಿತ ಭೇಟಿ ನೀಡುತ್ತಿದ್ದೇವೆ. ಸೊಳ್ಳೆಗಳ ಸಂತಾನವೃದ್ಧಿ ತಾಣಗಳು ವೃದ್ಧಿಯಾಗುತ್ತಲೇ ಇವೆ. ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಜನರು ಇರಬೇಕಾದಷ್ಟು ಜಾಗರೂಕರಾಗಿಲ್ಲ. ನಾವು ಪ್ರತ್ಯೇಕ ಮನೆಗಳಲ್ಲಿ ಸರಾಸರಿ 5-6 ಸಂತಾನೋತ್ಪತ್ತಿ ತಾಣಗಳನ್ನು ಕಂಡು ಹಿಡಿದಿದ್ದೇವೆ. ಇದು ತುಂಬಾ ಆತಂಕಕಾರಿಯಾಗಿದೆ ಎಂದು ಬಿಬಿಎಂಪಿ ಆರೋಗ್ಯ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.

2014 ರಲ್ಲಿ ರಾಜ್ಯವು 13,340 ಜನರನ್ನು ಡೆಂಗ್ಯೂ ಪರೀಕ್ಷಗೆ ಒಳಪಡಿಸಿತ್ತು. 2024 ರಲ್ಲಿ ಆಗಸ್ಟ್ ಮಧ್ಯದ ವೇಳೆಗೆ ರಾಜ್ಯದಲ್ಲಿ 1,57,120 ಪರೀಕ್ಷೆಗಳನ್ನು ನಡೆಸಲಾಗಿದೆ. 2023 ರಲ್ಲಿ ಮೊದಲ ಬಾರಿಗೆ ಪರೀಕ್ಷೆಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿ, 1,55,392 ತಲುಪಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ 2014ರಲ್ಲಿ ಕೇವಲ 856 ಪರೀಕ್ಷೆಗಳು ನಡೆದಿದ್ದು, ಈ ವರ್ಷ ಆಗಸ್ಟ್ 18ರವರೆಗೆ 47,718 ಪರೀಕ್ಷೆಗಳು ನಡೆದಿವೆ ಎಂದು ʼಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿದೆ.

Read More
Next Story