Demand to Allow Deepa Bhasti for Dasara Inauguration
x
ಬೂಕರ್‌ ಪ್ರಶಸ್ತಿ ವಿಜೇತರಾದ ಅನುವಾದಕಿ ದೀಪಾ ಭಾಸ್ತಿ ಹಾಗೂ ಕವಯಿತ್ರಿ ಬಾನು ಮುಷ್ತಾಕ್‌

ದಸರಾ ಉದ್ಘಾಟನೆಗೆ ದೀಪಾ ಭಾಸ್ತಿಗೂ ಅವಕಾಶ ನೀಡಲು ಒತ್ತಾಯ

ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಆಕ್ಷೇಪಿಸಿರುವ ಬಿಜೆಪಿ, "ಹಿಂದೂ ಧರ್ಮದ ನಂಬಿಕೆಗಳನ್ನು ಒಪ್ಪದವರಿಗೆ ನಾಡಹಬ್ಬ ಉದ್ಘಾಟಿಸುವ ಗೌರವ ನೀಡುವುದು ಹಾಸ್ಯಾಸ್ಪದ" ಎಂದಿದೆ.


ಮುಂಬರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರನ್ನಾಗಿ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಈ ಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆಯ್ಕೆಯನ್ನು ಸಮರ್ಥಿಸಿಕೊಂಡಿರುವ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಆಕ್ಷೇಪಿಸಿರುವ ಬಿಜೆಪಿ, "ಹಿಂದೂ ಧರ್ಮದ ನಂಬಿಕೆಗಳನ್ನು ಒಪ್ಪದವರಿಗೆ ನಾಡಹಬ್ಬ ಉದ್ಘಾಟಿಸುವ ಗೌರವ ನೀಡುವುದು ಹಾಸ್ಯಾಸ್ಪದ" ಎಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, "ಬಾನು ಮುಷ್ತಾಕ್ ಹಾಗೂ ಕೊಡಗಿನ ದೀಪಾ ಭಾಸ್ತಿ ಇಬ್ಬರಿಗೂ ಸೇರಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ. ಇಬ್ಬರನ್ನೂ ಕರೆಯಲು ಮುಖ್ಯಮಂತ್ರಿಗಳಿಗೆ ಏಕೆ ಅನಿಸಲಿಲ್ಲ?" ಎಂದು ಪ್ರಶ್ನಿಸಿದ್ದಾರೆ.

ಇದೇ ಧ್ವನಿಯಲ್ಲಿ ಮಾತನಾಡಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಶಸ್ತಿಯೇ ಮಾನದಂಡವಾದರೆ, ಪ್ರಶಸ್ತಿ ಹಂಚಿಕೊಂಡಿರುವ ದೀಪಾ ಭಾಸ್ತಿ ಅವರಿಗೂ ಸಮಾನ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರದಿಂದ ಬಲವಾದ ಸಮರ್ಥನೆ

ವಿರೋಧ ಪಕ್ಷಗಳ ಟೀಕೆಗಳನ್ನು ತಳ್ಳಿಹಾಕಿರುವ ಸರ್ಕಾರ, ತನ್ನ ಆಯ್ಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, "ಹಿಂದೆ ಖ್ಯಾತ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರು ದಸರಾ ಉದ್ಘಾಟನೆ ಮಾಡಿರಲಿಲ್ಲವೇ? ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿ ದಸರಾ ನಡೆಸಿಲ್ಲವೇ?" ಎಂದು ಐತಿಹಾಸಿಕ ಉದಾಹರಣೆಗಳನ್ನು ನೀಡಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

Read More
Next Story