ಮಂಡ್ಯ ಸಾಹಿತ್ಯ ಸಮ್ಮೇಳನ | ಕರ್ಚು- ವೆಚ್ಚಗಳ ಸೋಷಿಯಲ್ ಆಡಿಟ್: ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ
x
ಮಂಡ್ಯ ಸಾಹಿತ್ಯ ಸಮ್ಮೇಳನ

ಮಂಡ್ಯ ಸಾಹಿತ್ಯ ಸಮ್ಮೇಳನ | ಕರ್ಚು- ವೆಚ್ಚಗಳ ಸೋಷಿಯಲ್ ಆಡಿಟ್: ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ


Click the Play button to hear this message in audio format

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕರ್ಚು-ವೆಚ್ಚಗಳ ಸೋಷಿಯಲ್ ಆಡಿಟ್ ಆಗಬೇಕೆಂದು ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಸಮ್ಮೇಳನಕ್ಕೆ ಮುನ್ನವೇ ಈ ಬೇಡಿಕೆಯನ್ನು ಮುಂದಿಟ್ಟಿದ್ದ ಮಂಡ್ಯ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಇದೀಗ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ಚು ವೆಚ್ಚಗಳ ಕುರಿತಾಗಿ ಸೋಷಿಯಲ್ ಆಡಿಟ್ ಸೇರಿದಂತೆ ವಿವಿಧ ತೊಡಕುಗಳ ಬಗ್ಗೆ ದನಿ ಎತ್ತಿದೆ.

ಅಖಿಲ ಭಾರತ ಕರ್ನಾಟಕದ ಸಾಹಿತ್ಯ ಸಮ್ಮೇಳನದ ಎಲ್ಲ ವ್ಯವಹಾರಗಳು ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿರಬೇಕೆಂಬ ಕಾರಣದಿಂದ ಸಮ್ಮೇಳನ ಸಮಸ್ತ ಕರ್ಚು ವೆಚ್ಚಗಳ ಸೋಷಿಯಲ್‌ ಆಡಿಟ್‌ ಅನ್ನು ಕಡ್ಡಾಯವಾಗಿಸಬೇಕೆಂದು ಒಕ್ಕೂಟವು ಬೇಡಿಕೆ ಇಟ್ಟಿದೆ.

ಅಧ್ಯಕ್ಷರ ಸರ್ವಾಧಿಕಾರಿ ವರ್ತನೆ

ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿಧನರಾಗಿರುವ ಕಾರಣ ಆ ಜಾಗಕ್ಕೆ ಪ್ರಭಾರಿ ಅಧ್ಯಕ್ಷರ ಆಯ್ಕೆಯಾಗದೇ, ಆ ಸ್ಥಾನದ ಅನುಪಸ್ಥಿತಿಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರು ಸಮ್ಮೇಳನ ನಡೆಸಿದ್ದಾರೆ. ಈ ಸಮ್ಮೇಳನವು ಸಂಪೂರ್ಣವಾಗಿ ಬೆಂಗಳೂರು ಕೇಂದ್ರಿತವಾಗಿದ್ದು, ಸದರಿ ಕೇಂದ್ರ ಸಾಹಿತ್ಯ ಅಧ್ಯಕ್ಷರಾದ ಮಹೇಶ್ ಜೋಷಿ ಅವರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದು ಈಗಾಗಲೇ ಸಾರ್ವಜನಿಕರ ಗಮನಕ್ಕೆ ಬಂದಿದೆ ಎಂದು ಒಕ್ಕೂಟ ಹೇಳಿದೆ.

ಅಲ್ಲದೆ ಸಮ್ಮೇಳನ ಜಾಗ, ಅಧ್ಯಕ್ಷತೆ, ಪುಸ್ತಕ ಪ್ರಕಟಣೆ, ಗೋಷ್ಠಿಗಳು ಇತ್ಯಾದಿಯಾಗಿ ಎಲ್ಲದರಲ್ಲೂ ಬೆಂಗಳೂರಿನ ಕೇಂದ್ರ ಘಟಕವೇ ಆಕ್ರಮಿಸಿಕೊಂಡಿತ್ತು. ಆತಿಥೇಯ ಮಂಡ್ಯವು ಸಮರ್ಥ ಪ್ರತಿನಿಧಿಗಳಿಲ್ಲದೇ ನಗಣ್ಯವಾಗಿತ್ತು. ಕೂಡಲೇ ಈ ಕುರಿತು ಕ್ರಮವಹಿಸಿ ಸಮ್ಮೇಳನದ ಜವಾಬ್ದಾರಿಗಳು ಮತ್ತು ಅಧಿಕಾರಗಳು ವಿಕೇಂದ್ರೀಕರಣಗೊಳ್ಳಬೇಕು ಎಂದು ಒಕ್ಕೂಟ ಈ ಹಿಂದೆಯೇ ಆಗ್ರಹಿಹಿಸಿತ್ತು.

ಸಾಹಿತ್ಯೇತರರು ಅಧ್ಯಕ್ಷತೆ ವಹಿಸುವುದಕ್ಕೆ ವಿರೋಧ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿಯೇ ವಹಿಸಬೇಕು ಪರಂತು ಅನ್ಯರಲ್ಲ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಈ ವಿಚಾರದಲ್ಲಿ ಅನಗತ್ಯ ವಿವಾದಗಳನ್ನುಂಟು ಮಾಡುತ್ತಿದ್ದಾರೆ. ಆದರೆ ಮಂಡ್ಯ ಜನರು, ಸಾಹಿತಿಗಳು, ಸಹೃದಯರ ಪರವಾಗಿ ನಾವು "ಸಾಹಿತ್ಯೇತರರು ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಮತ್ತು ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲʼʼ ಇದು ನಮ್ಮ‌ ಊರಿನ ಸಾಹಿತ್ಯ ಸಮ್ಮೇಳನ. ಅದು ಸಾಹಿತ್ಯ ಸಮ್ಮೇಳನವಾಗಿಯೇ ನಡೆಯಬೇಕು" ಎಂದು ಒಕ್ಕೂಟ ಆಗ್ರಹಿಸಿತ್ತು.

ಇದೀಗ ಸಮ್ಮೇಳನ ಮುಗಿದಿದ್ದು, ಸಮ್ಮೇಳನದ ಕರ್ಚುವೆಚ್ಚಗಳ ಕುರಿತು ಸಾರ್ವಜನಿಕವಾಗಿ ಅನುಮಾನಗಳು ವ್ಯಕ್ತವಾಗಿರುವುದರಿಂದ ಮತ್ತು ಸಾರ್ವಜನಿಕ ತೆರಿಗೆ ಹಣ ಸಮ್ಮೇಳನಕ್ಕೆ ಬಳಕೆಯಾಗಿರುವುದರಿಂದ ಎಲ್ಲಾ ಕರ್ಚುವೆಚ್ಚಗಳ ಸೋಷಿಯಲ್‌ ಆಡಿಟ್‌ ಆಗಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

Read More
Next Story