
ಬೆಂಗಳೂರು ಪೊಲೀಸರು ವಶಪಡಿಸಿಕೊಂಡ ಕೈಗಡಿಯಾರಗಳು
ಬೆಂಗಳೂರಿನಲ್ಲಿ 10 ಲಕ್ಷ ರೂ. ಮೌಲ್ಯದ ಕೈಗಡಿಯಾರ ಕದ್ದ ಡೆಲಿವರಿ ಬಾಯ್ ಬಂಧನ
ಎಫ್‌ಐಆರ್ ದಾಖಲಿಸುವ 15 ದಿನಗಳ ಮೊದಲು ಯಾವುದೇ ಸೂಚನೆ ನೀಡದೆ ಇದ್ದಕ್ಕಿದ್ದಂತೆ ಶೇಷಾದ್ರಿ ರೆಡ್ಡಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಸಂಸ್ಥೆಯ ಮಾಲೀಕರಿಗೆ ಇವರ ಮೇಲೆ ಅನುಮಾನ ಬಂದಿತ್ತು.
ಬೆಲೆ ಬಾಳುವ ಕೈಗಡಿಯಾರಗಳನ್ನು ಕದ್ದ ಆರೋಪದ ಮೇಲೆ ಡೆಲಿವರ್ ಬಾಯ್ ನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ತನ್ನ ಮಾಲೀಕನಿಗೆ ಸೇರಿದ್ದ 10 ಲಕ್ಷ ರೂ. ಮೌಲ್ಯದ 70ಕ್ಕೂ ಹೆಚ್ಚು ಕೈಗಡಿಯಾರಗಳನ್ನು ಡೆಲಿವರಿ ಸಮಯದಲ್ಲಿ ಕದ್ದಿದ್ದ ಪೊಲೀಸರು ತಿಳಿಸಿದ್ದಾರೆ.
ಕೈ ಗಡಿಯಾರಗಳು ಕಳ್ಳತನವಾಗಿರುವ ಕುರಿತು ಕ್ರಿಟಿಕಲ್ ಲಾಜಿಸ್ಟಿಕ್ಸ್ ಉದ್ಯೋಗಿಯೊಬ್ಬರು ಸೆ. 7 ರಂದು ಹೊಂಗಸಂದ್ರದ ಡೆಲಿವರಿ ಬಾಯ್ ಶೇಷಾದ್ರಿ ರೆಡ್ಡಿ (27) ವಿರುದ್ಧ ದೂರು ನೀಡಿದ್ದರು. ಮಾರಾಟಗಾರರಿಂದ ಸಂಸ್ಥೆಗೆ ಕೈಗಡಿಯಾರಗಳನ್ನು ಸಾಗಿಸುವುದು ಈತನ ಕೆಲಸವಾಗಿತ್ತು. ಆದರೆ, ಈತ ಕೈಗಡಿಯಾರಗಳನ್ನು ಕಳ್ಳತನ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳಿಂದ ಈ ಕೃತ್ಯ ದೃಢಪಟ್ಟಿದೆ.
ಎಫ್‌ಐಆರ್ ದಾಖಲಿಸುವ 15 ದಿನಗಳ ಮೊದಲು ಯಾವುದೇ ಸೂಚನೆ ನೀಡದೇ ಇದ್ದಕ್ಕಿದ್ದಂತೆ ಶೇಷಾದ್ರಿ ರೆಡ್ಡಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಸಂಸ್ಥೆಯ ಮಾಲೀಕರ ಮೇಲೆ ಅನುಮಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಆಂಧ್ರಪ್ರದೇಶ ಮೂಲದ ರೆಡ್ಡಿ ಅವರನ್ನು ಕುಡ್ಲುಗೇಟ್ ಬಳಿ ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆ ನಡೆಸಿದಾಗ ಆತ ಕಳ್ಳತನ ಮಾಡಿರುವುದನ್ನು ಬೆಳಕಿಗೆ ಬಂದಿದೆ.
ಪೊಲೀಸರು ಶೇಷಾದ್ರಿ ರೆಡ್ಡಿಯಿಂದ ಫಾಸಿಲ್, ಎಂಪೋರಿಯೊ ಅರ್ಮಾನಿ ಮತ್ತು ಮೈಕೆಲ್ ಕೋರ್ಸ್ ಸೇರಿದಂತೆ ವಿವಿಧ ಬ್ರಾಂಡ್‌ಗಳ ಸುಮಾರು 10 ಲಕ್ಷ ರೂ. ಮೌಲ್ಯದ 70 ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.