ನವರಾತ್ರಿ ಹಿನ್ನೆಲೆ | ಶಾಲೆಗಳಿಗೆ ನಾಳೆಯಿಂದ ದಸರಾ ರಜೆ ಆರಂಭ
ಅ.21ರಿಂದ ಶಾಲೆಗಳು ಪುನರಾರಂಭವಾಲಿದ್ದು, 2025ರ ಏಪ್ರಿಲ್ 10 ರವರೆಗೆ ಶೈಕ್ಷಣಿಕ ವರ್ಷ ಇರಲಿದೆ.
ನವರಾತ್ರಿಯ ದಸರಾ ಹಿನ್ನೆಲೆಯಲ್ಲಿ ರಾಜ್ಯದ ಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅ.3 ರಿಂದ 20ರವರೆಗೆ ದಸರಾ ರಜೆ ಘೋಷಿಸಿದೆ.
ಅ. 2 ರಂದು ಗಾಂಧಿ ಜಯಂತಿ ಆಚರಣೆ ಮುಗಿದ ಬಳಿಕ ದಸರಾ ರಜೆಗಳು ಆರಂಭವಾಗಲಿವೆ. ಅ.21ರಿಂದ ಶಾಲೆಗಳು ಪುನರಾರಂಭ ಮಾಡಲಿದ್ದು, 2025ರ ಏಪ್ರಿಲ್ 10 ರವರೆಗೆ ಶೈಕ್ಷಣಿಕ ವರ್ಷ ಇರಲಿದೆ.
2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಿಸಿತ್ತು. ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ.
ಪ್ರಸಕ್ತ ಶೈಕ್ಷಣಿಕ ವರ್ಷವು ಮೇ 29ರಿಂದ ಆರಂಭವಾಗಿದ್ದು, ಮೊದಲ ಅವಧಿಯು ಅ. 2ರವರೆಗೆ ಇತ್ತು. ಸೆ. 23ರಿಂದ ಮಧ್ಯಂತರ ಪರೀಕ್ಷೆಗಳು ಶುರುವಾಗಿ ಸೆ. 30ರ ತನಕ ನಡೆದಿವೆ.
ಅಕ್ಟೋಬರ್ ತಿಂಗಳಲ್ಲಿ ಕೇವಲ 11 ದಿನಗಳು ಮಾತ್ರ ತರಗತಿ ನಡೆಯಲಿವೆ.
Next Story