Darshan Gun License | ದರ್ಶನ್‌ ಗನ್ ಲೈಸೆನ್ಸ್  ತಾತ್ಕಾಲಿಕ ರದ್ದು
x
ನಟ ದರ್ಶನ್‌

Darshan Gun License | ದರ್ಶನ್‌ ಗನ್ ಲೈಸೆನ್ಸ್ ತಾತ್ಕಾಲಿಕ ರದ್ದು

Darshan Gun License | ಆರ್.ಆರ್.ನಗರ ಪೊಲೀಸರಿಗೆ ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿದ್ದು ಕೊಲೆ ಕೇಸ್ ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಕೇಸ್ ಮುಗಿಯುವವರೆಗೆ ಗನ್ ಬಳಸುವ ಹಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ನಟ ದರ್ಶನ್ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತಾಗಿದೆ. ಹೀಗಾಗಿ ಗನ್ ಲೈಸೆನ್ಸ್ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದರೂ ಅವರಿಗೆ ನಿರಾಸೆಯುಂಟಾಗಿದೆ.

ಬಂದೂಕು ಪರವಾನಗಿ ರದ್ದುಗೊಳಿಸುವ ಸಂಬಂಧ ಬೆಂಗಳೂರು ಪೊಲೀಸ್‌ ಕಮಿಷನರೇಟ್‌ನ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹು ಜ.7ರಂದು ದರ್ಶನ್‌ಗೆ ನೋಟಿಸ್‌ ನೀಡಿದ್ದರು. ಈ ನೋಟಿಸ್‌ಗೆ ಉತ್ತರಿಸಿರುವ ದರ್ಶನ್‌ 'ನಾನು ಸೆಲೆಬ್ರಿಟಿ ಆಗಿರುವುದರಿಂದ ಹೋದ ಕಡೆಗಳಲ್ಲೆಲ್ಲ ಹೆಚ್ಚಿನ ಜನ ಸೇರುತ್ತಾರೆ. ಈ ವೇಳೆ ನನ್ನ ಆತ್ಮರಕ್ಷಣೆ ಬಹಳ ಮುಖ್ಯವಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡಿದ್ದರೂ ವೈಯಕ್ತಿಕ ರಕ್ಷಣೆಗಾಗಿ ಬಂದೂಕು ಪರವಾನಗಿ ಅವಶ್ಯಕತೆಯಿದೆ. ಹೀಗಾಗಿ, ಬಂದೂಕು ಪರವಾನಗಿ ರದ್ದು ಮಾಡಬಾರದು,' ಎಂದು ದರ್ಶನ್‌ ಮನವಿ ಮಾಡಿಕೊಂಡಿದ್ದರು.

'ನನ್ನ ವಿರುದ್ಧ ದಾಖಲಾದ ಪ್ರಕರಣದ ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಬಹುದು. ಅಂತಹ ತಪ್ಪು ಕೂಡ ನಾನು ಮಾಡುವುದಿಲ್ಲ,' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಪೊಲೀಸರು ದರ್ಶನ್‌ ಮನವಿಯನ್ನು ತಿರಸ್ಕರಿಸಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಗಿಯುವ ತನಕ ದರ್ಶನ್​​ಗೆ ಗನ್ ಬಳಸುವಂತಿಲ್ಲ ಎಂದು ಹೇಳಲಾಗಿದ್ದು, ಕೂಡಲೇ ಗನ್ ಸರೆಂಡರ್ ಮಾಡಲು ಸೂಚನೆ ಕೂಡಾ ನೀಡಲಾಗಿದೆ.

ಆರ್.ಆರ್.ನಗರ ಪೊಲೀಸರಿಗೆ ಗನ್ ಸರೆಂಡರ್ ಮಾಡಲು ಸೂಚನೆ ನೀಡಲಾಗಿದ್ದು ಕೊಲೆ ಕೇಸ್ ನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಕೇಸ್ ಮುಗಿಯುವ ತನಕ ಗನ್ ಬಳಸುವ ಹಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿ ಇತರೆ ಎಲ್ಲ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಪ್ರಕರಣದ ಸಾಕ್ಷಿಗಳಿಗೆ ದರ್ಶನ್‌ ಬೆದರಿಕೆ ಹಾಕುವ ಸಾಧ್ಯತೆ ಇದೆ. ಅಲ್ಲದೆ, ಅವರು ಶಸ್ತ್ರಾಸ್ತ್ರ ಪರವಾನಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಪೊಲೀಸರು ಅನುಮಾನಿಸಿ ನೋಟಿಸ್ ನೀಡಿದ್ದರು.

Read More
Next Story