ಚಿತ್ರರಂಗದಿಂದ ಕೊಲೆ ಆರೋಪಿ ದರ್ಶನ್ ಬ್ಯಾನ್ ಇಲ್ಲ!
x
ಫಿಲ್ಮ್ ಚೇಂಬರ್ ತುರ್ತುಸಭೆ ನಡೆಸಿತ್ತು.

ಚಿತ್ರರಂಗದಿಂದ ಕೊಲೆ ಆರೋಪಿ ದರ್ಶನ್ ಬ್ಯಾನ್ ಇಲ್ಲ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯ ಹೆಚ್ಚಿದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಫಿಲ್ಮ್ ಚೇಂಬರ್ ತುರ್ತುಸಭೆ ನಡೆಸಿತ್ತು.


Click the Play button to hear this message in audio format

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯ ಹೆಚ್ಚಿದ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ಫಿಲ್ಮ್ ಚೇಂಬರ್ ತುರ್ತುಸಭೆ ನಡೆಸಿ ಸದ್ಯಕ್ಕೆ ಬ್ಯಾನ್ ಮಾಡದಿರಲು ನಿರ್ಧರಿಸಿದೆ

ದರ್ಶನ್ ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ದರ್ಶನ್ ಕನ್ನಡ ಚಿತ್ರರಂಗದ ದೊಡ್ಡ ನಟ. ಬಹಿಷ್ಕಾರ ಕುರಿತಂತೆ ಸದ್ಯಕ್ಕೆ ಯಾವುದೇ ನಿರ್ಧಾರಕೈಗೊಂಡಿಲ್ಲ. ಆದರೆ ದರ್ಶನ್ ಎಸಗಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಆರೋಪ ಸಾಬೀತಾದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆಯನ್ನು ತೀವ್ರವಾಗಿ ಖಂಡಿಸುವ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೃತನ ಕುಟುಂಬಸ್ಥರ ಪರವಾಗಿ ನಿಂತಿದೆ. ಪ್ರಸ್ತುತ ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದೆ. ಹೀಗಾಗಿ ನಾಳೆ ಫಿಲ್ಮ್ ಚೇಂಬರ್ ನ ಪದಾಧಿಕಾರಿಗಳು ಚಿತ್ರದುರ್ಗಕ್ಕೆ ತೆರಳಿ ಕುಟುಂಸ್ಥರಿಗೆ ಸಾಂತ್ವನ ಹೇಳುವುದರ ಜೊತೆಗೆ ಕುಂದುಕೊರತೆಯನ್ನು ಆಲಿಸುತ್ತೇನೆ ಎಂದರು.

ಕೊಲೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಲ್ಲದೆ ದರ್ಶನ್​ ಅವರನ್ನು ರಕ್ಷಿಸುವ ಪ್ರಮೇಯವೆ ಇಲ್ಲ. ಕೊಲೆ ಎಂಬುದು ತುಂಬಾ ಸೂಕ್ಷ್ಮ ವಿಚಾರವಾಗಿದೆ. ಕಾನೂನಿನಡಿ ಪೊಲೀಸರು ತನಿಖೆ ನಡೆಸುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ದರ್ಶನ್​ ಅವರನ್ನು ಬ್ಯಾನ್​ ಮಾಡುವ ವಿಚಾರವನ್ನು ಕಲಾವಿದರ ಸಂಘ ಎಲ್ಲರೂ ಸೇರಿ ಚರ್ಚಿಸಿ, ಮುಂದಿನ ನಾಲ್ಕೈದು ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Read More
Next Story