Cauvery Water Dispute | ನಾಳೆಯಿಂದ ಜು.31 ರವರೆಗೆ ತಮಿಳುನಾಡಿಗೆ ನಿತ್ಯ 1 TMC ನೀರು ಬಿಡುಗಡೆಗೆ  ಆದೇಶ
x

Cauvery Water Dispute | ನಾಳೆಯಿಂದ ಜು.31 ರವರೆಗೆ ತಮಿಳುನಾಡಿಗೆ ನಿತ್ಯ 1 TMC ನೀರು ಬಿಡುಗಡೆಗೆ ಆದೇಶ


ನಾಳೆಯಿಂದ(ಜು.12) ಜಾರಿಗೆ ಬರುವಂತೆ ಜು.31ರ ವರೆಗೆ ತಮಿಳುನಾಡಿನ ಬಿಳಿಗುಂಡ್ಲು ಜಲಮಾಪನಾ ಕೇಂದ್ರದಲ್ಲಿ ದೈನಂದಿನ ನಿಗದಿತ ನೀರಿನ ಹರಿವು 1 TMC (ಸರಾಸರಿ 11,500 ಕ್ಯೂಸೆಕ್‌ ಹರಿವು) ಇರುವಂತೆ ಕರ್ನಾಟಕ ನದಿಗೆ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ.

ದೆಹಲಿಯಲ್ಲಿ ಗುರುವಾರ ನಡೆದ ಸಮಿತಿಯ 99ನೇ ಸಭೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ವಾದವನ್ನು ಆಲಿಸಿದ ಸಮಿತಿ, ಅಂತಿಮವಾಗಿ ಈ ನಿರ್ಧಾರಕ್ಕೆ ಬಂದಿದೆ.

ನೀರು ಬಿಡುಗಡೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25, 2024 ರವರೆಗೆ ಕಾಯುವುದು ಸೂಕ್ತವೆಂದು ಕರ್ನಾಟಕವು ವಾದಿಸಿತು. ಬಳಿಕ ಕರ್ನಾಟಕದ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ಪ್ರಾಧಿಕಾರವು ವಸ್ತುಸ್ಥಿತಿಯನ್ನು ಸಮಂಜಸವಾಗಿ ಪರಿಗಣಿಸಬಹುದು ಎಂದು ಕರ್ನಾಟಕ ವಾದಮಂಡನೆ ಮಾಡಿತು.

ದಿನಾಂಕ 01.06.2024 ರಿಂದ 09.07.2024 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಟ್ಟು ಒಳಹರಿವು 41.651 ಟಿ.ಎಂ.ಸಿ ಇರುತ್ತದೆ. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವಿನ ಕೊರತೆಯು 28.71% ಇರುತ್ತದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇರುತ್ತದೆ ಎಂಬ ಅಂಕಿ ಅಂಶಗಳನ್ನು ಕರ್ನಾಟಕ ಒದಗಿಸಿತು ಎಂದು ನೀರಾವರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಮಿಳುನಾಡು ಬೇಡಿಕೆ

ಹಿಂದಿನ ಜಲ ವರ್ಷದಲ್ಲಿ, ಫೆಬ್ರವರಿ 2024 ರಿಂದ ಮೇ 2024 ರ ಅವಧಿಗೆ ಕರ್ನಾಟಕವು ಸಹಜ ಹರಿವಿನ ನೀರನ್ನು ಬಿಡುಗಡೆ ಮಾಡಿರುವುದಿಲ್ಲ.ಪ್ರಸಕ್ತ ಜಲ ವರ್ಷದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು (Normal) ಮತ್ತು ಕರ್ನಾಟಕವು ಸಾಮಾನ್ಯ ಒಳಹರಿವನ್ನು ಪಡೆದಿದೆ. ಆದ್ದರಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಪಡಿಸಿದ CWDT ಆದೇಶದಂತೆ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಬೇಕು ಎಂದು ತಮಿಳುನಾಡು ವಾದಮಂಡಿಸಿತು.

Read More
Next Story