
ಬಿಗ್ ಬಾಸ್ ಕನ್ನಡ ಸೀಸನ್ ೧೨ ಕಿಚ್ಚ ಸುದೀಪ್
'Bigg boss Kannada' Season-12 | ಗ್ರ್ಯಾಂಡ್ ಓಪನಿಂಗ್‌ಗೆ ಕೌಂಟ್‌ಡೌನ್; ಸ್ಪರ್ಧಿಗಳ ಸಂಭಾವ್ಯ ಪಟ್ಟಿ ವೈರಲ್
ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಕ್ಷೇತ್ರಗಳ ತಾರೆಯರು, ಸಾಮಾಜಿಕ ಮಾಧ್ಯಮದ ಸ್ಟಾರ್‌ಗಳು ಮತ್ತು ಜನಸಾಮಾನ್ಯರು ಬಿಗ್ ಬಾಸ್ ಮನೆಯೊಳಗೆ ಹೆಜ್ಜೆ ಇಡುವ ನಿರೀಕ್ಷೆಇದೆ.
ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ -12' ರ ಗ್ರ್ಯಾಂಡ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
ಕನ್ನಡಿಗರ ಬಹುನಿರೀಕ್ಷಿತ ರಿಯಾಲಿಟಿ ಶೋ ಸೆಪ್ಟೆಂಬರ್ 28 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಹಿನ್ನೆಲೆಯಲ್ಲಿ ಮನೆಯೊಳಗೆ ಪ್ರವೇಶಿಸಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ, ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಕ್ಷೇತ್ರಗಳ ತಾರೆಯರು, ಸಾಮಾಜಿಕ ಮಾಧ್ಯಮದ ಸ್ಟಾರ್‌ಗಳು ಮತ್ತು ಜನಸಾಮಾನ್ಯರು ಬಿಗ್ ಬಾಸ್ ಮನೆಯೊಳಗೆ ಹೆಜ್ಜೆ ಇಡುವ ನಿರೀಕ್ಷೆಇದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಹರಿದಾಡುತ್ತಿದೆ.
ವೈರಲ್ ಆಗಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿ
ಧನುಷ್ (ನಟ): 'ಗೀತಾ' ಧಾರಾವಾಹಿಯ ನಾಯಕ ನಟ ಧನುಷ್ ಈ ಬಾರಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಿಯಾ ಸವದಿ: ಉತ್ತರ ಕರ್ನಾಟಕ ಪ್ರತಿಭೆ, ಯೂಟೂಬ್ ಶಾರ್ಟ್ ಫಿಲ್ಮ್‌ಗಳ ಮೂಲಕ ಫೇಮಸ್ ಆಗಿರುವ ಪ್ರಿಯಾ ಸವದಿ ಅವರು ದೊಡ್ಮನೆಗೆ ಬರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಸೂರಜ್: 'ಕಾಮಿಡಿ ಕಿಲಾಡಿಗಳು' ಸೇರಿದಂತೆ ವಿವಿಧ ಕಾಮಿಡಿ ಶೋಗಳ ಮೂಲಕ ಗಮನ ಸೆಳೆದ ಸೂರಜ್ ಕೂಡ ಈ ಬಾರಿ ಬಿಗ್ ಬಾಸ್‌ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.
ಸ್ಪಂದನಾ ಸೋಮಣ್ಣ: ಕನ್ನಡ ಮತ್ತು ತೆಲುಗು ಸಿನಿಮಾ ರಂಗದ ನಟಿ, 'ನಾನು ನನ್ನ ಕನಸು' ಖ್ಯಾತಿಯ ಸ್ಪಂದನಾ ಸೋಮಣ್ಣ ಅವರ ಹೆಸರೂ ಈ ಪಟ್ಟಿಯಲ್ಲಿದೆ.
ಸತೀಶ್: ದುಬಾರಿ ಶ್ವಾನಗಳನ್ನು ಸಾಕುವ ಮೂಲಕ ಫೇಮಸ್ ಆಗಿರುವ ಸತೀಶ್ ಅವರು ಬಿಗ್ ಬಾಸ್ ಸ್ಪರ್ಧಿ ಆಗುವ ಸಾಧ್ಯತೆ ಇದೆ.
ನಟ ಸಾಗರ್: 'ಸತ್ಯ' ಸೀರಿಯಲ್ ಹೀರೋ ನಟ ಸಾಗರ್ ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಶ್ವೇತಾ ಪ್ರಸಾದ್: ಕಿರುತೆರೆ ನಟಿ ಶ್ವೇತಾ ಪ್ರಸಾದ್ ಕೂಡ ಈ ಸಲ ಬಿಗ್ ಬಾಸ್ ಸ್ಪರ್ಧಿ ಆಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಹಾಸ್ಯ ನಟ ಕೆಂಪೇಗೌಡ: ಹಲವಾರು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಖ್ಯಾತಿ ಗಳಿಸಿರುವ ಕೆಂಪೇಗೌಡ ಅವರು ಬರಲಿದ್ದಾರೆ ಎನ್ನಲಾಗಿದೆ.
ಆದರೂ ಇದು ಕೇವಲ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದ್ದು, ಅಧಿಕೃತ ಸ್ಪರ್ಧಿಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅಂತಿಮವಾಗಿ ಯಾರೆಲ್ಲಾ ದೊಡ್ಮನೆಗೆ ಪ್ರವೇಶಿಸಲಿದ್ದಾರೆ ಎಂಬುದು ಸೆಪ್ಟೆಂಬರ್ 28 ರ ಗ್ರ್ಯಾಂಡ್ ಓಪನಿಂಗ್ ದಿನದಂದೇ ಬಹಿರಂಗವಾಗಲಿದೆ.
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್ 12ನೇ ಆವೃತ್ತಿ ಆರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್ ಆಗಮನವಾಗಲಿದೆ.