Sonu Nigam Controversy|ವಿವಾದವೆಂದರೆ ಸೋನು ನಿಗಮ್‌ಗೆ  ಹೊಸದೇನಲ್ಲ
x

ಸೋನು ನಿಗಂ 

Sonu Nigam Controversy|ವಿವಾದವೆಂದರೆ ಸೋನು ನಿಗಮ್‌ಗೆ ಹೊಸದೇನಲ್ಲ

ಅಭಿಮಾನಿಯೊಬ್ಬರ ಕನ್ನಡಾಭಿಮಾನವನ್ನು ಪಹಲ್ಗಾಮ್‌ಗೆ ಹೋಲಿಸಿದ್ದ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆದರೆ ಇಂತಹ ವಿವಾದಗಳಲ್ಲಿ ಗಾಯಕ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. ಸೋನು ನಿಗಂ ವಿರುದ್ಧ ಹಲವಾರು ವಿವಾದಗಳಿವೆ.


ಸೋನು ನಿಗಮ್ ಭಾರತೀಯ ಚಿತ್ರರಂಗದ ಅಮೋಘ ಗಾಯಕ. ಹಿಂದಿ ಸೇರಿದಂತೆ ನಾನಾ ಭಾಷೆಗಳಲ್ಲಿ ಹಾಡಿರುವ ಸೋನು ನಿಗಮ್, ಖ್ಯಾತಿ ಎಷ್ಟು ಪಡೆದುಕೊಂಡಿದ್ದರೋ, ಅಷ್ಟೇ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಅಂತೆಯೇ ಅವರೀಗ ಕನ್ನಡಿಗರನ್ನು 'ಭಯೋತ್ಪಾದಕರಿಗೆ ಹೋಲಿಸಿ' ಅಪಮಾನ ಮಾಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಬೆಂಗಳೂರಿನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆಡಿರುವ ಮಾತುಗಳು ಕನ್ನಡ ಭಾಷಿಕರ ಸಮುದಾಯವನ್ನು ಕೆರಳಿಸಿದೆ. ಅಭಿಮಾನಿಯೊಬ್ಬರ ಕನ್ನಡಾಭಿಮಾನವನ್ನು ಪಹಲ್ಗಾಮ್‌ಗೆ ಭಯೋತ್ಪಾದಕ ದಾಳಿಗೆ ಹೋಲಿಸಿದ್ದ ಸೋನು ನಿಗಮ್, ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಹೀಗಾಗಿ ಅವರು ಹಿಂದೆ ಸೃಷ್ಟಿಸಿರುವ ವಿವಾದಗಳೆಲ್ಲವೂ ಮುನ್ನೆಲೆಗೆ ಬಂದಿದೆ.

ಅಜಾನ್​ ಕೂಗುವುದಕ್ಕೆ ವಿರೋಧ

2017ರಲ್ಲಿ ಸೋನು ನಿಗಮ್ ಅವರು ಮುಸ್ಲಿಂರ ಪ್ರಾರ್ಥನೆ 'ಆಜಾನ್' ಕುರಿತಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಿಂದಾಗಿ ವಿವಾದಕ್ಕೀಡಾಗಿದ್ದರು. ‘ನಾನು ಮುಸ್ಲಿಂ ಅಲ್ಲ, ಆದಾಗ್ಯೂ ಬೆಳಗ್ಗಿನ ಪ್ರಾರ್ಥನಾ ಸಮಯದ (ಅಜಾನ್‌) ಕೂಗಿಗೆ ಏಳುವಂತಾಗಿದೆ. ಇಂತಹ ಒತ್ತಾಯಪೂರ್ವಕ ಆಚರಣೆ ಭಾರತದಲ್ಲಿ ಎಂದಿಗೆ ಕೊನೆಯಾಗುತ್ತದೆ,'' ಎಂದು ಸೋನು ನಿಗಮ್‌ ಟ್ವೀಟ್‌ ಮಾಡಿದ್ದರು.

ಇದಕ್ಕೆ ಮುಸ್ಲಿಂಮರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಆದರೆ, ಸೋನು ನಿಗಮ್ ಕ್ಷಮೆ ಕೇಳಲು ನಿರಾಕರಿಸಿದ್ದರಲ್ಲದೆ, ಸಾಧರಣ ನಾಗರಿಕನಾಗಿ ಧ್ವನಿ ಮಾಲಿನ್ಯದ ಬಗ್ಗೆ ಮಾತನಾಡಿದ್ದಾಗಿ ಹೇಳಿದ್ದರು. ಈ ವಿವಾದದ ನಂತರ ಅವರು ತಮ್ಮ ಟ್ವಿಟ್ಟರ್ ಖಾತೆಯೂ ನಿಷೇಧಕ್ಕೆ ಒಳಗಾಗಿತ್ತು. ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಮಗ ಭಾರತದಲ್ಲಿ ಗಾಯಕ ಆಗುವುದು ಬೇಡ

''ತಮ್ಮ ಮಗ ಭಾರತದಲ್ಲಿ ಗಾಯಕ ಆಗುವುದು ಬೇಡ'' ಎಂದು ಸೋನು ನಿಗಮ್​ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರದಲ್ಲಿ ಅವರು ದೇಶದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದರು. ಆಗಲೂ ಸಹ ಸೋನು ನಿಗಮ್‌ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಸೋನು ಆ ವೇಳೆ ಅದನ್ನು ಗಣನೆಗೆ ತೆಗೆದುಕೊಂಡೇ ಇಲ್ಲ.

ರಾಜಸ್ಥಾನ ಸಿಎಂ ವಿರುದ್ಧ ಆಕ್ರೋಶ

2024ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಪ್ರದರ್ಶನದ ಮಧ್ಯೆ ಎದ್ದು ಹೋಗಿದ್ದರು. ಈ ವೇಳೆ ಸೋನು, ಈ ನಡೆ ತಾಯಿ ಸರಸ್ವತಿಗೆ ಅವಮಾನವೆಂದು ಹೇಳಿ, ರಾಜಕಾರಣಿಗಳು ಕಾರ್ಯಕ್ರಮದ ಮಧ್ಯೆ ಹೋಗುವುದಾದರೆ ಕಾರ್ಯಕ್ರಮಕ್ಕೆ ಬರಬಾರದು ಎಂದು ಹೇಳಿದ್ದರು. ಅವರ ಹೇಳಿಕೆಗೆ ಭರ್ಜರಿ ವಿರೋಧ ವ್ಯಕ್ತಗೊಂಡಿದ್ದವು.

ಎ.ಆರ್. ರೆಹಮಾನ್ ಟೀಕೆ

2025ರ ಜನವರಿಯಲ್ಲಿ ಸೋನು ನಿಗಮ್ ಅವರು ಎ.ಆರ್. ರೆಹಮಾನ್ ಅವರನ್ನು 'ಸ್ನೇಹಪರ ವ್ಯಕ್ತಿಯಲ್ಲ ಎಂದು ಟೀಕಿಸಿದ್ದರು. ಅವರ ಮಾತು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಸುಪ್ರಸಿದ್ಧ ಸಂಗೀತ ನಿರ್ದೇಶಕನ ವಿರುದ್ಧದ ವೈಯಕ್ತಿಕ ಟೀಕೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಐಫಾ 2025 ನಾಮನಿರ್ದೇಶನ ವಿವಾದ

2025ರ ಮಾರ್ಚ್‌ನಲ್ಲಿ, ʻಬೂಲ್‌ ಬೂಲಯ್ಯ 3ʼ ಚಿತ್ರದ `ಮೇರೆ ಡೋಲನಾʼ ಹಾಡಿಗೆ 'ಐಫಾ' ಪ್ರಶಸ್ತಿಗಳಲ್ಲಿ ನಾಮನಿರ್ದೇಶನ ಸಿಗದ ಕಾರಣ ಸೋನು ನಿಗಮ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅವರು ಇನ್‌ಸ್ಟಾಗ್ರಾಂನಲ್ಲಿ ನಾಮನಿರ್ದೇಶನ ಪಟ್ಟಿಯ ಸ್ಕ್ರೀನ್‌ಶಾಟ್ ಹಂಚಿಕೊಂಡು, "ಧನ್ಯವಾದಗಳು ಐಫಾ... ನೀವು ರಾಜಸ್ಥಾನದ ಅಧಿಕಾರಶಾಯಿಗೆ ಉತ್ತರದಾರರಾಗಿದ್ದೀರಿ" ಎಂದು ವ್ಯಂಗ್ಯವಾಡಿದ

ಸಂಗೀತ ಉದ್ಯಮದ ಕುರಿತು ಏಕಸ್ವಾಮ್ಯದ ಕುರಿತು ಹೇಳಿಕೆಗಳು

ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಬಿಸಿ ಚರ್ಚೆ ಆರಂಭಗೊಂಡಿದ್ದ ಸಂದರ್ಭದಲ್ಲಿ ಸೋನು ನಿಗಮ್ ಅವರು, ದೊಡ್ಡ ಸಂಗೀತ ಕಂಪನಿಗಳು ಮತ್ತು ಕೆಲವು ವ್ಯಕ್ತಿಗಳು (ಟಿ-ಸೀರೀಸ್ ಮತ್ತು ಭೂಷಣ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು) ಉದ್ಯಮವನ್ನು ಏಕಸ್ವಾಮ್ಯಗೊಳಿಸುತ್ತಿದ್ದಾರೆ ಮತ್ತು ಸ್ವತಂತ್ರ ಕಲಾವಿದರನ್ನು ನಿಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಚಿಕ್ಕಬಳ್ಳಾಪುರದಲ್ಲೂ ಹಾಡು ನಿಲ್ಲಿಸುವ ಬೆದರಿಕೆ ಹಾಕಿದ್ದ ಸೋನು

ಈಗ ಸಂಸದರಾಗಿರುವ ಸುಧಾಕರ್ ಅವರು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾಗಿದ್ದಾಗ 2023ರ ಜನವರಿ ತಿಂಗಳಲ್ಲಿ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಒಂದು ವಾರಗಳ ಕಾಲ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಸೋನು ನಿಗಮ್‌ ಸಹ ಒಂದು ದಿನ ಪ್ರದರ್ಶನ ನೀಡಿದ್ದರು.

ಚಿಕ್ಕಬಳ್ಳಾಪುರದಲ್ಲಿ ಲೈವ್ ಶೋ ಪ್ರಾರಂಭ ಮಾಡಿದ ಸೋನು ನಿಗಮ್‌ ಮೊದಲಿಗೆ ಒಂದರ ಹಿಂದೊಂದು ಹಿಂದಿ ಹಾಡುಗಳನ್ನು ಹಾಡಿದರು. ‘ಒಂದು ಹೊಸ ಐಟಂ ತಂದಿದ್ದೇನೆ, ಇದೇ ಮೊದಲಿಗೆ ನಿಮ್ಮ ಮುಂದೆ ಪ್ರದರ್ಶಿಸುತ್ತಿದ್ದೇನೆ’ ಎಂದು ಹೇಳಿ ಒಂದು ಹಿಂದಿ ಹಾಡು ಹಾಡಿದ್ದರು. ಬಳಿಕ ಒಮ್ಮಿಂದೊಮ್ಮೆಲೆ ಹಾಡು ನಿಲ್ಲಿಸಿದ ಸೋನು ನಿಗಮ್‌, ವೇದಿಕೆಯ ಎಡಬದಿ ತಿರುಗಿ ‘ಏಕೆ ಸುಮ್ಮನೆ ಕಿರುಚುತ್ತೀರಿ’ ಎಂದರು. ಕಾರ್ಯಕ್ರಮ ನೋಡುತ್ತಿದ್ದವರಿಗೆ ಹಾಡು ಯಾಕೆ ನಿಲ್ಲಿಸಿದರು ಎನಿಸಿತು. ಬಳಿಕ ಸಿಟ್ಟಿನಿಂದಲೇ ​ನಲ್ಲಿ ಮಾತನಾಡಿದ ಸೋನು ನಿಗಮ್‌, ‘ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ಪ್ರತಿ ಬಾರಿ ಯಾರಾದರೂ ಕನ್ನಡ, ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ ಎಂದಿದ್ದರು. ಕೂಡಲೇ ಜನ ಚಪ್ಪಾಳೆ ತಟ್ಟಿದ್ದರು. ಬಳಿಕ ಸಿಟ್ಟಿನಿಂದಲೇ ‘ಇನ್ನೊಮ್ಮೆ ಹೀಗೆ ಮಾಡಿದರೆ ಕಾರ್ಯಕ್ರಮ ನಿಲ್ಲಿಸುತ್ತೇನೆ’ ಎಂದು ಹೇಳಿ ಹಾಡು ಮುಂದುವರಿಸಿದ್ದರು.

Read More
Next Story