BJP Legislature Party Meet in Belagavi This Evening
x
ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ʼವೋಟ್‌ ಚೋರಿʼ ಆರೋಪ| ವರದಿಗೆ ಏನು ಹೇಳುತ್ತೀರಾ; ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು

ಕಾಂಗ್ರೆಸ್ ಪಕ್ಷ ಪದೇ ಪದೇ ಚುನಾವಣಾ ವೈಫಲ್ಯ ಅನುಭವಿಸಿದ ಕಾರಣ ವೋಟ್ ಚೋರಿ ಆರೋಪ ಮಾಡುತ್ತಿತ್ತು. ಇದೀಗ ರಾಜ್ಯದ ಜನರೇ ನೀಡಿರುವ ತೀರ್ಮಾನವು ರಾಹುಲ್ ಗಾಂಧಿ ಅವರಿಗೆ ಕೊಟ್ಟ ಹೊಡೆತದಂತಿದೆ ಎಂದು ಬಿಜೆಪಿ ಟೀಕಿಸಿದೆ.


ಕಾಂಗ್ರೆಸ್‌ ನಾಯಕರ ʼವೋಟ್ ಚೋರಿʼ ಆರೋಪಗಳ ಬೆನ್ನಲ್ಲೇ ತಮ್ಮದೇ ಸರ್ಕಾರ ಆಡಳಿತವಿರುವ ಕರ್ನಾಟಕದಲ್ಲಿ ಇವಿಎಂ ಮತಯಂತ್ರಗಳ ನಿಷ್ಪಕ್ಷಪಾತ ಕಾರ್ಯ ನಿರ್ವಹಣೆ ಕುರಿತು ಜನಾಭಿಪ್ರಾಯ ವ್ಯಕ್ತವಾಗಿರುವುದು ಕಾಂಗ್ರೆಸ್‌ ಪಕ್ಷಕ್ಕೆ ಇರಿಸುಮುರಿಸು ತಂದಿದೆ.

ಕರ್ನಾಟಕದ ಮಹದೇವಪುರ, ಆಳಂದ ಕ್ಷೇತ್ರಗಳಲ್ಲಿ ವೋಟ್‌ ಚೋರಿ ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ದಾಖಲೆ ಸಮೇತ ಆರೋಪ ಮಾಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈಗ ಚುನಾವಣಾ ಆಯೋಗದ ನೇತೃತ್ವದಲ್ಲಿ ಕರ್ನಾಟಕದಲ್ಲಿ ಇವಿಎಂ ಮತಯಂತ್ರಗಳ ವಿಶ್ವಾಸಾರ್ಹತೆ ಕುರಿತು ಸಮೀಕ್ಷೆ ನಡೆದಿದ್ದು, ಮತದಾರರು ಇವಿಎಂ ಮತಯಂತ್ರಗಳ ಪರವಾಗಿ ದನಿಗೂಡಿಸಿರುವುದು ಕಾಂಗ್ರೆಸ್‌ ಹೋರಾಟಕ್ಕೆ ಹಿನ್ನಡೆ ತಂದಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವರದಿಯ ಮಾಹಿತಿ ಉಲ್ಲೇಖಿಸಿ, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮದೇ ಸರ್ಕಾರದಲ್ಲಿ ಇವಿಎಂ ಯಂತ್ರಗಳು ಸುರಕ್ಷಿತ ಎಂಬ ವರದಿ ಬಂದಿದೆ. ಈಗ ಏನು ಹೇಳುತ್ತೀರಾ ಎಂದು ಕಾಂಗ್ರೆಸ್‌ ನಾಯಕರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಪದೇ ಪದೇ ಚುನಾವಣಾ ವೈಫಲ್ಯ ಅನುಭವಿಸಿದ ಕಾರಣ ವೋಟ್ ಚೋರಿ ಆರೋಪ ಮಾಡುತ್ತಿತ್ತು. ಇದೀಗ ರಾಜ್ಯದ ಜನರೇ ನೀಡಿರುವ ತೀರ್ಮಾನವು ರಾಹುಲ್ ಗಾಂಧಿ ಅವರಿಗೆ ಕೊಟ್ಟ ಹೊಡೆತದಂತಿದೆ. "ವೋಟ್ ಚೋರಿ" ನಿರೂಪಣೆ, ಚುನಾವಣಾ ಆಯೋಗದ ಮೇಲೆ ಅನುಮಾನ ಮೂಡಿಸುವ ಅಜಾಗರೂಕ ಅಭಿಯಾನಕ್ಕೆ ರಾಜ್ಯದ ಜನರೇ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಸಾರ್ವಜನಿಕರ ದಿಕ್ಕು ತಪ್ಪಿಸುವ ಮತ್ತು ಸಾಂವಿಧಾನಿಕ ಸಂಸ್ಥೆಯ ಮೇಲಿನ ನಂಬಿಕೆ ದುರ್ಬಲಗೊಳಿಸಲು ಪ್ರಯತ್ನಕ್ಕೆ ಸೋಲಾಗಿದೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿನ ಅಭದ್ರ ಆಡಳಿತವು ಹೈಕಮಾಂಡ್ ಮನವೊಲಿಸಲು ಕಸರತ್ತು ನಡೆಸುತ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ತೀರ್ಮಾನಿಸಿರುವುದು ರಾಜ್ಯವನ್ನು ಹಿಂದಕ್ಕೆ ಎಳೆಯುವ, ವರ್ಷಗಳ ತಾಂತ್ರಿಕ ಪ್ರಗತಿ ಮತ್ತು ಎಲೆಕ್ಟ್ರಾನಿಕ್ ಮತದಾನ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಶ್ವಾಸಕ್ಕೆ ಭಂಗ ತರುವ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಸರ್ಕಾರದ ಈ ಸಮೀಕ್ಷೆಯು "ವೋಟ್ ಚೋರಿ" ಪಿತೂರಿಯನ್ನು ಭೇದಿಸುವಂತಿದೆ. ಕಾಂಗ್ರೆಸ್ಸಿನ ವಾಕ್ಚಾತುರ್ಯ ಮತ್ತು ವಾಸ್ತವದ ನಡುವಿನ ವಿಶಾಲ ಅಂತರವನ್ನು ಬಹಿರಂಗಪಡಿಸಿದೆ. ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಈ ಅಜಾಗರೂಕ ಪ್ರಯತ್ನಗಳಿಂದ ಜನರು ಮೋಸ ಹೋಗಲಿಲ್ಲ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಜನ ನಂಬಿಕೆ ಇರಿಸಿದ್ದಾರೆ. ಕಾಂಗ್ರೆಸ್ನ ವೋಟ್ ಚೋರಿ ನಿರೂಪಣೆಯು ಪ್ರಜಾಪ್ರಭುತ್ವದ ರಕ್ಷಣೆಯಲ್ಲ, ಸೋಲಿಗೆ ಒಂದು ನೆಪ ಎಂದು ವಿಜಯೇಂದ್ರ ಕುಟುಕಿದ್ದಾರೆ.

ಕರ್ನಾಟಕದ ಮಹದೇವಪುರ, ಆಳಂದ ಕ್ಷೇತ್ರಗಳಲ್ಲಿ ವೋಟ್ ಚೋರಿ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕೃತ ಸಂಸ್ಥೆಯಾದ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ (KMEA) ಸಮೀಕ್ಷೆ ನಡೆಸಿತು. ಕರ್ನಾಟಕದಲ್ಲಿ 102 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದೆ.

ರಾಜ್ಯದ ನಾಲ್ಕು ವಿಭಾಗಗಳು (ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು) ವ್ಯಾಪ್ತಿಯ ಗ್ರಾಮೀಣ, ಪಟ್ಟಣ, ಮೀಸಲು ಕ್ಷೇತ್ರಗಳಲ್ಲಿ ಒಟ್ಟು 5,100 ಮತದಾರರು ವಿದ್ಯುನ್ಮಾನ ಮತ ಯಂತ್ರಗಳು (EVM) ನಿಖರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಶೇ 69.39 ರಷ್ಟು ಜನರು ಇವಿಎಂ ಯಂತ್ರಗಳನ್ನು ಒಪ್ಪಿದ್ದಾರೆ. ಶೇ 6.76 ರಷ್ಟು ಜನರು ತಟಸ್ಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡರ ಎದುರಾಳಿ

ರಾಹುಲ್ ಗಾಂಧಿ ಅವರ ಆರೋಪಗಳಲ್ಲಿ ಹುರುಳಿಲ್ಲ. ತಮ್ಮದೇ ಸರ್ಕಾರ ನೀಡಿರುವ ಸಮೀಕ್ಷೆಯು ಮತ ಯಂತ್ರ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತಿದೆ ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

"ಪದೇ ಪದೇ ಚುನಾವಣಾ ವೈಫಲ್ಯ ಜೀರ್ಣಿಸಿಕೊಳ್ಳಲಾಗದ ಕಾಂಗ್ರೆಸ್ ಪಕ್ಷವು ʼವೋಟ್ ಚೋರಿ' ಕಥೆಯನ್ನು ತೆರೆಯ ಮೇಲೆ ತಂದಿದೆ. ಚುನಾವಣೆಗಳು ಮುಕ್ತವಾಗಿ, ನ್ಯಾಯಸಮ್ಮತವಾಗಿ ನಡೆಯುತ್ತಿವೆ ಎಂಬುದು ಸಾಬೀತಾಗಿದೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಾಮಾಜಿಕ ಮಾಧ್ಯಮ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More
Next Story