ಸಾಂವಿಧಾನಿಕ ಸಂಸ್ಥೆಗೆ ಅಪಮಾನ; ಕಾಂಗ್ರೆಸ್‌ ವಿರುದ್ಧ ಕಾರಜೋಳ ಕಿಡಿ
x

ಗೋವಿಂದ ಕಾರಜೋಳ

ಸಾಂವಿಧಾನಿಕ ಸಂಸ್ಥೆಗೆ ಅಪಮಾನ; ಕಾಂಗ್ರೆಸ್‌ ವಿರುದ್ಧ ಕಾರಜೋಳ ಕಿಡಿ

ಕಾಂಗ್ರೆಸ್ಸಿನವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದಾರೆ, ಅವರಿಗೆ ಬುದ್ಧಿ ಭ್ರಮೆಯಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ, ವಿಕಾಸ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯ ಗಮನಿಸಿಯೇ ಮತದಾರರು ಎನ್‌ಡಿಎಗೆ ಗೆಲುವಿನ ಮುದ್ರೆ ಒತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರು 20 ವರ್ಷಗಳ ಆಡಳಿತದ ಮೂಲಕ ಜನಮನ ಗೆದ್ದಿದ್ದಾರೆ. ಇದರಿಂದ ಎನ್‍ಡಿಎ 202 ಸೀಟುಗಳನ್ನು ಗೆದ್ದಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನವರು ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದಾರೆ, ಅವರಿಗೆ ಬುದ್ಧಿ ಭ್ರಮೆಯಾಗಿದೆ. ಇಡೀ ದೇಶದಲ್ಲಿ ಜನರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಒಬ್ಬ ಅಪಕ್ವ ರಾಜಕಾರಣಿ ಎಂದು ಟೀಕಿಸಿದರು.

ದೇಶದಲ್ಲಿ ಧರ್ಮ ಮತ್ತು ಜಾತಿಗಳನ್ನು ಒಡೆಯುವುದರ ಮೂಲಕ ಜನರಲ್ಲಿ ವಿಷಬೀಜ ಬಿತ್ತಿ ಮತಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ಆಡಳಿತ ನಡೆಸುತ್ತಾ ಬಂದಿದೆ. ಇದೀಗ ಜನರು ಕಾಂಗ್ರೆಸ್ಸಿನ ಅಪ್ರಬುದ್ಧ ರಾಜಕಾರಣಿಯನ್ನು ಒಪುತ್ತಿಲ್ಲ. ಮತಗಳ್ಳತನ ಎಂಬುದು ಮಹಾನ್ ದೇಶದ್ರೋಹಿ ನಡವಳಿಕೆ ಎಂದ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆ. 79 ವರ್ಷಗಳಲ್ಲಿ ನಿಷ್ಪಕ್ಷಪಾತದಿಂದ ಚುನಾವಣೆ ನಡೆಸಿದೆ. ಇದೇ ಕಾರಣಕ್ಕೆ 60 ವರ್ಷದಿಂದ ಕಾಂಗ್ರೆಸ್ಸಿನವರು ಆಡಳಿತ ಮಾಡಲು ಸಾಧ್ಯವಾಯಿತು. ಈಗ ಅದೇ ಆಯೋಗವನ್ನು ಸೋಲಿನ ಕಾರಣಕ್ಕೆ ಟೀಕಿಸಲಾಗುತ್ತಿದೆ ಎಂದು ತಿಳಿಸಿದರು.

Read More
Next Story