ಎಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿಕೆ: ಮುಡಾ ಹಗರಣ ಮುಚ್ಚಿ ಹಾಕಲು ತಂತ್ರ ಎಂದ ನಿಖಿಲ್ ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡುವಂತೆ ಮಾಡಿ ಮುಡಾ ಹಗರಣ ಮುಚ್ಚಿ ಹಾಕಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ರಾಜಭವನ ಚಲೋ ವಿಚಾರವಾಗಿ ಮಾತನಾಡಿದ ಅವರು, ʻʻಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ. ಕುಮಾರಸ್ವಾಮಿ ಅವರ ಮೇಲೆ ಲಕ್ಷ್ಮೀ ವೆಂಕಟೇಶ್ವರ ಮೈನಿಂಗ್ ವಿಚಾರವಾಗಿ ಆರೋಪ ಮಾಡುತ್ತಿದ್ದಾರೆ. ಆದರೆ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಎಸ್‌ಐಟಿ, ಲೋಕಾಯುಕ್ತಗೆ ವರದಿ ಕೊಡುವಂತೆ ಕೋರ್ಟ್ ಸೂಚಿಸಿದ್ದರೂ ವರದಿ ಕೊಟ್ಟಿಲ್ಲ. ಈಗ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳೋದು ಅನಗತ್ಯʼʼ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ವರಿಷ್ಠರು, ಕುಮಾರಸ್ವಾಮಿಯಿಂದ ಚನ್ನಪಟ್ಟಣ ಅಭ್ಯರ್ಥಿ ತೀರ್ಮಾನ
ʻʻಕಳೆದ ಐದು ವರ್ಷ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಕ್ಷೇತ್ರದ ಜನ ಬೆಂಬಲ ಕೊಟ್ಟಿದ್ದಾರೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಉಪಚುನಾವಣೆ ಎದುರಾಗಿರುವ ಹಿನ್ನೆಲೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆʼʼ ಎಂದು ನಿಖಿಲ್ ಹೇಳಿದರು.
ʻʻಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಕೂಡಾ ಎನ್‌ಡಿಎ ಕೂಟದ ಒಂದು ಭಾಗ. ಹಾಗಾಗಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು. ಸಿಪಿ ಯೋಗೇಶ್ವರ್ ಪರ ಬಿಜೆಪಿ ನಾಯಕರು ಕಣಕ್ಕಿಳಿಯಲಿದ್ದಾರೆ. ಬಿಜೆಪಿಯ ಕೆಲ ರಾಜ್ಯನಾಯಕರು ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನ ನಾವು ವಿರೋಧ ಮಾಡಲ್ಲ, ಸ್ವಾಗತ ಮಾಡುತ್ತೇವೆ. ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ಮಾಡುತ್ತಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಯಾರೇ ಅಭ್ಯರ್ಥಿ ಆದರೂ ಎರಡೂ ಪಕ್ಷಗಳು ಬೆಂಬಲ ಕೊಡಬೇಕು. ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕುʼʼ ಎಂದು ಹೇಳಿದರು.
ʻʻಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಮೂರು ಬಾರಿ ಸಂಸದರಾಗಿದ್ದರು. ಆಗ ಆ ಕ್ಷೇತ್ರವನ್ನೇ ಕಳೆದುಕೊಂಡಿದ್ದರು. ಈ ಕ್ಷೇತ್ರವನ್ನು ಡಿಕೆಶಿ ಅವರು ಕಬ್ಜ ಮಾಡುವ ಯೋಚನೆಯಲ್ಲಿದ್ದಾರೆ. ಐದು ಕ್ಷೇತ್ರಗಳಲ್ಲಿ ಮಿತ್ರಪಕ್ಷಕ್ಕೆ ಹೆಚ್ಚು ಲೀಡ್ ಸಿಕ್ಕಿದೆ. ಎನ್‌ಡಿಎ ಒಕ್ಕೂಟಕ್ಕೆ ಜನರ ಬೆಂಬಲ, ಆಶೀರ್ವಾದ ಇರೋದು ಸ್ಪಷ್ಟವಾಗಿದೆ. ಕನಕಪುರ, ಚನ್ನಪಟ್ಟಣದಲ್ಲೂ ದೊಡ್ಡ ಮಟ್ಟದ ಲೀಡ್ ಸಿಕ್ಕಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಗೆಲುವು ಖಚಿತʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ʻʻಡಿಕೆಶಿಯವರು ಉದ್ಯೋಗ ಮೇಳ ಧ್ವಜಾರೋಹಣ ಮಾಡಿ ಕ್ಷೇತ್ರದ ಜನರನ್ನು ಓಲೈಕೆ ಮಾಡುವ ವಿಚಾರದಲ್ಲಿದ್ದಾರೆ. ಪ್ರೋಟೊಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಬೇಕು. ಆದರೆ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಅದೇನೋ 20 ಜನ ಪಿಡಿಓ ಬದಲಾವಣೆ ಮಾಡುತ್ತೇವೆ, ನಿವೇಶನಗಳನ್ನು ಕೊಡುತ್ತೇವೆ ಎಂದು ಆಶ್ವಾಸನೆ ಕೊಡುತ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ಕೊಟ್ಟಿರುವ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲʼʼ ಎಂದು ಟೀಕಿಸಿದರು.
ʻʻ