ಅಮಾನತಾದ ಪೊಲೀಸ್ ಪೇದೆಗೆ ʻಸಿಎಂ ಪದಕʼ!
x

ಅಮಾನತಾದ ಪೊಲೀಸ್ ಪೇದೆಗೆ ʻಸಿಎಂ ಪದಕʼ!


ʻʻಸ್ವಾತಂತ್ರೋತ್ಸವ ದಿನದಂದು ನೀಡಲಾಗುವ 'ಮುಖ್ಯಮಂತ್ರಿ ಪದಕ'ವನ್ನು ಕರ್ತವ್ಯ ಲೋಪದಲ್ಲಿ ಅಮಾನತ್ತಾದ ಪೊಲೀಸ್ ಪೇದೆಗೆ ನೀಡಿದರೆ, ಕಷ್ಟಪಟ್ಟು ದುಡಿಯುತ್ತಿರುವ ನಿಷ್ಠಾವಂತ ಪೇದೆಗಳಿಗೆ, ಅಧಿಕಾರಗಳಿಗೆ ಮನೋಸ್ಥೈರ್ಯ ಏನಾಗಬೇಕೆಂದು ಯೋಚಿಸಿದ್ದೀರಾ?ʼʼ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ʻʻಮೈಸೂರು ಸಿ.ಸಿ.ಬಿ. ಘಟಕದ ಪೊಲೀಸ್ ಪೇದೆ ಸಲೀಂ ಪಾಷಾ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳವು ಸೇರಿದಂತೆ ಅನೇಕ ಗಂಭೀರ ಆರೋಪಿಗಳನ್ನು ಎದುರಿಸುತ್ತಿದ್ದರೂ, ಅವರಿಗೆ ಮುಖ್ಯ ಮಂತ್ರಿಗಳ ಪದಕ ನೀಡಿದ್ದೇಕೆ ಎಂಬುದನ್ನು ಮುಖ್ಯ ಮಂತ್ರಿಗಳು ರಾಜ್ಯದ ಜನತೆಗೆ ತಿಳಿಸಬೇಕುʼʼ ಎಂದಿದ್ದಾರೆ.

ʻʻಇಂತಹ ಆರೋಪ ಹೊತ್ತ ಪೊಲೀಸರಿಗೆ ಪದಕ ನೀಡಿದರೆ, ಕಷ್ಟಪಟ್ಟು ದುಡಿಯುತ್ತಿರುವ ನಿಷ್ಠಾವಂತ ಪೇದೆಗಳಿಗೆ, ಅಧಿಕಾರಗಳಿಗೆ ಮನೋಸ್ಥೈರ್ಯ ಏನಾಗಬೇಕೆಂದು ಯೋಚಿಸಿದ್ದೀರಾ ? ನಿಮ್ಮ shortlisting criteria ಏನೆಂಬುದನ್ನು ತಿಳಿಸಿʼʼ ಎಂದು ಕಿಡಿಕಾರಿದ್ದಾರೆ.

ʻʻಕೂಡಲೇ ಪದಕವನ್ನು ವಾಪಾಸ್ ಪಡೆದು, ಇವರ ಮೇಲೆ ತನಿಖೆಯನ್ನು ಚುರುಕುಗೊಳಿಸಿʼʼ ಎಂದು ಸರ್ಕಾರಕ್ಕೆ ಯತ್ನಾಳ್ ಒತ್ತಾಯಿಸಿದ್ದಾರೆ.


Read More
Next Story