ಏಳು ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಇಂದು
x

ಏಳು ಜಿಲ್ಲೆಗಳಿಗೆ ನೀರು ಪೂರೈಸುವ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಇಂದು

23,252 ಕೋಟಿ ರು. ಮೊತ್ತದ ಈ ಯೋಜನೆಗೆ ಆಗಸ್ಟ್ ವೇಳೆಗೆ 16,152 ಕೋಟಿ ರು. ವೆಚ್ಚವಾಗಿದೆ. 2014ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ಹಂತಕ್ಕೆ ಇದೀಗ 10 ವರ್ಷಗಳ ಬಳಿಕ ಚಾಲನೆ ಸಿಗುತ್ತಿದೆ.2027 ರಮಾ.31 ಕ್ಕೆಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.


ರಾಜ್ಯದ 7 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ( ಸೆ.6) ಅಂದರೆ ಗೌರಿ ಹಬ್ಬದಂದು ಲೋಕಾರ್ಪಣೆ ಮಾಡಲಿದ್ದಾರೆ.

ವಿವಾದಗಳಿಂದಲೇ ಜಾರಿಯಾಗಿದ್ದ ರಾಜ್ಯದ ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರೊದಗಿಸುವ ಎತ್ತಿನಹೊಳೆ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ವಾರದ ಹಿಂದೆಯೇ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಿದ್ದರು.

23,252 ಕೋಟಿ ರು. ಮೊತ್ತದ ಈ ಯೋಜನೆಗೆ ಆಗಸ್ಟ್ ವೇಳೆಗೆ 16,152 ಕೋಟಿ ರು. ವೆಚ್ಚವಾಗಿದೆ. 2014ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ಹಂತಕ್ಕೆ ಇದೀಗ 10 ವರ್ಷಗಳ ಬಳಿಕ ಚಾಲನೆ ಸಿಗುತ್ತಿದೆ.2027 ರಮಾ.31 ಕ್ಕೆಕಾಮಗಾರಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ನೀರೊದಗಿಸುವ ಈ ಯೋಜನೆಗೆ 2014ರಲ್ಲಿ ಶುರುವಾಗಿತ್ತು. ಸುಮಾರು ಎಂಟು ಸಾವಿರ ಕೋಟಿ ಅಂದಾಜು ವೆಚ್ಚದೊಂದಿಗೆ ಆರಂಭವಾದ ಈ ಯೋಜನೆಯ ಮೊದಲ ಹಂತ ಇದೀಗ ಉದ್ಘಾಟನೆಗೆ ಸಿದ್ದವಾಗಿದೆ.

ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಮೊದಲ ಹಂತದಲ್ಲಿ ಸಕಲೇಶಪುರ ತಾಲೂಕಿನಲ್ಲಿ ನಿರ್ಮಾಣಗೊಂಡಿರುವ 8 ವಿಯರ್‌ಗಳ ಪೈಕಿ 7 ವಿಯರ್ ಗಳಿಂದ ಶುಕ್ರವಾರ ನೀರು ಹರಿಸಲಾಗುವುದು. ಬಾಕಿ ಉಳಿದಿರುವ ಒಂದು ವಿಯರ್‌ಇನ್ನೊಂದು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ. ಎತ್ತಿನಹೊಳೆ ನೀರು ತಲುಪುವ ಕೊನೆಯ ತಾಲೂಕಾದ ದೊಡ್ಡಬಳ್ಳಾಪುರ ಎತ್ತಿನಹೊಳೆ ಮುಖ್ಯ ಕೇಂದ್ರದಿಂದ 261 ಕಿ.ಮೀ. ದೂರದಲ್ಲಿದ್ದು ಈಗಾಗಲೇ 162 ಕಿ.ಮಿ ಕಾಲುವೆ ಕಾಮಗಾರಿ ಮುಕ್ತಾಯಗೊಂಡಿದ್ದರೆ, 25 ಕಿ.ಮೀ. ಕಾಮಗಾರಿ ಪ್ರಗತಿ ಹಂತದಲ್ಲಿದೆ. ನೀರು ಹರಿಸುವ ಪೈಪ್‌ಗಳು ಅರಣ್ಯ ವ್ಯಾಪ್ತಿಯಲ್ಲಿ ಹಾದುಹೋಗಬೇಕಿದೆ. ಈ ಸಂಬಂಧ ಅನುಮತಿ ಕೋರಿ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ.

ಹಳೇಬೀಡಿನ ದ್ವಾರಸಮುದ್ರಕೆರೆ, ಬೆಳವಾಡಿ ಕೆರೆ ತುಂಬಿಸುವ ಮೂಲಕ ವೇದಾ ವ್ಯಾಲಿ ಮೂಲಕ 132 ಕಿ.ಮೀ. ದೂರದಲ್ಲಿರುವ ವಾಣಿವಿಲಾಸ ಸಾಗರಕ್ಕೆ ಹರಿಯಲಿದೆ. 60 ದಿನ ನಿರಂತರವಾಗಿ ನೀರು ಮೇಲೆತ್ತಲಾಗುತ್ತಿದ್ದು, ಇದರಿಂದ ವಾಣಿವಿಲಾಸ ಸಾಗರಕ್ಕೆ ಎತ್ತಿನಹೊಳೆಯಿಂದ ಐದು ಟಿಎಂಸಿ ನೀರು 24 ಟಿಎಂಸಿ ನೀರೆತ್ತುವ ಈ ಯೋಜನೆಯಲ್ಲಿ 14 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದ್ದರೆ, ಇನ್ನುಳಿದ 10 ಟಿಎಂಸಿ ನೀರಿನಿಂದ ಯೋಜನೆ ವ್ಯಾಪ್ತಿಯ 527 ಕೆರೆಗಳನ್ನು ಶೇ. 50ರಷ್ಟು ತು೦ಬಿಸುವ ಗುರಿ ಹೊಂದಲಾಗಿದೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಯೋಜನೆ ವ್ಯಾಪ್ತಿಯಲ್ಲಿ 25.11 ಟಿಎಂಸಿ ನೀರು ಲಭ್ಯವಿದೆ. ಒಟ್ಟಾರೆ ಯೋಜನೆಯಿಂದ ಪ್ರತಿವರ್ಷ ಜೂ.1 ರಿಂದ ಆ.31 ರವರೆಗೆ 139 ದಿನಗಳ ಕಾಲ ನೀರು ಹರಿಸಲಾಗುವುದು.

ಅನುಕೂಲ ಯಾರಿಗೆ?

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಇಲ್ಲಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6,657 ಗ್ರಾಮಗಳ ಸುಮಾರು 75.39 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.05 ಟಿಎಂಸಿ ನೀರು ಸಿಗಲಿದೆ.

Read More
Next Story