ದೀರ್ಘಾವಧಿ ಸಿಎಂ ದಾಖಲೆ; ನಾಟಿಕೋಳಿ ಔತಣಕ್ಕೆ ನೀರಸ ಪ್ರತಿಕ್ರಿಯೆ
x

ನೆಲಮಂಗಲದಲ್ಲಿ ಸಿಎಂ ಅಭಿಮಾನಿಗಳಿಗಾಗಿ ನಾಟಿಕೋಳಿ ಔತಣ ಏರ್ಪಡಿಸಲಾಗಿತ್ತು.

ದೀರ್ಘಾವಧಿ ಸಿಎಂ ದಾಖಲೆ; ನಾಟಿಕೋಳಿ ಔತಣಕ್ಕೆ ನೀರಸ ಪ್ರತಿಕ್ರಿಯೆ

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿ ಅರಸು ದಾಖಲೆ ಮುರಿದಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಕ್ಕೆ ಇರಿಸು ಮುರಿಸು ತಂದಿದೆ.


ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ನಾಟಿಕೋಳಿ ಔತಣಕೂಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಯುವ ಅಹಿಂದ ಒಕ್ಕೂಟದ ವತಿಯಿಂದ ನೆಲಮಂಗಲದ ಭಕ್ತನಪಾಳ್ಯದಲ್ಲಿ ನಾಟಿ ಕೋಳಿ ಔತಣಕೂಟ ಆಯೋಜಿಸಲಾಗಿತ್ತು. ಸಿಎಂ ಅಭಿಮಾನಿಗಳಿಗಾಗಿ ಬೆಂಬಲಿಗರು ನಾಟಿಕೋಳಿ ಸಾಂಬಾರ್, ಮುದ್ದೆ, ಕಾಳು ಗೊಜ್ಜು, ರೈಸ್, ಪುಲಾವ್ ಮತ್ತು ಸಿಹಿತಿಂಡಿ ಸಿದ್ಧಪಡಿಸಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನರು ಹಾಗೂ ಜನನಾಯಕರು ಆಗಮಿಸದ ಕಾರಣ ಕಾರ್ಯಕ್ರಮ ಕಳಾಹೀನಗೊಂಡಿತ್ತು.

ನೆಲಮಂಗಲದಲ್ಲಿ ಸಿಎಂ ಅಭಿಮಾನಿಗಳು ಆಯೋಜಿಸಿದ್ದ ನಾಟಿಕೋಳಿ ಔತಣ ಕೂಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ನಾಟಿಕೋಳಿ ಔತಣಕೂಟಕ್ಕೆ ಸುಮಾರು ಐದರಿಂದ ಹತ್ತು ಸಾವಿರ ಜನರು ಸೇರುವ ನಿರೀಕ್ಷೆಯಲ್ಲಿ ಆಹಾರ ಸಿದ್ಧಪಡಿಸಲಾತ್ತು. ಯುವ ಅಹಿಂದ ಒಕ್ಕೂಟ ಕಾರ್ಯಕ್ರಮ ಆಯೋಜಿಸಿದ್ದರಿಂದ ಹೆಚ್ಚಿನ ಜನ ಸೇರಲಿದ್ದಾರೆ ಎಂದು ಊಹಿಸಲಾಗಿತ್ತು. ನಾಟಿಕೋಳಿ ಔತಣವಾದರೂ ಜನರು ಮಾತ್ರ ಕಾರ್ಯಕ್ರಮಕ್ಕೆ ಉತ್ಸಾಹ ತೋರಿರಲಿಲ್ಲ.

ಇನ್ನು ವೇದಿಕೆ ಕಾರ್ಯಕ್ರಮಕ್ಕೆ ಸಿಎಂ ಆಪ್ತ ಹಾಗೂ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಹಾಗೂ ನೆಲಮಂಗಲ ಶಾಸಕ ಶ್ರೀನಿವಾಸ್ ಹೊರತುಪಡಿಸಿ ಯಾವುದೇ ಘಟಾನುಘಟಿ ನಾಯಕರು ಬಂದಿರಲಿಲ್ಲ.

ಡಿ. ದೇವರಾಜ್ ಅರಸು ಅವರು ಒಟ್ಟು 2,792 ದಿನಗಳು( ಸುಮಾರು 7.6 ವರ್ಷ) ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ದಾಖಲೆ ಈವರೆಗೂ ಇತ್ತು. ಈಗ ಸಿಎಂ ಸಿದ್ದರಾಮಯ್ಯ ಅವರು ಆ ದಾಖಲೆ ಸರಿಗಟ್ಟಿದರು.

ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ತೀವ್ರಗೊಂಡಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿರುವ ದಾಖಲೆ ಮಾಡಿರುವುದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣಕ್ಕೆ ಇರಿಸು ಮುರಿಸು ತಂದಿದೆ.

ದೀರ್ಘಾವಧಿ ಸಿಎಂ ಆಗಿ ದಾಖಲೆ ಮಾಡಿರುವುದನ್ನು ಯಾರೂ ಕೂಡ ಸಂಭ್ರಮಿಸದಂತೆ ಸಿಎಂ ಸಿದ್ದರಾಮಯ್ಯ ಅವರು ಕರೆ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿಲ್ಲ ಎನ್ನಲಾಗಿದೆ.

Read More
Next Story