
ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ನನ್ನಿಂದಲೇ ಚಲನಚಿತ್ರೋತ್ಸವ ಉದ್ಘಾಟನೆ; ಡಿಕೆಶಿ ಬಣಕ್ಕೆ ಠಕ್ಕರ್ ಕೊಟ್ಟ ಸಿಎಂ!
ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇರುವುದು ಸಿಎಂ ಹಾಗೂ ಡಿಸಿಎಂ ಬಣಗಳ ನಡುವಿನ ಹೇಳಿಕೆ, ಪ್ರತಿ ಹೇಳಿಕೆಗಳಿಂದಾಗಿ ಸಂಘರ್ಷ ಹೆಚ್ಚುವಂತೆ ಮಾಡಿದೆ.
ಸಂಕ್ರಾಂತಿಯೊಳಗೆ ನಾಯಕತ್ವ ಬದಲಾಗಲಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಬಣದ ಶಾಸಕರ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ಅವರೇ ಠಕ್ಕರ್ ನೀಡಿದ್ದಾರೆ.
ಜ.29ರಂದು ನಡೆಯುವ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಾನೇ ಉದ್ಘಾಟಿಸುತ್ತೇನೆ ಎಂದು ಹೇಳುವ ಮೂಲಕ, ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.
ಮುಖ್ಯಮಂತ್ರಿ ಆದವರು ಸಹಜವಾಗಿ ಪ್ರಮುಖ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸುತ್ತಾರೆ. ನಾನೇ ಮುಖ್ಯಮಂತ್ರಿ, ಹಾಗಾಗಿ ಜ.29ರ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಾನೇ ಉದ್ಘಾಟಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಅವರ ಈ ಹೇಳಿಕೆ ಕಾಂಗ್ರೆಸ್ ಪಕ್ಷದೊಳಗಿನ ಬಣ ರಾಜಕಾರಣಕ್ಕೆ ನೇರ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇತ್ತೀಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದ ಶಾಸಕ ಇಕ್ಬಾಲ್ ಹುಸೇನ್ ಅವರು ಜ.6 ರವರೆಗೆ ಕಾಯಿರಿ. ಅಚ್ಚರಿಯ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ದ ಫೆಡರಲ್ ಕರ್ನಾಟಕಕ್ಕೆ ಬೆಳಗಾವಿ ಅಧಿವೇಶನದ ಸಮಯದಲ್ಲಿ ಹೇಳಿದ್ದರು. ಡಿಕೆಶಿಯ ಇನ್ನೂ ಕೆಲ ಆಪ್ತ ಶಾಸಕರು ಸಂಕ್ರಾಂತಿಯೊಳಗೆ ನಾಯಕತ್ವ ಬದಲಾವಣೆ ಆಗುವುದು ನಿಶ್ಚಿತ ಎಂಬ ಹೇಳಿಕೆ ನೀಡಿದ್ದರು.
ಡಿ.ಕೆ.ಶಿವಕುಮಾರ್ ಆಪ್ತ ಶಾಸಕ ಇಕ್ಬಾಲ್ ಹುಸೇನ್ ನೀಡಿದ್ದ ಹೇಳಿಕೆ ಇಲ್ಲಿದೆ.
ಡಿಕೆಶಿ ಆಪ್ತ ನಾಯಕರ ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದು, ಡಿಕೆಶಿ ಬಣ್ಣಕ್ಕೆ ನೀಡಿದ ತಿರುಗೇಟು ಎಂದೇ ಬಣ್ಣಿಸಲಾಗಿದೆ. ಜತೆಗೆ ಮುಂದಿನ ಬಜೆಟ್ ಮಂಡನೆವರೆಗೂ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ನೀಡಿದಂತಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಇರುವುದು ಸಿಎಂ ಹಾಗೂ ಡಿಸಿಎಂ ಬಣಗಳ ನಡುವಿನ ಹೇಳಿಕೆ, ಪ್ರತಿ ಹೇಳಿಕೆಗಳಿಂದಾಗಿ ಸಂಘರ್ಷ ಹೆಚ್ಚುವಂತೆ ಮಾಡಿದೆ.

