ಕೇದಾರನಾಥ ಮೇಘಸ್ಫೋಟ | ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಯಾತ್ರಿಕರು
x

ಕೇದಾರನಾಥ ಮೇಘಸ್ಫೋಟ | ಸಂಕಷ್ಟಕ್ಕೆ ಸಿಲುಕಿದ ಬೆಂಗಳೂರಿನ ಯಾತ್ರಿಕರು


ಉತ್ತರಖಂಡದಲ್ಲಿ ಎಡೆಬಿಡದೇ ಸುರಿವ ಮಳೆಯುತ್ತಿದ್ದು, ಮೇಘಸ್ಫೋಟದಿಂದ ಅನೇಕ ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಕೇದಾರನಾಥಗೆ ತೆರಳಿದ್ದ ಯಾತ್ರಾರ್ಥಿಗಳು ಈ ಪ್ರಕೃತಿಯ ರೌದ್ರ ನರ್ತನದ ಸುಳಿಗೆ ಸಿಲುಕಿದ್ದಾರೆ. ಬೆಂಗಳೂರಿನ ಕೇದಾರನಾಥ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರಿನಿಂದ ಕೇದಾರನಾಥ್‌ಗೆ ತೆರಳಿದ್ದ 15 ಜನ ಸ್ನೇಹಿತರ ತಂಡ ಇದೀಗ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಏರಿಯಾಗಳಿಂದ ಹೊರಟಿದ್ದ 15 ಜನರ ಪೈಕಿ, 6 ಜನರು ಸಂಪರ್ಕಕ್ಕೆ ಸಿಗದೇ ಇರೋದು ಇತರರನ್ನು ಕಂಗಾಲಾಗಿಸಿದೆ. ಆ ಪೈಕಿ 5 ಜನರನ್ನು ರಕ್ಷಣಾತಂಡ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಉಳಿದ ಕನ್ನಡಿಗರು ರೆಸ್ಕ್ಯೂ ಪಾಯಿಂಟ್‌ನಲ್ಲಿ ರಕ್ಷಣೆಗೆ ಕಾದು ನಿಂತ ಜನರ ಗುಂಪಿನ ಜೊತೆ ಕಾದುಕುಳಿತಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನಿಂದ ಕೇದಾರನಾಥ್ ಗೆ ಹೊರಟಿದ್ದ 20 ಸದಸ್ಯರಿದ್ದ ಮತ್ತೊಂದು ತಂಡ ರಕ್ಷಣಾ ಪಡೆಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದ್ದು, 20 ಜನರ ಪೈಕಿ ಓರ್ವ ವ್ಯಕ್ತಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ಯಾಕೇಜ್ ಟೂರ್‌ನಲ್ಲಿ ಯಾತ್ರೆಗೆ ತೆರಳಿದ್ದ ಈ ತಂಡ ಸದ್ಯ ಸುರಕ್ಷಿತ ಸ್ಥಳ ತಲುಪಿದ್ದು, ಯಾತ್ರೆ ವೇಳೆ ಆದ ಅನುಭವವನ್ನು ಯಾತ್ರಾರ್ಥಿಗಳು ಬಿಚ್ಚಿಟ್ಟಿದ್ದಾರೆ.

ಕೇರಳ ದುರಂತ ಮಾಸುವ ಮೊದಲೇ ಮಳೆರಾಯ ಉತ್ತರಖಾಂಡ್‌ದಲ್ಲಿ ತನ್ನ ರೌದ್ರ ನರ್ತನ ಶುರುವಿಟ್ಟಿದ್ದಾನೆ. ಕೇದಾರನಾಥ್ ನಲ್ಲಿ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣೆಗೆ ಸ್ಥಳೀಯ ಪೊಲೀಸರು, ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಮುಂದುವರಿಸಿದೆ.

Read More
Next Story