ಕಾಲರಾ ಆತಂಕ | ಬೆಂಗಳೂರಿನ ಪಿಜಿಗಳಿಗೆ ಗೈಡ್ ಲೈನ್ಸ್ ಜಾರಿ
x

ಕಾಲರಾ ಆತಂಕ | ಬೆಂಗಳೂರಿನ ಪಿಜಿಗಳಿಗೆ ಗೈಡ್ ಲೈನ್ಸ್ ಜಾರಿ


ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಹರಡುವ ಸಾಂಕ್ರಾಮಿಕ ಮಾರಕ ಕಾಲರಾ ರೋಗ ಬೆಂಗಳೂರು ಸೇರಿದಂತೆ ಹಲವೆಡೆ ಪತ್ತೆ ಆಗುತ್ತಿದ್ದು, ರಾಜ್ಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 6 ಪ್ರಕರಣಗಳು ದೃಢಪಟ್ಟಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 3 ಮತ್ತು ರಾಮನಗರ ಜಿಲ್ಲೆಯಲ್ಲಿ 1 ಕೇಸ್ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಸಂಸ್ಥೆಯ ಬಾಲಕಿಯರ ಹಾಸ್ಟೆಲ್‌ನ ವಿದ್ಯಾರ್ಥಿನಿಯರ ಪೈಕಿ ಇಬ್ಬರಿಗೆ ಕಾಲರಾ ಸೋಂಕು ಕಾಣಿಸಿಕೊಂಡಿದೆ.‌ ಈ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬೆಂಗಳೂರು ಪಿಜಿ ಮಾಲೀಕರ ಸಂಘ, ಪಿಜಿ ಗಳಲ್ಲಿ ಸೋಂಕು ತಡೆಗಟ್ಟುಲು ಅಲರ್ಟ್ ಆಗಿದೆ.

ನಗರದ ಎಲ್ಲಾ ಪಿಜಿಗಳಿಗೂ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮದ ಜೊತೆಗೆ ಗೈಡ್ ಲೈನ್ಸ್ ಹಾಕಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಮಾಲೀಕರಿಗೆ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿದೆ. ಮುಂದಿನ ಒಂದು ವಾರದಲ್ಲಿ ತುರ್ತು ಸಭೆ ಮಾಡಿ ಗೈಡ್ ಲೈನ್ಸ್ ಹೊರಡಿಸುವ ಸಾಧ್ಯತೆ ಇದೆ.

ಪಿಜಿಗಳಲ್ಲಿ ಗೈಡ್ ಲೈನ್ಸ್

ಪಿಜಿಗಳಲ್ಲಿ ಹೊರಗಿನ ಆಹಾರಕ್ಕೆ ನಿಷೇಧ.

ಪಿಜಿಗಳ ಅಡುಗೆ ಕೋಣೆಗಳ ನಿತ್ಯ ಸ್ಬಚ್ಚತೆ.

ಕಡ್ಡಾಯ ಆರ್ ಓ. ವಾಟರ್ ಗಳ ಬಳಕೆಗೆ ಸೂಚನೆ.

ಪ್ರತಿ ಹೊತ್ತಿಗೂ ಬಿಸಿ ಆಹಾರ ಸಿದ್ದಪಡಿಸಿ ನೀಡಬೇಕು.

ಪಿಜಿ ವಾಸಿಗಳ ಆರೋಗ್ಯದ ಮೇಲೆ ಮಾಲೀಕರೇ ನಿಗಾ ವಹಿಸಬೇಕು.

ಪಿಜಿ ವಾಸಿಗಳು ತಮ್ಮ ಆರೋಗ್ಯದಲ್ಲಿ ಏರುಪೇರಾದರೇ ಕೂಡಲೇ ಕೂಡ ಮಾಲೀಕರ ಗಮನಕ್ಕೆ ತರಬೇಕು.

ಗಮನಕ್ಕೆ ಬಂದ ಕೂಡಲೇ ಮಾಲೀಕರು ಕುಟುಂಬಸ್ಥರ ಮೂಲಕ ಅಥವಾ ಮಾಲೀಕರೇ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಬೇಕು.

ಪಿಜಿ ನಿತ್ಯ ಸ್ವಚ್ಚವಾಗಿಡುವುದು.

ವಾಸಿಗಳು ಕೂಡ ಕಡ್ಡಾಯ ನಿಯಮ ಪಾಲನೆ ಮಾಡಲೇಬೇಕು.

Read More
Next Story