ಇಡಿ ಕಸ್ಟಡಿಗೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ; ವಿಚಾರಣೆ ತೀವ್ರಗೊಳಿಸಿದ ಇಡಿ
x

ವೀರೇಂದ್ರ ಪಪ್ಪಿ

ಇಡಿ ಕಸ್ಟಡಿಗೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ; ವಿಚಾರಣೆ ತೀವ್ರಗೊಳಿಸಿದ ಇಡಿ

ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲು ಶುಕ್ರವಾರ ಹಾಗೂ ಶನಿವಾರ ಶಾಸಕ ವೀರೇಂದ್ರ ಅವರ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆದಿತ್ತು. ಸಿಕ್ಕಿಂನಲ್ಲಿ ಶಾಸಕ ವೀರೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

**ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಇಡಿ ಕಸ್ಟಡಿಗೆ**

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರನ್ನು ಜಾರಿ ನಿರ್ದೇಶನಾಲಯ ಆಗಸ್ಟ್ 28ರವರೆಗೆ ಕಸ್ಟಡಿಗೆ ಪಡೆದಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲು ಶುಕ್ರವಾರ ಹಾಗೂ ಶನಿವಾರ ಶಾಸಕ ವೀರೇಂದ್ರ ಅವರ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆದಿತ್ತು. ಸಿಕ್ಕಿಂನಲ್ಲಿ ಶಾಸಕ ವೀರೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು.

ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಇಡಿ ಪರ ವಕೀಲರು ಕೋಟ್ಯಂತರ ರೂ. ನಗದು, ಕೆಜಿಗಟ್ಟಲೇ ಚಿನ್ನ ಪತ್ತೆಯಾಗಿತ್ತು. ವಿದೇಶಗಳಲ್ಲಿ ವ್ಯವಹಾರ, ಕ್ಯಾಸಿನೋ ಮತ್ತು ಆನ್‌ಲೈನ್ ಬೆಟ್ಟಿಂಗ್ ತಾಣಗಳಲ್ಲಿ ಅಕ್ರಮ ವಹಿವಾಟು ನಡೆದಿದೆ ಎಂದು ವಾದಿಸಿದರು. 14 ದಿನಗಳ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.

ಶಾಸಕ ವೀರೇಂದ್ರ ಪಪ್ಪಿ ಪರ ವಕೀಲರು ಇಡಿ ವಶಕ್ಕೆ ನೀಡುವ ಅವಶ್ಯಕತೆ ಇಲ್ಲವೆಂದು ವಾದಿಸಿದರು. ಆದರೆ, ನ್ಯಾಯಾಧೀಶರು ಇಡಿ ಮನವಿಗೆ ಸ್ಪಂದಿಸಿದ ಕಸ್ಟಡಿಗೆ ಒಪ್ಪಿಸಿದರು. ಆ.22ರಂದು ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿ 30 ಕಡೆ ದಾಳಿ ನಡೆದಿತ್ತು. ಚಿತ್ರದುರ್ಗದಲ್ಲಿ 6, ಬೆಂಗಳೂರಿನಲ್ಲಿ 10, ಗೋವಾದಲ್ಲಿ 5 ಕ್ಯಾಸಿನೋ, ಜೋಧ್ಪುರದಲ್ಲಿ 3, ಮುಂಬೈನಲ್ಲಿ 2 ಮತ್ತು ಹುಬ್ಬಳ್ಳಿಯಲ್ಲಿ 1 ಸ್ಥಳದಲ್ಲಿ ದಾಳಿ ನಡೆಸಲಾಯಿತು.

ದಾಳಿಯ ವೇಳೆ ಕಿಂಗ್567, ರಾಜಾ567, ಪಪ್ಪಿಸ್003, ರತ್ನ ಗೇಮಿಂಗ್ ಸೇರಿದಂತೆ ಆನ್‌ಲೈನ್ ಬೆಟ್ಟಿಂಗ್ ತಾಣಗಳು ಮತ್ತು ದುಬೈನ ಡೈಮಂಡ್ ಸಾಫ್ಟೆಕ್, ಟಿಆರ್ಎಸ್ ಟೆಕ್ನಾಲಜಿಸ್, ಪ್ರೈಮ್9 ಟೆಕ್ನಾಲಜಿಸ್, ಕಾಲ್ ಸೆಂಟರ್ ಸರ್ವೀಸ್ ಕಚೇರಿಗಳ ದಾಖಲೆ ಪರಿಶೀಲಿಸಲಾಯಿತು.

Read More
Next Story