ಬಿಗ್ ಬಾಸ್ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರಾದ ಚೈತ್ರಾ ಕುಂದಾಪುರ
x
ಕೋರ್ಟ್‌ಗೆ ಹಾಜರಾದ ಚೈತ್ರಾ ಕುಂದಾಪುರ

ಬಿಗ್ ಬಾಸ್ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರಾದ ಚೈತ್ರಾ ಕುಂದಾಪುರ

ಬಿಜೆಪಿ ಟಿಕೆಟ್ ವಂಚನೆ ಕೇಸಿನಲ್ಲಿ ಚೈತ್ರಾ ಕುಂದಾಪುರಗೆ ವಾರೆಂಟ್‌ ಜಾರಿಯಾಗಿದ್ದು, ಬಿಗ್ ಬಾಸ್​ನಿಂದ ಹೊರ ಬಂದು ಕೋರ್ಟ್ ಮೆಟ್ಟಿಲೇರಿ ವಿಚಾರಣೆ ಎದುರಿಸಿದ್ದಾಳೆ.


Click the Play button to hear this message in audio format

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ.ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್‌ ಜಾರಿಯಾದ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ಎಂಬಾಕೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾಳೆ.

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಆರೋಪದಲ್ಲಿ ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗನ್ನು ಬಂಧಿಸಲಾಗಿತ್ತು. ಬಳಿಕ ಚೈತ್ರಾ ಜಾಮೀನಿನ ಮೂಲಕ ಹೊರಬಂದಿದ್ದಳು. ಆ ಬಳಿಕ ಆಕೆ ಕನ್ನಡದ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 11ಕ್ಕೆ ಸ್ಪರ್ಧಿಯಾಗಿ ಭಾಗವಹಿಸಿದ್ದಳು. ಆದರೆ ಇದೀಗ ಸ್ಪರ್ಧೆಯ ಮಧ್ಯದಲ್ಲೇ ಹೊರಬಂದು ಕೋರ್ಟ್‌ಗೆ ಹಾಜರಾಗಿದ್ದಾಳೆ.

ಟಿಕೆಟ್ ವಂಚನೆ ಕೇಸಿನಲ್ಲಿ ಚೈತ್ರಾ ಕುಂದಾಪುರಗೆ ವಾರೆಂಟ್‌ ಜಾರಿಯಾಗಿದ್ದು, ಆಕೆ ಬಿಗ್ ಬಾಸ್​ನಿಂದ ಹೊರ ಬಂದು ಕೋರ್ಟ್ ಮೆಟ್ಟಿಲೇರಿ ವಿಚಾರಣೆಯನ್ನು ಎದುರಿಸಿದ್ದಾಳೆ. ಬಿಗ್​ಬಾಸ್ ಮನೆಯಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದ ಚೈತ್ರಾ ಕುಂದಾಪುರ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್‌ಗೆ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಳು.

ಈ ವೇಳೆ ವಾರೆಂಟ್ ರೀ ಕಾಲ್ ಮಾಡಿಸಿಕೊಂಡಿದ್ದು, ನಂತರ ಚೈತ್ರಾ ಅವರ ವಿಚಾರಣೆಯನ್ನು ಕೋರ್ಟ್‌ ಜನವರಿ 13ಕ್ಕೆ ಮುಂದೂಡಿತು.

ಈ ಹಿಂದೆ ಬಿಗ್‌ಬಾಸ್‌ ಮನೆಯಿಂದ ಹೊರಬಂದರೆ ಮತ್ತೆ ಅವರನ್ನು ಸೇರಿಸಿಕೊಳ್ಳಲಾಗುತ್ತಿರಲಿಲ್ಲ. ಆದರೆ ಕಳೆದ ವರ್ಷ ವರ್ತೂರು ಸಂತೋಷ್ ಅವರು ಹುಲಿ ಉಗುರಿನ ಕೇಸ್​ನಲ್ಲಿ ಒಂದು ವಾರ ಜೈಲಿನಲ್ಲಿ ಇದ್ದು ಬಂದಿದ್ದರು. ಅವರನ್ನು ಮತ್ತೆ ಬಿಗ್ ಬಾಸ್ ಒಳಕ್ಕೆ ಕರೆದುಕೊಳ್ಳಲಾಗಿತ್ತು.

ಇದೀಗ ವಾರೆಂಟ್ ಜಾರಿ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಕಾರಿನಲ್ಲಿಯೇ ನೇರವಾಗಿ ಕೋರ್ಟ್‌ಗೆ ಬಂದು ಕೋರ್ಟ್ ವಿಚಾರಣೆ ಮುಗಿಸಿ ಪುನಃ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾಳೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು 64 ದಿನಗಳನ್ನು ಕಳೆದಿದ್ದಾಳೆ. ಇನ್ನು 36 ದಿನಗಳನ್ನು ಕಳೆದರೆ ಬಿಗ್ ಬಾಸ್ ರಿಯಾಲಿಟಿ ಶೋ 100 ದಿನಗಳನ್ನು ಪೂರೈಸಲಿದ್ದಾರೆ.

ಏನಿದು ಕೋಟಿ ವಂಚನೆ ಪ್ರಕರಣ?

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ಚೈತ್ರಾ ಕುಂದಾಪುರ ಹಾಗೂ ಆಕೆಯ ಗ್ಯಾಂಗ್‌ ವಂಚನೆ ಮಾಡಿತ್ತು.

ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಗೋವಿಂದ ಬಾಬು ಪೂಜಾರಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಪ್ರಕರಣದ ಮೂಲಕ ಹಿಂದೂಪರ ಹೋರಾಟಗಾರ್ತಿ ಎಂದು ಬಿಂಬಿಸಿಕೊಂಡಿದ್ದ ಚೈತ್ರಾಳ ಮತ್ತೊಂದು ಮುಖ ಅನಾವರಣಗೊಂಡಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಚೈತ್ರಾಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಬಳಿಕ ಆಕೆ ಜಾಮೀನಿನ ಮೇಲೆ ಹೊರಬಂದಿದ್ದಳು.

Read More
Next Story