ಸಿಇಟಿ
CET 2024 | ಎರಡನೇ ಸುತ್ತಿಗೆ 48 ಸಾವಿರ ಸೀಟು ಉಳಿಕೆ
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಮೂಲಕ ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಿದ್ದ 1.07 ಲಕ್ಷ ಸೀಟುಗಳಲ್ಲಿ 48 ಸಾವಿರ ಸೀಟುಗಳನ್ನು ಎರಡನೇ ಸುತ್ತಿಗೆ ಕಾಯ್ದಿರಿಸಲಾಗಿದೆ.
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಮೂಲಕ ಮೊದಲ ಸುತ್ತಿನಲ್ಲಿ ಹಂಚಿಕೆ ಮಾಡಿದ್ದ 1.07 ಲಕ್ಷ ಸೀಟುಗಳಲ್ಲಿ 48 ಸಾವಿರ ಸೀಟುಗಳನ್ನು ಎರಡನೇ ಸುತ್ತಿಗೆ ಕಾಯ್ದಿರಿಸಲಾಗಿದೆ.
ವೈದ್ಯಕೀಯ ಸೀಟು ಹಂಚಿಕೆಯ ನಿರೀಕ್ಷೆಯಲ್ಲಿರುವ ಸಿಇಟಿ ಅಗ್ರ ಶ್ರೇಯಾಂಕದ ವಿದ್ಯಾರ್ಥಿಗಳು ಮೊದಲ ಸುತ್ತಿನಲ್ಲಿ ಪ್ರತಿಷ್ಠಿತ ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡರೂ, ಕಾಲೇಜುಗಳಿಗೆ ಪ್ರವೇಶ ಪಡೆಯದೇ ಸೀಟುಗಳನ್ನು ಕಾಯ್ದಿರಿಸಿದ್ದಾರೆ.
ಎಂಜಿನಿಯರಿಂಗ್ ವಿಭಾಗದ 64,490 ಸೀಟುಗಳಲ್ಲಿ 32,866 ಸೀಟುಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 9 ಸಾವಿರ ವಿದ್ಯಾರ್ಥಿಗಳು ಯಾವುದೇ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿಲ್ಲ. 19,386 ವಿದ್ಯಾರ್ಥಿಗಳು ಪ್ರವೇಶದ ಆದೇಶವನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೂ, 16,038 ವಿದ್ಯಾರ್ಥಿಗಳಷ್ಟೇ ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.
Next Story