ಕೇಂದ್ರಕ್ಕೆ ನಮ್ಮ ಮೇಲೆ ಮಲತಾಯಿ ಪ್ರೀತಿ, ನಿಮ್ಮ ಗಲ್ಲ ಹಿಡಿದಾದ್ರೂ ಅನುದಾನ ತನ್ನಿ; ಅಶೋಕ್‌ಗೆ ಸವದಿ ಟಾಂಗ್!
x

ಆರ್‌ ಅಶೋಕ್‌ 

ಕೇಂದ್ರಕ್ಕೆ ನಮ್ಮ ಮೇಲೆ ಮಲತಾಯಿ ಪ್ರೀತಿ, ನಿಮ್ಮ ಗಲ್ಲ ಹಿಡಿದಾದ್ರೂ ಅನುದಾನ ತನ್ನಿ; ಅಶೋಕ್‌ಗೆ ಸವದಿ ಟಾಂಗ್!

ಚರ್ಚೆಯನ್ನು ಆರಂಭಿಸಿದ ಸವದಿ, "ಪ್ರತಿ ವರ್ಷ ಬೆಂಗಳೂರಿನ ಕಸವನ್ನು ತಂದು ಇಲ್ಲಿ ಒಗೆಯುತ್ತಿದ್ದರು (ಅಪ್ರಸ್ತುತ ಚರ್ಚೆಗಳು ನಡೆಯುತ್ತಿದ್ದವು), ಆದರೆ ಈ ಸಲ ಹಾಗೆ ಆಗಲಿಲ್ಲ, ಉತ್ತಮ ಚರ್ಚೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಅನೇಕ ಕಡೆ ತಾರತಮ್ಯದ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಚರ್ಚೆಗಳು ನಡೆದವು.


Click the Play button to hear this message in audio format

"ಕೇಂದ್ರ ಸರ್ಕಾರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ವಿಪಕ್ಷದವರಾದ ನೀವು ಅವರ ಸ್ವಂತ ಮಕ್ಕಳು. ಹೀಗಾಗಿ ನೀವಾದರೂ ದೆಹಲಿಗೆ ಹೋಗಿ, ಪ್ರಧಾನಿಗಳ ಗಲ್ಲ, ತುಟಿ ಹಿಡಿದು ನಮಗೇನಾದರೂ ಅನುದಾನ ಕೇಳಿ ತನ್ನಿ," ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಚಾಟಿ ಬೀಸಿದ್ದಾರೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ಆಡಳಿತ ಮತ್ತು ವಿಪಕ್ಷ ನಾಯಕರುಗಳ ನಡುವೆ ರಾಜಕೀಯ ವಾಗ್ಸಮರ, ಲೇವಡಿ ಮತ್ತು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಪ್ರಸ್ತಾಪವಾಯಿತು.

ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಸಹಮತವಿಲ್ಲ

ಚರ್ಚೆಯನ್ನು ಆರಂಭಿಸಿದ ಸವದಿ, "ಪ್ರತಿ ವರ್ಷ ಬೆಂಗಳೂರಿನ ಕಸವನ್ನು ತಂದು ಇಲ್ಲಿ ಒಗೆಯುತ್ತಿದ್ದರು (ಅಪ್ರಸ್ತುತ ಚರ್ಚೆಗಳು ನಡೆಯುತ್ತಿದ್ದವು), ಆದರೆ ಈ ಸಲ ಹಾಗೆ ಆಗಲಿಲ್ಲ, ಉತ್ತಮ ಚರ್ಚೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಅನೇಕ ಕಡೆ ತಾರತಮ್ಯದ ಕಾರಣಕ್ಕೆ ಪ್ರತ್ಯೇಕ ರಾಜ್ಯದ ಚರ್ಚೆಗಳು ನಡೆದವು. ಆ ಆಲೋಚನೆ ಬರಲು ಅಭಿವೃದ್ಧಿಯಲ್ಲಿನ ತಾರತಮ್ಯವೇ ಕಾರಣ. ಆದರೆ, ಅಖಂಡ ಕರ್ನಾಟಕ ಒಡೆಯಲು ನಮ್ಮ್ಯಾರ ಸಹಮತವಿಲ್ಲ," ಎಂದು ಸ್ಪಷ್ಟಪಡಿಸಿದರು.

ಅಶೋಕ್-ಸವದಿ ಜಟಾಪಟಿ: "ಮದುವೆ ಆಗೋವರೆಗೂ ಹುಚ್ಚು ಬಿಡಲ್ಲ"

ಸವದಿ ಮಾತುಗಳ ಮಧ್ಯೆ ಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ಲೇವಡಿ ಮಾಡಿದರು. "ನಿಮ್ಮ ಸರ್ಕಾರದ ನಡೆ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯನವರು ಒಂದು ದಿನವೂ ಬನ್ನಿ ದೆಹಲಿಗೆ ಹೋಗೋಣ ಅಂದಿಲ್ಲ. ಅವರ ಜಗಳವೇ ಇನ್ನೂ ಮುಗಿದಿಲ್ಲ. ಇವರ ಕತೆ 'ಮದುವೆ ಆಗುವವರೆಗೂ ಹುಚ್ಚು ಬಿಡಲ್ಲ, ಹುಚ್ಚು ಬಿಡುವವರೆಗೆ ಮದುವೆ ಆಗಲ್ಲ' ಎನ್ನುವಂತಾಗಿದೆ," ಎಂದು ವ್ಯಂಗ್ಯವಾಡಿದರು.

ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ನವಲಗುಂದ ಶಾಸಕ ಕೋನರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಅಶೋಕ್, "ನನ್ನ ಮತ್ತು ಸವದಿ ಮಧ್ಯೆ ನೀನು ಬರಬೇಡ, ಅದರಿಂದ ಏನೂ ಉಪಯೋಗ ಆಗಲ್ಲ," ಎಂದು ಸುಮ್ಮನಾಗಿಸಿದರು.

ಸೂಟ್ ಕೇಸ್ ಮತ್ತು ರೈತರ ಕಷ್ಟ

ನಂತರ ಮಾತು ಮುಂದುವರಿಸಿದ ಲಕ್ಷ್ಮಣ ಸವದಿ, ಸಕ್ಕರೆ ಕಾರ್ಖಾನೆಗಳು ಮತ್ತು ರೈತರ ಸಂಕಷ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. "ನಾನು ಸದನದಲ್ಲಿ ರೈತರ ಪರವಾಗಿ ಮಾತನಾಡದಿದ್ದರೆ, ಶಾಸಕರಿಗೆ 'ಸೂಟ್ ಕೇಸ್' ಮುಟ್ಟಿದೆ, ಅದಕ್ಕೆ ಸುಮ್ಮನಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ರೈತರಿಗೆ ಕಬ್ಬು ತೂಕದಲ್ಲಿ ಮೋಸವಾಗುತ್ತಿದೆ. ವೇ ಬ್ರಿಡ್ಜ್ (ತೂಕದ ಯಂತ್ರ) ಅಳವಡಿಸದ ಕಾರ್ಖಾನೆಗಳ ಪವರ್ ಕಟ್ ಮಾಡಿ," ಎಂದು ಸರ್ಕಾರವನ್ನು ಒತ್ತಾಯಿಸಿದರು.

"ಬಾಗಲಕೋಟೆಯ ತೋಟಗಾರಿಕೆ ವಿವಿಯವರು ಲಕ್ಷಾಂತರ ರೂಪಾಯಿ ಸಂಬಳ ತೆಗೆದುಕೊಂಡು ಏನು ಮಾಡುತ್ತಿದ್ದಾರೆ ಎನ್ನುವುದೇ ಗೊತ್ತಾಗುತ್ತಿಲ್ಲ," ಎಂದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಲತಾಯಿ ಧೋರಣೆ ಮತ್ತು ಗಲ್ಲದ ಮಾತು!

ಸಹಕಾರಿ ಸಕ್ಕರೆ ಕಾರ್ಖಾನೆಗಳ ಉಳಿವಿನ ಬಗ್ಗೆ ಮಾತನಾಡಿದ ಅವರು, "ಕೇಂದ್ರ ಸರ್ಕಾರ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕೊಡದಿದ್ದರೆ ಮುಂದಿನ ವರ್ಷ ಸಹಕಾರಿ ಸಕ್ಕರೆ ಕಾರ್ಖಾನೆಗಳು ಬಂದ್ ಆಗುತ್ತವೆ. ಇಲ್ಲದಿದ್ದರೆ ಕೇಂದ್ರ ಸರ್ಕಾರವೇ ಇವುಗಳನ್ನು ವಶಪಡಿಸಿಕೊಂಡು ನಡೆಸಲಿ. ಕೇಂದ್ರದವರು ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಾರೆ. ಅದೇ ನೀವು (ಬಿಜೆಪಿ) ಅವರ ಸ್ವಂತ ಮಕ್ಕಳು. ನೀವು ದೆಹಲಿಗೆ ಹೋದರೆ ನಿಮ್ಮ ಗಲ್ಲ, ತುಟಿ ಹಿಡಿದು ಮುದ್ದಾಡಿ ಏನಾದರೂ ಕೊಟ್ಟು ಕಳಿಸುತ್ತಾರೆ ಎಂಬ ಆಸೆ ನಮ್ಮದು. ದಯವಿಟ್ಟು ನಿಯೋಗದ ನೇತೃತ್ವ ವಹಿಸಿ," ಎಂದು ಅಶೋಕ್ ಅವರಿಗೆ ಮನವಿ ಮಾಡಿದರು.

Read More
Next Story