ರಾಜ್ಯಪಾಲರ  ಮೇಲೆ ಕೇಂದ್ರದ ಒತ್ತಡ: ಗೃಹ ಸಚಿವ ಪರಮೇಶ್ವರ್
x

ರಾಜ್ಯಪಾಲರ ಮೇಲೆ ಕೇಂದ್ರದ ಒತ್ತಡ: ಗೃಹ ಸಚಿವ ಪರಮೇಶ್ವರ್


ರಾಜ್ಯಪಾಲರು ಸಚಿವ ಸಂಪುಟ ಸಲಹೆ ಕೇಳಿದ ಮೇಲೆ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡುವುದಿಲ್ಲ ಎಂದು ಭಾವಿಸಿದ್ದೆವು ಆದರೆ ಈಗ ಅನುಮತಿ ನೀಡಿದ್ದಾರೆ ಎಂದರೆ ಅದಕ್ಕೆ ಕಾರಣ ಕೇಂದ್ರದ ಒತ್ತಡವಿದೆ ಎನ್ನುವುದು ತಿಳಿಯುತ್ತದೆʼʼ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದರ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻರಾಜ್ಯಪಾಲರು ಸಚಿವ ಸಂಪುಟ ಸಲಹೆ ಕೇಳಿದ ಮೇಲೆ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡುವುದಿಲ್ಲ ಎಂದು ಭಾವಿಸಿದ್ದೇವು. ಶೋಕಾಷ್‌ ನೋಟಿಸ್‌ಗೆ ವಿಸ್ತಾರವಾಗಿ ಮಾಹಿತಿ ನೀಡಿಯೂ ಅವರು ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ಬಗ್ಗೆ ಕಾನೂನಾತ್ಮ ಹೋರಾಟ ಮಾಡುತ್ತೇವೆʼʼ ಎಂದು ತಿಳಿಸಿದ್ದಾರೆ.

ʻʻರಾಜ್ಯಪಾಲರ ಮೇಲೆ ಒಂದು ವಿಶ್ವಾಸವಿತ್ತು. ಅವರು ಅನುಮತಿ ಕೊಡುವುದಿಲ್ಲ ಎಂದು ಭಾವಿಸಿದ್ದೇವು. ಆದರೆ ಅವರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸ್ವಾಭಾವಿಕವಾಗಿಯೇ ರಾಜ್ಯಪಾಲರ ಮೇಲಿನ ಕೇಂದ್ರದ ಒತ್ತಡ ಕಾಣಿಸುತ್ತದೆʼʼ ಎಂದರು.

ʻʻಸಿಎಂ ಸಿದ್ದರಾಮಯ್ಯ ಅವರು ಲೀಗಲ್‌ ಟೀಂ ಜೊತೆಯಲ್ಲಿ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ನಾವು ಈಗಾಗಲೇ ಹೇಳಿದಂತೆ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದವಿದ್ದು, ಮುಂದಿನ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರು ಹೇಳಿದರು.

Read More
Next Story