
ಗಾಯಗೊಂಡಿರುವ ವಿದ್ಯಾರ್ಥಿ
ಸೇಡಂ: ಸರ್ಕಾರಿ ಶಾಲೆಯ ಸೀಲಿಂಗ್ ಕುಸಿತ; ಮೂವರು ವಿದ್ಯಾರ್ಥಿಗಳಿಗೆ ಗಾಯ
ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರನ್ನು ಹೊರರೋಗಿಗಳಾಗಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ.
ಸರ್ಕಾರಿ ಶಾಲೆಯೊಂದರ ಸೀಲಿಂಗ್ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಕುಲಬುರಗಿ ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಗುರುಮಿಠಕಲ್ ತಾಲೂಕು ಆಸ್ಪತ್ರೆಗೆ ಗಾಯಗೊಂಡು ಚಿಕಿತ್ಸೆ ನೀಡಲಾಗಿದೆ.
ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಬ್ಬರನ್ನು ಹೊರರೋಗಿಗಳಾಗಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಒಬ್ಬ ಬಾಲಕನ ತಲೆಗೆ ಗಾಯವಾಗಿದ್ದು, ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ. 2 ಹೊಲಿಗೆ ಹಾಕಲಾಗಿದೆ. ಚಿಕಿತ್ಸೆ ಬಳಿಕ ಬಾಲಕನನ್ನೂ ಮನೆಗೆ ಕಳುಹಿಸಲಾಗಿದೆ ಎಂದು ಸೇಡಂ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹಜುರತಿ ಹೇಳಿದ್ದಾರೆ.
ಈ ನಡುವೆ, ಹೊಸ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದರೂ ಶಾಲೆಯು ಹಳೆಯ ಕಟ್ಟಡದಲ್ಲೇ ಮುಂದುವರಿಯುತ್ತಿರುವ ಕಾರಣವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಕಾಂತ್ ಮದನಿ ವಿವರಿಸಿದ್ದಾರೆ. ಹೊಸ ಕಟ್ಟಡಕ್ಕೆ ತೆರಳಲು ವಿವಾದಿತ ಭೂಮಿಯ ಮೂಲಕ ಹಾದುಹೋಗಬೇಕಾದ್ದರಿಂದ, ಭೂ ಮಾಲೀಕರು ಮತ್ತು ಗ್ರಾಮ ಪಂಚಾಯತ್ ನಡುವಿನ ವಿವಾದ ಇತ್ಯರ್ಥವಾಗುವವರೆಗೂ ವಿದ್ಯಾರ್ಥಿಗಳು ಹಳೆಯ ಕಟ್ಟಡದಲ್ಲೇ ಪಾಠ ಕಲಿಯಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.