Caste Census |ಜಾತಿ ಜನಗಣತಿ ವರದಿ ಜಾರಿಗೆ ಬಿಡದ ಗ್ರಹಣ; ಪ್ರಬಲ ಸಮುದಾಯಗಳ ʼಸಮಾಧಾನʼಕ್ಕೆ ಮತ್ತೆ ಮುಂದೂಡಿಕೆ
x
ಇದು ಎಐ ಚಿತ್ರ

Caste Census |ಜಾತಿ ಜನಗಣತಿ ವರದಿ ಜಾರಿಗೆ ಬಿಡದ ಗ್ರಹಣ; ಪ್ರಬಲ ಸಮುದಾಯಗಳ ʼಸಮಾಧಾನʼಕ್ಕೆ ಮತ್ತೆ ಮುಂದೂಡಿಕೆ

ʼಜಾತಿ ಗಣತಿ ವರದಿ ಜಾರಿʼಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಳೆದ ಕೆಲವು ಸಂಪುಟಸಭೆಗಳಲ್ಲಿ ಈ ಸಂಬಂಧ ನಿರ್ಧಾರದ ಬಗ್ಗೆ ʼಮುಂದೂಡಿಕೆʼ ತಂತ್ರವನ್ನು ಹೆಣೆದಿರುವ ಕಾಂಗ್ರೆಸ್‌ ಸರ್ಕಾರ ಶುಕ್ರವಾರ (ಮೇ22) ನಡೆದ ಸಚಿವ ಸಂಪುಟ ಸಭೆಯಲ್ಲೂ ಮುಂದೂಡಿಕೆ ತಂತ್ರಕ್ಕೆ ಶರಣಾಗಿದೆ.


ʼಜಾತಿ ಗಣತಿ ವರದಿ ಜಾರಿʼಗೆ ಹಿಡಿದ ಗ್ರಹಣ ಇನ್ನೂ ಬಿಟ್ಟಿಲ್ಲ. ಕಳೆದ ಕೆಲವು ಸಂಪುಟಸಭೆಗಳಲ್ಲಿ ಈ ಸಂಬಂಧ ನಿರ್ಧಾರದ ಬಗ್ಗೆ ʼಮಂದೂಡಿಕೆʼ ತಂತ್ರವನ್ನು ಹೆಣೆದಿರುವ ಕಾಂಗ್ರೆಸ್‌ ಸರ್ಕಾರ ಶುಕ್ರವಾರ (ಮೇ22) ನಡೆದ ಸಚಿವ ಸಂಪುಟ ಸಭೆಯಲ್ಲೂ ಮುಂದೂಡಿಕೆ ತಂತ್ರಕ್ಕೆ ಶರಣಾಗಿದೆ.

ಶುಕ್ರವಾರದ ಸಚಿವ ಸಂಪುಟ ಸಭೆಯ ನಡಾವಳಿಯಲ್ಲಿ ಜಾತಿ ಗಣತಿ ವರದಿ (ಸಾಮಾಜಿಕ ಶೈಕ್ಷಣಿಕ ವರದಿ) ಸಂಬಂಧ ಚರ್ಚೆ ವಿಷಯ ಪ್ರಸ್ತಾಪವಾಗಿತ್ತು. ಆದರೆ, ಸಚಿವರು ವರದಿ ಬಗ್ಗೆ ತಮ್ಮ ಅಭಿಪ್ರಾಯದ ವರದಿ ಇನ್ನೂ ಕೊಡದ ಹಿನ್ನಲೆ ವಿಷಯ ಮುಂದೂಡಿಕೆ ಮಾಡಲಾಗಿದೆ . ಕೇವಲ 11 ಸಚಿವರು ಮಾತ್ರ ವರದಿ ಬಗ್ಗೆ ಅಭಿಪ್ರಾಯ ನೀಡಿದ್ದಾರೆ. ಉಳಿದ ಸಚಿವರ ಅಭಿಪ್ರಾಯಗಳಿಗಾಗಿ ಸರ್ಕಾರ ಕಾಯುತ್ತಿದೆ. ಎಲ್ಲರ ಅಭಿಪ್ರಾಯಗಳನ್ನು ಕ್ರೂಢೀಕರಿಸಿದ ಬಳಿಕವೇ ಸೂಕ್ತ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಅಂದರೆ ಗುರವಾರ (ಮೇ22) ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಗಣತಿ) ಸಂಬಂಧ ಮಹತ್ವದ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ.

ರಾಜಕೀಯವಾಗಿ ಪ್ರಬಲ ಸಮುದಾಯಗಳಾಗಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಈ ವರದಿ ಜಾರಿ ಸಂಬಂಧ ಪ್ರಬಲ ವಿರೋಧ ವ್ಯಕ್ತಪಡಿಸಿರುವುದರಿಂದ ಮುಂದೂಡಿಕೆ ತಂತ್ರವನ್ನು ಹೆಣೆಯಾಲಾಗಿದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿರುವ ಕಾರಣ ವರದಿ ಜಾರಿ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿತ್ತು. ಆದರೆ, ಅದೇ ನೆಪವೊಡ್ಡಿ, ರಾಜ್ಯದ ಜಾತಿ ಗಣತಿ ವರದಿಯನ್ನು ಜಾರಿಗೊಳಿಸದೆ ಕೇಂದ್ರದತ್ತ ಬೆಟ್ಟು ಮಾಡುವ ತಂತ್ರವೂ ಇದೆ ಎನ್ನಲಾಗಿದೆ.

ಮೇ 9ರಂದು ನಡೆದ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಸಂಬಂಧ ಸರ್ಕಾರ ನಿರ್ಧಾರವೊಂದಕ್ಕೆ ಬರಬೇಕಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ದಾಳಿ-ಪ್ರತಿದಾಳಿ ನಡೆದು ವಿಷಮ ಪರಿಸ್ಥಿತಿ ಎದುರಾಗಿದ್ದ ಹಿನ್ನೆಲೆಯಲ್ಲಿ ಜಾತಿ ಗಣತಿ ಸಂಬಂಧ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ.

ಏ.​ 11ರಂದು ವರದಿಯನ್ನು ಸ್ವೀಕರಿಸಿದ್ದ ರಾಜ್ಯ ಸರ್ಕಾರ ಏ.​ 17ರಂದು ವಿಶೇಷ ಕ್ಯಾಬಿನೆಟ್​ ಸಭೆಯಲ್ಲಿ ಚರ್ಚೆ ನಡೆಸಿ, ಸಚಿವರ ಅಭಿಪ್ರಾಯ ಸಂಗ್ರಹಿಸಿತ್ತು. ಸಂಪುಟ ಸಭೆಯಲ್ಲಿ ವರದಿ ಅಂಕಿ ಅಂಶಗಳಿಗೆ ಕೆಲ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಮೇ 2ರಂದು ಮತ್ತೊಂದು ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರಬಲ ಜಾತಿಗಳ ಒತ್ತಡ ಹಾಗೂ ಇತರೆ ಕಾರಣಗಳಿಂದ ಸಭೆ ಮುಂದೂಡಲಾಗಿತ್ತು.

ಶೀಘ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಹೀಗಾಗಿ ಕರ್ನಾಟಕದ ಜಾತಿ ಗಣತಿಯ ಕತೆಯೇನಾಗಬಹುದು ಎಂಬ ಚರ್ಚೆ ಶುರುವಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಜಾತಿ ಗಣತಿಯ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಅದರ ಜಾರಿಗೆ ಸರ್ಕಾರ ಮುಂದಾದರೂ ಕ್ಯಾಬಿನೆಟ್​ ಸಚಿವರೊಳಗೆ ಭಿನ್ನಾಭಿಪ್ರಾಯ ಒಡಲ ಬೆಂಕಿಯಾಗಿ ಸುಡುತ್ತಿದೆ. ಪ್ರಭಾವಿ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಗಣತಿಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿದ್ದಾರೆ.

ಕರ್ನಾಟಕವು 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಕ ಜಾತಿ ಗಣತಿ ನಡೆಸಿದ ದೇಶದ ಮೊದಲ ರಾಜ್ಯವಾಗಿತ್ತು. ಆದರೆ, ಈ ವರದಿಯನ್ನು ರಾಜಕೀಯ ಕಾರಣಗಳಿಂದ ಜಾರಿಗೊಳಿಸಿರಲಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವರದಿಯ ವೈಜ್ಞಾನಿಕತೆಯನ್ನು ಪ್ರಶ್ನಿಸಿದರೆ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಇದರ ಜಾರಿಗೆ ಒತ್ತಾಯಿಸಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಕರ್ನಾಟಕದ ರಾಜಕೀಯದ ಮೇಲೆಯೂ ಪರಿಣಾಮ ಬೀರಲಿದೆ.

Read More
Next Story