ಮತ್ತೊಂದು ʼಕಾಂತಾರʼವಾಗಲಿದೆಯೇ ಜೂ.ಎನ್ ಟಿ ಆರ್‌ ʼದೇವರʼ?
x
ದೇವರ ಸಿನಿಮಾ

ಮತ್ತೊಂದು ʼಕಾಂತಾರʼವಾಗಲಿದೆಯೇ ಜೂ.ಎನ್ ಟಿ ಆರ್‌ ʼದೇವರʼ?

"ಎಲ್ಲಾ ದಕ್ಷಿಣ ರಾಜ್ಯಗಳ ಹಳ್ಳಿಗಳಲ್ಲಿ ಕುಲದೈವವನ್ನು ಪೂಜಿಸುವ ಸಂಸ್ಕೃತಿಯನ್ನು ಹೊಂದಿವೆ. ʼಕಾಂತಾರʼ ವನ್ನು ಸಹ ನಾನು ನನ್ನ ಬಾಲ್ಯದಲ್ಲಿ ನನ್ನ ತಾಯಿಯಿಂದ ಕೇಳಿದ್ದ ಅಂತಹ ಒಂದು ದೇವತೆಯನ್ನು ಆಧರಿಸಿ ನಿರ್ಮಿಸಲಾಗಿದೆ. ʼದೇವರಾʼ ತೆಲುಗಿನಲ್ಲಿ ದೇವತೆಯ ಪುರುಷ ರೂಪವಾಗಿದೆ" ಎಂದು ನಟ ಹೇಳಿದ್ದಾರೆ


Click the Play button to hear this message in audio format

ಜೂನಿಯರ್‌ ನಂದಮೂರಿ ತಾರಕ್ ರಾಮರಾವ್ ಅಥವಾ ಜೂನಿಯರ್‌ ಎನ್‌ ಟಿ ಆರ್‌ ಎಂದೇ ಜನಪ್ರಿಯರಾಗಿರುವ ನಟನ ಮಹತ್ವಾಕಾಂಕ್ಷೆಯ ಚಿತ್ರ ದೇವರ ಸೆಪ್ಟೆಂಬರ್ 27 ರಂದು ತೆರೆಗೆ ಬರಲಿದೆ. ಅಖಿಲ ಭಾರತ ʻಮ್ಯಾಗ್ನಮ್ ಓಪಸ್ʼ ಎಂದೇ ಹೇಳಲಾಗುತ್ತಿರುವ ದೇವರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಉಳಿದಿರುವುದು ಕೇವಲ ಎರಡು ದಿನ ಮಾತ್ರ.

ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್‌ನಲ್ಲಿ ಹುಲಿಗಳನ್ನು ಮತ್ತು ಬ್ರಿಟಿಷ್ ಆಡಳಿತಗಾರರನ್ನು ಸುಲಭ ವಾಗಿ ಹಿಮ್ಮೆಟ್ಟಿಸುವ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರನಾಗಿ ನಟಿಸುವ ಮೂಲಕ ಅನೇಕರ ಹೃದಯವನ್ನು ಗೆದ್ದಿರುವ ನಟ, ದೇವರ ಬಿಡುಗಡೆಯ ಮುನ್ನಾದಿನದಂದು ಆತಂಕಗೊಂಡಿದ್ದೇನೆ ಎಂದು ತಾವೇ ಹೇಳಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಜೂನಿಯರ್ ಎನ್‌ಟಿಆರ್, " ಆರ್‌ಆರ್‌ಆರ್ ʼ ಸಂಪೂರ್ಣವಾಗಿ ರಾಜಮೌಳಿ ಚಿತ್ರ, ಆದ್ದರಿಂದ ನಾನು ಚಿಂತಿಸಲಿಲ್ಲ ಮತ್ತು ಯಾವುದೇ ಒತ್ತಡವಿಲ್ಲದೆ ಎಲ್ಲಾ ಪ್ರಚಾರ ಸಂದರ್ಶನಗಳನ್ನು ಆನಂದಿಸಿದೆ. ಆದರೆ ದೇವರ ದೊಂದಿಗಿನ , ಚಿತ್ರದ ಬಗ್ಗೆ ನನಗೆ ವಿಶ್ವಾಸವಿದ್ದರೂ, ನಾನು ಈಗ ಅಗಾಧವಾದ ಒತ್ತಡವನ್ನು ಅನುಭವಿಸುತ್ತಿದ್ದೇನೆ ಏಕೆಂದರೆ ಇದು ಆರು ವರ್ಷಗಳಲ್ಲಿ ನನ್ನ ಮೊದಲ ʼಸೋಲೋʼ ಬಿಡುಗಡೆಯ ಚಿತ್ರ.

ಕೊರಟಾಲ ಶಿವ ಮತ್ತು ಜೂನಿಯರ್ ಎನ್‌ಟಿಆರ್ ಹಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ - ಜೂನಿಯರ್ ಎನ್‌ಟಿಆರ್ ಅವರ ಬೃಂದಾವನಂ ಮತ್ತು ಊಸರವೆಲ್ಲಿ, ಚಿತ್ರಗಳಿಗೆ ಶಿವ ಸಂಭಾಷಣೆ ಬರಹಗಾರರಾಗಿದ್ದರು ಮತ್ತು ಜನತಾ ಗ್ಯಾರೇಜ್‌ನಲ್ಲಿ ಅವರು ನಿರ್ದೇಶಕರಾಗಿದ್ದರು. ದೇವರಾ ಶಿವ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ನಾಲ್ಕನೇ ಒಡನಾಟದ ಚಿತ್ರವಾಗಿದೆ.

ಎರಡು ಭಾಗಗಳ ಚಿತ್ರ

ಜೂನಿಯರ್ ಎನ್‌ಟಿಆರ್ ಪ್ರಕಾರ, ಶಿವ ಅವರು ಆರ್‌ಆರ್‌ಆರ್ ಚಿತ್ರೀಕರಣದ ಸಂದರ್ಭದಲ್ಲಿ ದೇವರ ಸಾರಾಂಶವನ್ನು ವಿವರಿಸಿದರು ಮತ್ತು ನಂತರ ಅದನ್ನು "ಅದ್ಭುತ ಸ್ಕ್ರಿಪ್ಟ್" ಆಗಿ ರೂಪಿಸಿದರು. ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಅವರು ದೇವರ ಮತ್ತು ವರ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದಾರೆ.

ಮೊದಲು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇರಲಿಲ್ಲ ಆದರೆ ಎರಡು ಭಾಗವಾಗಿ ಮಾಡುವ ಕ್ರಿಯೆ ಸಾವಯವವಾಗಿ ಸಂಭವಿಸಿತು ಎಂದು ಮುಕ್ತವಾಗಿ ಮಾತನಾಡುವ ಜೂನಿಯರ್‌ ಎನ್‌ ಟಿ ಆರ್‌ ಒಪ್ಪಿಕೊಳ್ಳುತ್ತಾರೆ.

ವಾಸ್ತವವಾಗಿ, ಅವರು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದಾಗಲೂ, ಇದು ಎರಡು ಭಾಗಗಳ ಚಿತ್ರವಾಗಿರಲಿಲ್ಲ. ಆದಾಗ್ಯೂ, ಚಿತ್ರದ ತಯಾರಿಕೆಯು ಮುಂದುವರೆದಂತೆ, ಅವರು ಚಿತ್ರೀಕರಿಸಿದ ಸೀಕ್ವೆನ್ಸ್‌ಗಳ ರನ್‌ಟೈಮ್ ಐದು ಗಂಟೆಗಳಿಗಿಂತ ಹೆಚ್ಚಾಯಿತು. ನಮ್ಮ ಪ್ರೇಕ್ಷಕರು ಐದು ಗಂಟೆಗಳ ಅವಧಿಯ ಚಲನಚಿತ್ರವನ್ನು ವೀಕ್ಷಿಸಲು ತೆರೆದಿದ್ದರೆ, ನಾವು ದೇವರನ್ನು ಒಂದೇ ಭಾಗದ ಚಲನಚಿತ್ರವಾಗಿ ಬಿಡುಗಡೆ ಮಾಡುತ್ತೇವೆ. ದುರದೃಷ್ಟವಶಾತ್, ಭಾರತದಲ್ಲಿ ಅಂಥ ವಾತಾವರಣ ಇಲ್ಲ. ಆದ್ದರಿಂದ, ನಾವು ನಮ್ಮ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಶಿವನ ಚಿತ್ರಕಥೆ ಬಿಗಿಯಾಗಿದೆ ಮತ್ತು ಇದು ಎರಡು ಭಾಗಗಳಿಗೆ ಪರಿಪೂರ್ಣ ಹರಿವನ್ನು ಹೊಂದಿದೆ ಹಾಗಾಗೆ ನಾನು ಮತ್ತೆ ಹೇಳುತ್ತೇನೆ ಎರಡು ಭಾಗಗಳ ಚಲನಚಿತ್ರವನ್ನು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ, ಅದು ಕೇವಲ ಸಾವಯವವಾಗಿ ಸಂಭವಿಸಿದೆ, ”ಎಂದು ಅವರು ವಿವರಿಸುತ್ತಾರೆ.

ಪುರುಷ ದೇವತೆ

ಇನ್ನು, 'ದೇವರ' ಶೀರ್ಷಿಕೆಯ ಬಗ್ಗೆ ಮಾತನಾಡಿದ ನಟ, "ಎಲ್ಲಾ ದಕ್ಷಿಣ ರಾಜ್ಯಗಳು ಹಳ್ಳಿಗಳಲ್ಲಿ ಕುಲದೈವವನ್ನು ಪೂಜಿಸುವ ಸಂಸ್ಕೃತಿಯನ್ನು ಹೊಂದಿವೆ. ಕಾಂತಾರ ವನ್ನು ಸಹ ನಾನು ನನ್ನ ಬಾಲ್ಯದಲ್ಲಿ ನನ್ನ ತಾಯಿಯಿಂದ ಕೇಳಿದ್ದ ಅಂತಹ ಒಂದು ದೇವತೆಯನ್ನು ಆಧರಿಸಿ ನಿರ್ಮಿಸಲಾಗಿದೆ. ದೇವರಾ ತೆಲುಗಿನಲ್ಲಿ ದೇವತೆಯ ಪುರುಷ ರೂಪವಾಗಿದೆ.

ದೇವರ ಮುಖ್ಯ ಕಲ್ಪನೆಯು ಅಸಾಮಾನ್ಯವಾಗಿ ಹೆಚ್ಚು ಧೈರ್ಯವನ್ನು ಪ್ರದರ್ಶಿಸದ ನಾಯಕನ ಸುತ್ತ ಸುತ್ತುತ್ತದೆ ಎಂದು ಜೂನಿಯರ್ ಎನ್‌ಟಿಆರ್ ವಿವರಿಸುತ್ತಾರೆ. "ಸಾಮಾನ್ಯವಾಗಿ, ಭಾರತೀಯ ಮಾಸ್ ಎಂಟರ್‌ಟೈನರ್‌ಗಳಲ್ಲಿ, ಒಬ್ಬ ಹೀರೋ ಎಂದರೆ ಅವರು ಜನರಲ್ಲಿ ಬಲಿಷ್ಠ ಖಳನಾಯಕನ ವಿರುದ್ಧ ಹೋರಾಡಲು ಹೆದರುವ ಮನಃಸ್ಥಿತಿಯನ್ನು ಬದಲಿಸುತ್ತಾರೆ ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾರೆ. ಆದರೆ ದೇವರ ಕಥೆಯು ಇದಕ್ಕೆ ವಿರುದ್ಧವಾದ ಕಥೆಯನ್ನು ಹೇಳುತ್ತದೆ. ಕೆಲವೊಮ್ಮೆ ಕೂಡ ಹೆಚ್ಚಿನ ಆತ್ಮವಿಶ್ವಾಸವು ಒಳ್ಳೆಯದಲ್ಲ ಮತ್ತು ನಾವು ಜೀವನದಲ್ಲಿ ಕೆಲವು ವಿಷಯಗಳಿಗೆ ಭಯಪಡಬೇಕು ಶಿವ ಈ ವಿಶಿಷ್ಟ ಅಂಶವನ್ನು ಸುಂದರವಾಗಿ ಹೆಣೆದಿದ್ದಾರೆ. ಮತ್ತು ಅದನ್ನು ಸುಂದರವಾದ ಚಿತ್ರವನ್ನಾಗಿ ಮಾಡಿದ್ದಾರೆ.

ಸಂಗೀತ ಸಂಯೋಜಕ ಅನಿರುದ್ಧ್ ಮೇಲೆ

ಸಂಗೀತ ಸಂಯೋಜಕ ಅನಿರುದ್ಧ್ ಬಗ್ಗೆ ಜೂನಿಯರ್ ಎನ್‌ ಟಿ ಆರ್‌ ಅವರೂ ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಆರ್ ರೆಹಮಾನ್ ಅವರಂತೆ ಅನಿರುದ್ಧ್ ಕೂಡ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತಾರೆ ಎಂದು ಅವರು ಭಾವಿಸುತ್ತಾರೆ.

"ಇಡೀ ದೇಶವು ಅನಿರುದ್ಧ್ ಅವರ ಹಾಡುಗಳು ಮತ್ತು ಹಿನ್ನೆಲೆ ಸ್ಕೋರ್‌ಗೆ ಹೊಂದಿಕೊಂಡು ಬಿಟ್ಟಿದೆ. ಸತತ ಹಿಟ್‌ಗಳನ್ನು ನೀಡಿದ ಸಂಯೋಜಕರನ್ನು ನಾನು ನೋಡಿದ್ದೇನೆ ಮತ್ತು ಅವರು ಒಂದು ಹಂತದ ನಂತರ ಸೋತಿದ್ದಾರೆ. ಅನಿರುದ್ಧ್ ಆ ರೀತಿಯ ಸಾಮಾನ್ಯ ರೀತಿಯ ಸಂಯೋಜಕನಲ್ಲ ಎಂದು ನನಗೆ ಅನಿಸುತ್ತದೆ, ಅವರು ಅದನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಾರೆ. ಹಾಡುಗಳು ಹಿಟ್ ಆಗುತ್ತವೆ ಮತ್ತು ಅವರ ಹಿನ್ನೆಲೆ ಸ್ಕೋರ್‌ನೊಂದಿಗೆ ಚಿತ್ರವನ್ನು ಮೇಲಕ್ಕೆತ್ತುತ್ತವೆ, ”ಎಂದು ಜೂನಿಯರ್‌ ಎನ್‌ ಟಿ ಆರ್‌ ಅವರು ಹೇಳುತ್ತಾರೆ.

ಬಹಳ ಸಮಯದ ನಂತರ, ಜೂನಿಯರ್ ಎನ್‌ಟಿಆರ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಜೈಲರ್‌ನಲ್ಲಿ ನೋಡಿದ ಮೇಲೆ ಅನಿರುದ್ಧ ಅವರ ಸಂಗೀತದ ಶಕ್ತಿಯ ಅರಿವಾಗಿದೆ. ಮತ್ತು ಅದರ ಸಿನಿಮಾ ಗೆಲ್ಲಿಸುವುದರಲ್ಲಿ ಒಂದು ಭಾಗದ ಕ್ರೆಡಿಟ್‌ ಅನಿರುದ್ಧ್ ಅವರಿಗೆ ಸಲ್ಲುತ್ತದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ.

“ ಮಾಸ್ಟರ್ ಮತ್ತು ವಿಕ್ರಂನಲ್ಲಿ ಅವರ ಸಂಗೀತ ಸಂಯೋಜನೆ ಅಷ್ಟೇ ಅದ್ಭುತವಾಗಿದೆ. ಅನಿರುದ್ಧ್‌ನಲ್ಲಿ ನಾನು ಕಾಣುವ ಇನ್ನೊಂದು ಗುಣವೆಂದರೆ, ಒಂದೆರಡು ದಿನದಲ್ಲಿ ಹಾಡನ್ನು ಕೊಡಬೇಕಾದಂಥ ಸ್ಥಿತಿ ಬಂದರೂ ಒತ್ತಡಕ್ಕೆ ಒಳಗಾಗದಿರುವುದು. ದೇವರ ಟ್ರೇಲರ್‌ನಲ್ಲಿ ಅನಿರುದ್ಧ್ ಅವರ ಕೆಲಸವು ಕೇವಲ ಒಂದು ನೋಟವಾಗಿದೆ, ಅವರು ನಮ್ಮ ಚಿತ್ರಕ್ಕೆ ಏನು ಮಾಡಿದ್ದಾರೆ ಎಂಬುದು ಅತಿ ಅದ್ಭುತವಾಗಿದೆ" ಎಂದು ಜೂನಿಯರ್ ಎನ್‌ಟಿಆರ್ ಹೇಳಿದರು.

ಜಾನ್ವಿ ಕುರಿತು ಜೂನಿಯರ್ ಎನ್‌ಟಿಆರ್

ಎನ್‌ಟಿಆರ್ ಸೀನಿಯರ್ ಮತ್ತು ಶ್ರೀದೇವಿ ಅನೇಕ ಬ್ಲಾಕ್‌ಬಸ್ಟರ್‌ಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈಗ, ಜೂನಿಯರ್ ಎನ್ಟಿಆರ್ ಮತ್ತು ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಮೊದಲ ಬಾರಿಗೆ ದೇವರ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಜಾನ್ವಿ ಈ ಯೋಜನೆಗೆ ಹೇಗೆ ಬಂದರು ಎಂಬುದನ್ನು ಜೂನಿಯರ್ ಎನ್‌ಟಿಆರ್ ವಿವರವಾಗಿ ಹೇಳುತ್ತಾರೆ. "ಒಂದು ದಿನ ಕರಣ್ ಜೋಹರ್ ಅವರಿಂದ ನನಗೆ ಕರೆ ಬಂದಿತು, ಜಾನ್ವಿ ಅವರು ಶಿವನೊಂದಿಗಿನ ನನ್ನ ಚಿತ್ರದ ಭಾಗವಾಗಲು ಬಯಸುತ್ತಾರೆ” ಎಂದು ಹೇಳಿದರು. ಅವಳು ದೇವರ ಭಾಗವಾಗಲು ಬಯಸಿದ್ದಳು ಮತ್ತು ಅಂತಿಮವಾಗಿ ಅದನ್ನು ಪಡೆದುಕೊಂಡಳು, ಏಕೆಂದರೆ ಜಾನ್ವಿಯೇ ತಮ್ಮ ಪರಿಪೂರ್ಣ ಆಯ್ಕೆ ಎಂದು ಶಿವನಿಗೆ ಅನಿಸಿತು" ಎಂದು ಅವರು ಹೇಳಿದರು.

ಏನೇ ಇದ್ದರೂ ಜಾನ್ವಿ ಪ್ರತಿಭಾವಂತ ನಟಿ ಎಂದು ಅವರು ಹೇಳುವುದನ್ನು ಮರೆಯಲಿಲ್ಲ. ತೆಲುಗಿನಲ್ಲಿ ಸಂಭಾಷಣೆ ಹೇಳಲು ಅವರ ಪಟ್ಟ ಕಷ್ಟವನ್ನೂ ನೆನಪಿಸಿಕೊಂಡರು. "ಆರಂಭದಲ್ಲಿ, ಅವಳು ಸ್ವಲ್ಪ ಭಯಪಡುತ್ತಿದ್ದಳು ಎಂದು ನಾನು ಭಾವಿಸಿದೆ ಆದರೆ ನಂತರ, ಅವಳು ತನ್ನ ಪಾತ್ರವನ್ನು ಅರ್ಥಮಾಡಿಕೊಂಡಳು ಮತ್ತು ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದಳು. ಕೆಲವು ಕೋನಗಳಲ್ಲಿ, ಅವಳು ಸೌಂದರ್ಯದ ಪ್ರತಿರೂಪವಾದ ತನ್ನ ತಾಯಿ ಶ್ರೀದೇವಿಯನ್ನು ನೆನಪಿಸುತ್ತಾಳೆ. ಎನ್ನುತ್ತಾಋಎ ಜೂನಿಯರ್‌ ಎನ್‌ ಟಿ ಆರ್.

ಮಹತ್ವಾಕಾಂಕ್ಷೆಯ ಚಿತ್ರ

ಜೂನಿಯರ್ ಎನ್‌ಟಿಆರ್‌ಗೆ, ದೇವರ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ. ಇದು ಅವರಿಂದ ಬಹಳಷ್ಟನ್ನು ಪಡೆದುಕೊಂಡಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

"ನಮ್ಮ ಪ್ರೊಡಕ್ಷನ್ ಡಿಸೈನರ್ ಖ್ಯಾತ ಕಲಾ ನಿರ್ದೇಶಕ ಸಾಬು ಸಿರಿಲ್ ಸರ್ ಚಿತ್ರಕ್ಕಾಗಿ ಬೃಹತ್ ದೋಣಿ ನಿರ್ಮಿಸಿದ್ದಾರೆ, ದುರದೃಷ್ಟವಶಾತ್, ಇಂದು, ನಮ್ಮಲ್ಲಿ ಹೆಚ್ಚಿನವರು ಚಿತ್ರ ನಿರ್ಮಾಪಕರು ವಿಷುಯಲ್‌ ಎಫೆಕ್ಟ್ (ದೃಶ್ಯ ಪರಿಣಾಮ)ಗಳ ಸಹಾಯದಿಂದ ಎಲ್ಲವನ್ನೂ ರಚಿಸುತ್ತಾರೆ ಎಂದು ಭಾವಿಸುತ್ತಾರೆ ಮತ್ತು ಅವರು ನಮ್ಮ ನಿರ್ಮಾಣ ವಿನ್ಯಾಸಕರ ನಿಜವಾದ ಅಪಾರ ಕೆಲಸವನ್ನು ಗುರುತಿಸುವುದಿಲ್ಲ. ಸಾಬು ಸಿರಿಲ್ ಸರ್ ಮತ್ತು ಅವರ ತಂಡವು ಆಳವಾದ ನೀರಿನಲ್ಲಿ ನಿರ್ಮಿಸಿದ ದೋಣಿ ಮತ್ತು ರತ್ನವೇಲು ಅವರ ಬೆಳಕು ಮತ್ತು ಕ್ಯಾಮೆರಾ ಕುಸುರಿ ಕೆಲಸ ಚಿತ್ರಕ್ಕೆ ತನ್ನದೇ ಅದ ಕೊಡುಗೆಯನ್ನು ನೀಡಿದೆ. ಇವೆಲ್ಲದರ ಒಟ್ಟು ಪರಿಣಾಮವಾಗಿ ದೇವರ ಒಂದು ದೃಶ್ಯ ಮಹಾಕಾವ್ಯದಂತೆ ಸಿದ್ಧವಾಗಿದೆ ಎನ್ನುತ್ತಾರೆ ಜೂನಿಯರ್ ಎನ್‌ಟಿಆರ್.

ದೇವರ ಚಿತ್ರದಲ್ಲಿ ಅವರ ಎದುರಾಳಿಯಾಗಿ ನಟಿಸಿರುವ ಸೈಫ್ ಅಲಿ ಖಾನ್ ಅವರ ಬಗ್ಗೆಯೂ ಜೂನಿಯರ್‌ ಎನ್‌ ಟಿ ಆರ್‌ ಅವರು ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. " ಓಂಕಾರದಲ್ಲಿ ಸೈಫ್ ಸರ್ ಅವರ ಕೆಲಸಕ್ಕೆ ಶಿವ ಮತ್ತು ನಾನು ದೊಡ್ಡ ಅಭಿಮಾನಿಗಳು. ಮೊದಲಿನಿಂದಲೂ ನಾವು ಅವರು ನಮ್ಮ ಚಿತ್ರದಲ್ಲಿ ಅಭಿನಯಿಸಬೇಕೆಂದು ಬಯಸಿದ್ದೆವು. ಮತ್ತು ಸೈಫ್ ಸರ್ ಅವರು ಪ್ರತಿಸ್ಪರ್ಧಿಯಾಗಿ ನಟಿಸಲು ಒಪ್ಪಿಕೊಂಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಅವರು ತಮ್ಮ ತೀವ್ರವಾದ ಅಭಿನಯದಿಂದ ಚಿತ್ರವನ್ನು ವಿಭಿನ್ನ ಹಂತಕ್ಕೆ ಕೊಂಡೊಯ್ದಿದ್ದಾರೆ. ” ಎಂದು ಅವರು ಹೇಳುತ್ತಾರೆ.

ಜೂನಿಯರ್ ಎನ್‌ಟಿಆರ್ ಅವರು ತಮ್ಮ ತಮಿಳು ಸಂಭಾಷಣೆಯನ್ನು ದೇವರಾದಲ್ಲಿ ತಾವೇ ಹೇಳಿದ್ದಾರೆ. "ನಾನು ನನ್ನ ಸಾಲುಗಳನ್ನು ತಮಿಳಿಗೆ ಡಬ್ ಮಾಡಲು ಬಯಸುತ್ತೇನೆ ಏಕೆಂದರೆ ನಟನಾಗಿ, ನನ್ನ ಧ್ವನಿಯಲ್ಲಿನ ಸಾಲುಗಳನ್ನು ನಾನು ಡಬ್ ಮಾಡಿದರೆ ಮಾತ್ರ ನನ್ನ ಅಭಿವ್ಯಕ್ತಿಗಳು ಪ್ರೇಕ್ಷಕರಿಗೆ ತಲುಪುತ್ತವೆ ಎಂದು ನಾನು ಭಾವಿಸುತ್ತೇನೆ. ಜನರು ನನ್ನ ತೆಲುಗು ಉಚ್ಚಾರಣೆಯನ್ನು ಕ್ಷಮಿಸುತ್ತಾರೆ, ಆದರೂ ನಾನು ಹೆಚ್ಚಿನ ಕಾಳಜಿ ವಹಿಸಿದೆ. ನನ್ನ ತಮಿಳು ಸಾಲುಗಳನ್ನು ಯಾವುದೇ ದೋಷವಿಲ್ಲದೆ ಹೇಳುತ್ತೇನೆ, ನನ್ನ ಡಬ್ಬಿಂಗ್ ಮೇಲ್ವಿಚಾರಕ ಮತ್ತು ಆರ್‌ಆರ್‌ಆರ್‌ನ ತಮಿಳು ಸಂಭಾಷಣೆಯಲ್ಲಿ ನನಗೆ ಸಹಾಯ ಮಾಡಿದ ತಮಿಳು ಸಂಭಾಷಣೆ ಬರಹಗಾರ ವಿಜಯ್ ಅವರಿಗೆ ನಾನು ಧನ್ಯವಾದ ಹೇಳಬೇಕು” ಎನ್ನುತ್ತಾರೆ ಜೂನಿಯರ್‌ ಎನ್‌ ಟಿ ಆರ್.

ಪ್ಯಾನ್ ಇಂಡಿಯಾ ಮತ್ತು ಜಾಗತಿಕ ಮನ್ನಣೆ

ದೇವರ ಪ್ಯಾನ್-ಇಂಡಿಯಾ ಚಿತ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಜೂನಿಯರ್ ಎನ್‌ಟಿಆರ್ ಭಾವಿಸುತ್ತಾರೆ.

" ಆರ್‌ಆರ್‌ಆರ್‌ನಲ್ಲಿ ನನಗೆ ಪ್ಯಾನ್ ಇಂಡಿಯಾ ಮತ್ತು ಜಾಗತಿಕ ಮನ್ನಣೆ ಸಿಕ್ಕಿರುವುದರಿಂದ, ನನ್ನ ಎಲ್ಲಾ ಚಿತ್ರಗಳಲ್ಲಿ ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ನನ್ನ ತೆಕ್ಕೆಗೆ ತೆಗೆದುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ದೇವರಿಗೆ ಭಾರತದ ವಿವಿಧ ಭಾಗಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಸಾಮರ್ಥ್ಯವಿದೆ. ನಾನು ಮೊದಲೇ ಹೇಳಿದಂತೆ ನನ್ನ ತಾಯಿ ಕನ್ನಡತಿ ಮತ್ತು ನಾನು ಪಂಜುರ್ಲಿ ಕಥೆ-ಪುರಾಣವನ್ನು ಕೇಳುತ್ತಾ ಬೆಳೆದಿದ್ದೇನೆ ಆದರೆ ರಿಷಭ್‌ ಶೆಟ್ಟಿ ಮಾಡಿದ ʻಕಾಂತಾರʼ ಕೇವಲ ಕನ್ನಡದದ್ದಾದರೂ, ತನ್ನ ವಸ್ತುವಿನಿಂದ ದೇಶಾದ್ಯಂತ, ವಿಶ್ವದಾದ್ಯಂತ ಭಾಷೆಯ ಗಡಿ ಮಿತಿಗಳನ್ನು ಮೀರಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿತು ಎಂದು ಜೂನಿಯರ್‌ ಎನ್‌‌ಟಿ ಆರ್‌ ಅವರು ʻಕಾಂತಾರʼವನ್ನು ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ರಿಷಭ್‌ ಶೆಟ್ಟಿ ಅವರನ್ನು ಅವರ ಊರಿನಲ್ಲಿಯೇ ಭೇಟಿ ಮಾಡಿ, ಆ ದೇವರನ್ನು ಪೂಜಿಸಿ, ವರ ಕೇಳಿದ್ದು ಈಗ ಜಾಗತಿಕ ಸುದ್ದಿ.

ಈಗ ಈ ದೇವರ ಎಲ್ಲೆಲ್ಲಿ ಎತ್ತೆತ್ತ, ಎಷ್ಟೆತ್ತರ, ಎಷ್ಟು ಆಳಕ್ಕೆ ಇಳಿದು, ಪ್ರೇಕ್ಷಕರ ಹೃದಯ ಗೆಲ್ಲುತ್ತಾರೆ ಎಂಬುದೇ ಕುತೂಹಲ. ಅದಕ್ಕೆ ಶುಕ್ರವಾರದವರೆಗೆ ಕಾಯಲೇಬೇಕು ಅಲ್ಲವೇ?

Read More
Next Story