ಹೆಚ್ಚುವರಿ ಕಾಫಿ ಕಪ್ ಕೊಡದಿದ್ದಕ್ಕೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ
x

ಕೆಫೆ ಸಿಬ್ಬಂದಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಗ್ರಾಹಕ 

ಹೆಚ್ಚುವರಿ ಕಾಫಿ ಕಪ್ ಕೊಡದಿದ್ದಕ್ಕೆ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

ಗ್ರಾಹಕರ ಗುಂಪು ಕಾಫಿ ಕೆಫೆ ಸಿಬ್ಬಂದಿಯನ್ನು ನಿಂದಿಸಲು ಶುರು ಮಾಡಿತು. ನಂತರ ಅವರ ತಲೆಗೆ ಹೊಡೆದು, ಮುಖಕ್ಕೆ ಹಲ್ಲೆ ಮಾಡಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಹೆಚ್ಚುವರಿ ಕಾಫಿ ಕಪ್ ನೀಡಲು ನಿರಾಕರಿಸಿದ ಸಿಬ್ಬಂದಿಯ ಮೇಲೆ ಗ್ರಾಹಕರ ಗುಂಪೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ 'ನಮ್ಮ ಫಿಲ್ಟರ್ ಕಾಫಿ' ಕೆಫೆಯಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬುಧವಾರ ಸಂಜೆ 6.50 ರ ಸುಮಾರಿಗೆ ಕಾಫಿ ಶಾಪ್‌ಗೆ ಬಂದಿದ್ದ ನಾಲ್ವರು ಕಾಫಿ ಕುಡಿದಿದ್ದಾರೆ. ಈ ವೇಳೆ ಗ್ರಾಹಕರು ಹೆಚ್ಚುವರಿ ಕಪ್‌ ಕೇಳಿದಾಗ ಸಿಬ್ಬಂದಿ ಕೊಡಲು ನಿರಾಕರಿಸಿದ್ದಾರೆ. ಕೆಫೆಯ ನಿಯಮಗಳ ಪ್ರಕಾರ ಹೆಚ್ಚುವರಿ ಕಪ್ ನೀಡಲು ಆಗುವುದಿಲ್ಲ. ಬೇಕಿದ್ದರೆ ಹಣ ಕೊಟ್ಟು ಖರೀದಿಸಿ ಎಂದು ಹೇಳಿದ್ದಾರೆ. ಆಗ ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಗ್ರಾಹಕರ ಗುಂಪು ಕೆಫೆ ಸಿಬ್ಬಂದಿಯನ್ನು ನಿಂದಿಸಲು ಆರಂಭಿಸಿದೆ. ಮುಂದುವರಿದು ತಲೆಗೆ ಹೊಡೆದು, ಮುಖಕ್ಕೆ ಹಲ್ಲೆ ಮಾಡಿರುವ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆ ಕುರಿತು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಬೆಂಗಳೂರಿನ ಪ್ರಸಿದ್ಧ ಪಬ್‌ನಲ್ಲಿ 27 ವರ್ಷದ ಮಹಿಳಾ ಟೆಕ್ಕಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ದಿನಸಿ ಖರೀದಿಸಲು ಹೊರಗೆ ಹೋಗಿದ್ದ ಮಹಿಳೆಯೊಬ್ಬರ ಮೇಲೆ ಪಾನಮತ್ತ ವ್ಯಕ್ತಿಗಳ ಗುಂಪೊಂದು ಹಲ್ಲೆ ಮಾಡಿತ್ತು. ಅವರಿಗೆ ಸಹಾಯ ಮಾಡಲು ಬಂದ ನೆರೆಹೊರೆಯವರ ಮೇಲೂ ಹಲ್ಲೆ ನಡೆಸಿದ್ದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Read More
Next Story