Palace Ground Dispute | ಅರಮನೆಯ ಮೂಲ ವ್ಯಾಜ್ಯ ಇತ್ಯರ್ಥಕ್ಕೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ
x
ಬೆಂಗಳೂರು ಅರಮನೆ (ಸಂಗ್ರಹ ಚಿತ್ರ)

Palace Ground Dispute | ಅರಮನೆಯ ಮೂಲ ವ್ಯಾಜ್ಯ ಇತ್ಯರ್ಥಕ್ಕೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

ಮಾರ್ಗಸೂಚಿ ಮೌಲ್ಯದಂತೆ ಪರಿಹಾರ ನೀಡುವ ಸುಪ್ರೀಂಕೋರ್ಟ್‌ನಿರ್ದೇಶನದ ಪ್ರಕಾರ ರಾಜ್ಯ ಸರ್ಕಾರ ಮೈಸೂರು ರಾಜಮನೆತನಕ್ಕೆ 3011 ಕೋಟಿ ರೂ. ಗಳನ್ನು ಟಿಡಿಆರ್‌ ರೂಪದಲ್ಲಿ ಪರಿಹಾರ ನೀಡಬೇಕಾಗಿತ್ತು.


ಬೆಂಗಳೂರು ಅರಮನೆ ಜಾಗದ ಸ್ವಾಧೀನ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.

ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಜಯಮಹಲ್ ಮತ್ತು ಬಳ್ಳಾರಿ ರಸ್ತೆ ವಿಸ್ತರಣೆಗಾಗಿ 15 ಎಕರೆ 17.5 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಮೈಸೂರು ರಾಜಮನೆತನದ ಉತ್ತರಾಧಿಕಾರಿ ಸುಪ್ರೀಂಕೋರ್ಟ್‌ ಮೊರೆ

2024 ಡಿಸೆಂಬರ್‌ ತಿಂಗಳಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಅಕ್ಕಪಕ್ಕದಲ್ಲಿರುವ ಭೂಮಿಯ ಮಾರ್ಗದರ್ಶಿ ಮೌಲ್ಯದಂತೆ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರ ಅನ್ವಯ ರಾಜ್ಯ ಸರ್ಕಾರ ಮೈಸೂರು ರಾಜಮನೆತನಕ್ಕೆ 3011 ಕೋಟಿ ರೂ. ಗಳನ್ನು ಟಿಡಿಆರ್‌ ರೂಪದಲ್ಲಿ ನೀಡಬೇಕಾಗಿತ್ತು.

ಮೂಲ ವ್ಯಾಜ್ಯದ ತುರ್ತು ಪರಿಶೀಲನೆಗೆ ಮನವಿ

1997ರ ಮೂಲ‌ ವ್ಯಾಜ್ಯಗಳನ್ನು ತ್ವರಿತವಾಗಿ ಪರಿಶೀಲಿಸಲು ಸರ್ಕಾರ ಈಗಾಗಲೇ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್‌ 2001ರಲ್ಲಿ ನೀಡಿದ್ದ ಆದೇಶ ಉಲ್ಲಂಘಿಸಿ 2 ಲಕ್ಷ ಚದರ ಮೀಟರ್‌ ವಿಸ್ತೀರ್ಣದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದೇಶ ಉಲ್ಲಂಘಿಸಿದ ಕುರಿತಾಗಿಯೂ ಮೈಸೂರು ರಾಜಮನೆತನದ ಉತ್ತರಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಸಂಪುಟ ತೀರ್ಮಾನಿಸಿದೆ. ಈಗಾಗಲೇ ಉತ್ತರಾಧಿಕಾರಿಗೆ ರಾಜ್ಯ ಸರ್ಕಾರ ನೋಟಿಸ್‌ ಕೂಡ ನೀಡಿದೆ.

2014ರ ಏಪ್ರಿಲ್ 24ರಂದು 472 ಎಕರೆ ಅರಮನೆ ಆಸ್ತಿಯಲ್ಲಿ ಎಕರೆಗೆ ತಲಾ 11 ಕೋಟಿ ರೂ.ಗಳ ಪರಿಹಾರದಂತೆ ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ರಡಿ ಟಿಡಿಆರ್ ಮೌಲ್ಯವನ್ನು 1.50 ಕೋಟಿ ರೂ. ನಿಗದಿಪಡಿಸಿತ್ತು. ಮೈಸೂರಿನ ರಾಜಮನೆತನದ ವಾರಸುದಾರರು ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಕಳೆದ ಡಿಸೆಂಬರ್ 10 ರಂದು ಮೈಸೂರು ರಾಜಮನೆತನದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆರು ವಾರಗಳಲ್ಲಿ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ ಟಿಡಿಆರ್ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

Read More
Next Story