Cab Price Hike | ಮತ್ತೊಂದು ಬೆಲೆ ಏರಿಕೆ ಬಿಸಿ; ಟ್ಯಾಕ್ಸಿ, ಕ್ಯಾಬ್​ ದರವೂ ಹೆಚ್ಚಳ
x

ಇಂದಿನಿಂದ ಟಾಕ್ಸಿಗಳ ಬಲೆ ಏರಿಕೆಯಾಗಿದೆ. 

Cab Price Hike | ಮತ್ತೊಂದು ಬೆಲೆ ಏರಿಕೆ ಬಿಸಿ; ಟ್ಯಾಕ್ಸಿ, ಕ್ಯಾಬ್​ ದರವೂ ಹೆಚ್ಚಳ

ಕೇಂದ್ರ ಸರ್ಕಾರ ಟೋಲ್ ದರ ಹಾಗೂ ರಾಜ್ಯ ಸರ್ಕಾರ ಡಿಸೇಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್, ಕ್ಯಾಬ್​ಗಳ ಸೇವೆಗಳ ಮೇಲೆ ತಟ್ಟಿದ್ದು, ಅವರೂ ದರ ಹೆಚ್ಚಳ ಮಾಡಿದ್ದಾರೆ.


ಏಪ್ರಿಲ್​ 1ರಿಂದ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಏಪ್ರಿಲ್ 04ರಿಂದ ಕರ್ನಾಟಕದಲ್ಲಿ ಕ್ಯಾಬ್ ಮತ್ತು ಟ್ಯಾಕ್ಸಿ ದರಗಳಲ್ಲಿ ಏರಿಕೆಯಾಗಿದ್ದು ಪ್ರಯಾಣವೂ ಸಂಕಷ್ಟ ಎನಿಸಿದೆ. ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ಈ ದರ ಏರಿಕೆಗೆ ಅನುಮೋದನೆ ನೀಡಿದ್ದು, ಇದರಿಂದಾಗಿ ಪ್ರತಿ ಕಿಲೋಮೀಟರ್‌ಗೆ 3 ರಿಂದ 5 ರೂಪಾಯಿವರೆಗೆ ಏರಿಕೆಯಾಗಲಿದೆ.

ಕ್ಯಾಬ್ ಮತ್ತು ಟ್ಯಾಕ್ಸಿ ಸೇವೆಗಳಿಗೆ ಕನಿಷ್ಠ ದರವು ಈಗ ₹100 ರಿಂದ ₹150 ಕ್ಕೆ ಏರಿಕೆಯಾಗಿದೆ. ಅಲ್ಲದೆ, ಪ್ರತಿ ಕಿಲೋಮೀಟರ್‌ಗೆ ಶುಲ್ಕವು ಹಿಂದಿನ 24 ರಿಂದ 28 ಅಥವಾರ 30 ರೂಪಾಯಿ ತನಕ ಹೆಚ್ಚಳವಾಗಿದೆ. ಈ ದರ ಏರಿಕೆಯು ಎಲ್ಲಾ ರೀತಿಯ ಕ್ಯಾಬ್‌ಗಳಿಗೆ (ಸಾಮಾನ್ಯ, ಡೀಲಕ್ಸ್ ಮತ್ತು ಪ್ರೀಮಿಯಂ) ಅನ್ವಯಿಸುತ್ತದೆ. ಉದಾಹರಣೆಗೆ, 5 ಕಿಲೋಮೀಟರ್ ಪ್ರಯಾಣಕ್ಕೆ ಹಿಂದೆ ₹150 ರಿಂದ ₹200 ಶುಲ್ಕವಿದ್ದರೆ, ಈಗ ಅದು ₹200 ರಿಂದ ₹250 ರವರೆಗೆ ಹೆಚ್ಚಳವಾಗಲಿದೆ. ಈ ಬದಲಾವಣೆಯು ಆ್ಯಪ್ ಆಧಾರಿತ ಸೇವೆಗಳಾದ ಓಲಾ, ಉಬರ್ ಮತ್ತು ಸಾಂಪ್ರದಾಯಿಕ ಟ್ಯಾಕ್ಸಿ ಸೇವೆಗಳ ಮೇಲೂ ಪರಿಣಾಮ ಬೀರಲಿದೆ.

ದರ ಏರಿಕೆಗೆ ಕಾರಣಗಳು

ಡೀಸೆಲ್​ ಬೆಲೆ ಏರಿಕೆ, ವಾಹನ ನಿರ್ವಹಣೆ ವೆಚ್ಚದ ಹೆಚ್ಚಳ ಮತ್ತು ಚಾಲಕರ ಜೀವನ ವೆಚ್ಚದಲ್ಲಿ ಉಂಟಾದ ಬದಲಾವಣೆಗಳು ದರ ಏರಿಕೆಗೆ ಕಾರಣ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಸತತವಾಗಿ ಏರುತ್ತಿರುವುದರಿಂದ, ಚಾಲಕರಿಗೆ ತಮ್ಮ ಆದಾಯವನ್ನು ಹೊಂದಾಣಿಕ ಮಾಡಲು ಕಷ್ಟವಾಗಿದೆ. ಜೊತೆಗೆ, ವಾಹನಗಳ ರಿಪೇರಿ, ಬಿಡಿಭಾಗಗಳ ಬೆಲೆ ಮತ್ತು ವಿಮೆಯ ವೆಚ್ಚಗಳೂ ಹೆಚ್ಚಾಗಿವೆ.

ಪ್ರಯಾಣಿಕರ ಮೇಲೆ ಪರಿಣಾಮ

ದರ ಏರಿಕೆಯು ಬೆಂಗಳೂರಿನ ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ವಿಶೇಷವಾಗಿ, ಕಚೇರಿಗೆ ಹೋಗುವ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಆರ್ಥಿಕವಾಗಿ ಮಧ್ಯಮ ವರ್ಗದವರಿಗೆ ನೇರವಾಗಿ ತಟ್ಟಲಿದೆ. ಉದಾಹರಣೆಗೆ, ಒಂದು ಸಾಮಾನ್ಯ ಕಚೇರಿ ಪ್ರಯಾಣ (10 ಕಿ.ಮೀ ದೂರ) ಈಗ 300 ರಿಂದ 350 ರೂಪಾಯಿವರೆಗೆ ಖರ್ಚಾಗಬಹುದು. ತಿಂಗಳಿಗೆ ಸುಮಾರು 1500 ರಿಂದ 2000 ರೂಪಾಯಿ ಹೆಚ್ಚುವರಿ ಖರ್ಚಾಗಬಹುದು.

ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರ ಸಂಘಗಳು ಈ ದರ ಏರಿಕೆಯನ್ನು ಸ್ವಾಗತಿಸಿವೆ. ಅವರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ದರಗಳಲ್ಲಿ ಯಾವುದೇ ಗಣನೀಯ ಬದಲಾವಣೆ ಆಗಿರಲಿಲ್ಲ, ಆದರೆ ಜೀವನ ವೆಚ್ಚ ಮತ್ತು ಕಾರ್ಯಾಚರಣೆ ವೆಚ್ಚಗಳು ಗಗನಕ್ಕೇರಿವೆ. "ಈ ದರ ಏರಿಕೆಯಿಂದ ನಮಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗಲಿದೆ. ಆದಾಯ ಮತ್ತು ಖರ್ಚಿನ ನಡುವಿನ ಅಂತರ ಕಡಿಮೆಯಾಗಲಿದೆ," ಎಂದು ಒಬ್ಬ ಚಾಲಕರೊಬ್ಬರು ತಿಳಿಸಿದ್ದಾರೆ.

ದರ ಏರಿಕೆಯ ಪ್ರಮುಖ ಕಾರಣಗಳು

ಟೋಲ್ ದರ 5% ಹೆಚ್ಚಳ (ಕೇಂದ್ರ ಸರ್ಕಾರ)

ಕಾರು ಕಂಪನಿಗಳಿಂದ ಕಾರುಗಳ ಬೆಲೆ 3-4% ಏರಿಕೆ

ಡಿಸೇಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ (ರಾಜ್ಯ ಸರ್ಕಾರ)

10 ಲಕ್ಷ ರೂ ಒಳಗಿನ ಯೆಲ್ಲೋ ಬೋರ್ಡ್ ಕಾರುಗಳಿಗೆ 5% ಲೈಫ್ ಟೈಮ್ ಟ್ಯಾಕ್ಸ್ + 1% ಸೆಸ್

Read More
Next Story