
ಸಾಂದರ್ಭಿಕ ಚಿತ್ರ
ಬಸ್‌ನಲ್ಲಿ ಚಿನ್ನಾಭರಣ ಕಳವು; ಮಹಿಳೆ ಬಂಧನ, 7.50 ಲಕ್ಷ ಮೌಲ್ಯದ ಮಾಲು ವಶ
. ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವಾಗ ಆರೋಪಿ ಮಹಿಳೆ ಉದ್ದೇಶಪೂರ್ವಕವಾಗಿ ನಾಣ್ಯಗಳನ್ನು ಕೆಳಗೆ ಬೀಳಿಸಿದ್ದರು. ದೂರುದಾರರು ಆ ನಾಣ್ಯಗಳನ್ನು ತೆಗೆದುಕೊಡುವ ಗಡಿಬಿಡಿಯಲ್ಲಿ ಅವರ ಗಮನ ಬೇರೆಡೆ ಸೆಳೆದು, ಬ್ಯಾಗಿನಲ್ಲಿದ್ದ 80 ಗ್ರಾಂ ಚಿನ್ನಾಭರಣ ಹಾಗೂ 22 ಗ್ರಾಂ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು.
ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬೆಲೆಬಾಳುವ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳಾ ಆರೋಪಿಯೊಬ್ಬರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7.50 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಅಕ್ಟೋಬರ್ 23ರಂದು ಕೋರಮಂಗಲ ನಿವಾಸಿಯಾದ ದೂರುದಾರರು ತಿರುವಣ್ಣಾಮಲೈಗೆ ಹೋಗಲು ಮಡಿವಾಳ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದರು. ಅವರು ತಮ್ಮ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಬಸ್‌ನಲ್ಲಿ ಟಿಕೆಟ್ ತೆಗೆದುಕೊಳ್ಳುವಾಗ ಆರೋಪಿ ಮಹಿಳೆ ಉದ್ದೇಶಪೂರ್ವಕವಾಗಿ ನಾಣ್ಯಗಳನ್ನು ಕೆಳಗೆ ಬೀಳಿಸಿದ್ದರು. ದೂರುದಾರರು ಆ ನಾಣ್ಯಗಳನ್ನು ತೆಗೆದುಕೊಡುವ ಗಡಿಬಿಡಿಯಲ್ಲಿ ಅವರ ಗಮನ ಬೇರೆಡೆ ಸೆಳೆದು, ಬ್ಯಾಗಿನಲ್ಲಿದ್ದ 80 ಗ್ರಾಂ ಚಿನ್ನಾಭರಣ ಹಾಗೂ 22 ಗ್ರಾಂ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಸೆರೆ
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಡಿಸೆಂಬರ್ 12ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಕೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆಕೆಯಿಂದ 70 ಗ್ರಾಂ ಚಿನ್ನ ಮತ್ತು 22 ಗ್ರಾಂ ಬೆಳ್ಳಿ ಆಭರಣಗಳನ್ನು (ಒಟ್ಟು ಮೌಲ್ಯ 7,50,000 ಲಕ್ಷ ರೂಪಾಯಿ) ವಶಪಡಿಸಿಕೊಳ್ಳಲಾಗಿದೆ. ಆರೋಪಿ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

