HOAX BOMB THREAT | ಬಾಂಬ್‌ ಸ್ಪೋಟ ಬೆದರಿಕೆ; ಆರೋಪಿ ಅರೆಸ್ಟ್‌
x
ಬಾಂಬ್‌ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

HOAX BOMB THREAT | ಬಾಂಬ್‌ ಸ್ಪೋಟ ಬೆದರಿಕೆ; ಆರೋಪಿ ಅರೆಸ್ಟ್‌

HOAX BOMB THREAT CALL| ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿದಂತೆ ಬೆಂಗಳೂರಿನ ವಿವಿಧೆಡೆ ಗಣರಾಜ್ಯೋತ್ಸವ ದಿನ ಸ್ಫೋಟಿಸಲು ಮೂವರು ಸಂಚು ರೂಪಿಸಿದ್ದಾರೆ ಎಂದು ಆರು ಜನರ ಹೆಸರು ಮತ್ತು ವಿಳಾಸ ತಿಳಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ರೀತಿಯಲ್ಲಿ ನಗರದ ಆರು ಜನ ಗಣ್ಯರ ಮನೆ ಸ್ಪೋಟಿಸುವುದಾಗಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನ್ಸೂರ್ ಬಂಧಿತ ಆರೋಪಿ. ಜನವರಿ 9ರಂದು ಸಂಜೆ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ಮನ್ಸೂರ್ ತನ್ನನ್ನು ರಿಯಾಜ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು, ''ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಿಸಿದಂತೆ ಬೆಂಗಳೂರಿನ ವಿವಿಧೆಡೆ ಗಣರಾಜ್ಯೋತ್ಸವ ದಿನ ಸ್ಫೋಟಿಸಲು ಮೂವರು ಸಂಚು ರೂಪಿಸಿದ್ದಾರೆ ಎಂದು ಆರು ಜನರ ಹೆಸರು ಮತ್ತು ವಿಳಾಸ ತಿಳಿಸಿದ್ದ. ಈ ಮಾಹಿತಿಯನ್ನ ಕಡೆಗಣಿಸದೆ ಪೊಲೀಸರು ಪರಿಶೀಲಿಸಿದಾಗ, ಅದೊಂದು ಹುಸಿ ಕರೆ ಎಂದು ತಿಳಿದು ಬಂದಿತ್ತು. ಬಳಿಕ ಕರೆ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿರುವುದು ತಿಳಿದುಬಂದಿದೆ.

ಈ ಹಿಂದೆ ಕೆ.ಆರ್.ಮಾರ್ಕೆಟ್ ಬಳಿ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದ ಆರೋಪಿ ಮನ್ಸೂರ್ ಬಹಳಷ್ಟು ನಷ್ಟ ಅನುಭವಿಸಿದ್ದ. ಇದರಿಂದ ಪ್ರಾವಿಜನ್ ಸ್ಟೋರ್ ಮುಚ್ಚಲ್ಪಟ್ಟಿತ್ತು. ಬಳಿಕ ಹೊಸದಾಗಿ ಗುಜರಿ ವ್ಯಾಪಾರ ಆರಂಭಿಸಿದ್ದ. ಆದರೆ ಗುಜುರಿ ವ್ಯಾಪಾರವು ಕೂಡ ಬಹಳಷ್ಟು ನಷ್ಟವಾಯಿತು. ಇದರಿಂದ ಸಿಟ್ಟಿಗೆದ್ದ ಮನ್ಸೂರ್ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬಾಂಬ್ ಸ್ಪೋಟದ ಕಥೆ ಹೇಳಿದ್ದ. ಜೊತೆಗೆ ಸ್ಫೋಟಿಸಲು ಸಂಚು ರೂಪಿಸಿರುವ ಆರೋಪಿಗಳು ಇವರೇ ಎಂದು ತನ್ನ ವ್ಯಾಪಾರಕ್ಕೆ ಪ್ರತಿಸ್ಪರ್ಧಿಗಳಾಗಿದ್ದವರ ಹೆಸರು ಹಾಗೂ ವಿಳಾಸಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Read More
Next Story