ಮೈಸೂರು ಸ್ಯಾಂಡಲ್ ಸೋಪ್ ಗೆ ಬಾಲಿವುಡ್ ನಟಿ ತಮನ್ನಾ ಪ್ರಚಾರ ರಾಯಭಾರಿ ; ಕನ್ನಡದಲ್ಲಿ ಯಾರೂ ಇರಲಿಲ್ಲವೇ ಎಂದ ಬಿಜೆಪಿ
x

ವಿಜಯೇಂದ್ರ

ಮೈಸೂರು ಸ್ಯಾಂಡಲ್ ಸೋಪ್ ಗೆ ಬಾಲಿವುಡ್ ನಟಿ ತಮನ್ನಾ ಪ್ರಚಾರ ರಾಯಭಾರಿ ; ಕನ್ನಡದಲ್ಲಿ ಯಾರೂ ಇರಲಿಲ್ಲವೇ ಎಂದ ಬಿಜೆಪಿ

ಕೆಎಸ್‌ಡಿಎಲ್‌ಗೆ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿರುವುದು ಬಹಳ ಗಂಭೀರ ವಿಚಾರ. ಇದು ಮೈಸೂರು ಮಹಾರಾಜರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.


ʼಮೈಸೂರು ಸ್ಯಾಂಡಲ್‌ ಸೋಪ್‌ʼ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವ ಕೆಎಸ್‌ಡಿಎಲ್‌ ಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ,ವಿಜಯೇಂದ್ರ ಅವರು, ಪರಭಾಷಾ ನಟಿಯನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿರುವ ಕ್ರಮವನ್ನು ಟೀಕಿಸಿದ್ದಾರೆ.

ಕೆಎಸ್‌ಡಿಎಲ್‌ಗೆ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿರುವುದು ಬಹಳ ಗಂಭೀರ ವಿಚಾರ. ಇದು ಮೈಸೂರು ಮಹಾರಾಜರಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಚಾರ ರಾಯಭಾರಿಗಳಾಗಲು ಸಾಕಷ್ಟು ನಟ ನಟಿಯರೂ ಇದ್ದಾರೆ. ಕೆಎಸ್ ಡಿಎಲ್, ಕಾಂಗ್ರೆಸ್ ಸ್ಥಾಪನೆ ಮಾಡಿದ ಸಂಸ್ಥೆಯಲ್ಲ, ಪರಿಣತರ ಸಲಹೆಯಂತೆ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಪ್ರಚಾರ ರಾಯಭಾರಿ ನೇಮಕ ಮಾಡಲು ಪರಿಣತರ ಸಲಹೆ ಬೇಕೆ, ಅವರು ಯಾವುದರಲ್ಲಿ ಪರಿಣತರು ಎಂದು ವಾಗ್ದಾಳಿ ನಡೆಸಿದ್ದಾರೆ.

ತಮನ್ನಾ ನೇಮಕಕ್ಕೆ ಮಧು ಬಂಗಾರಪ್ಪ ಸಮರ್ಥನೆ

ತಮನ್ನಾ ಭಾಟಿಯಾ ನೇಮಕ ಕುರಿತಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಪರಭಾಷಾ ನಟಿ ಎನ್ನುವುದಾದರೆ ಶಿವರಾಜ್ ಕುಮಾರ್ ತಮಿಳಿನ ಜೈಲರ್‌ ಚಿತ್ರದಲ್ಲಿ ನಟಿಸಿಲ್ಲವೇ ಎಂದು ಟಾಂಗ್‌ ನೀಡಿದ್ದಾರೆ.

ಮಾರುಕಟ್ಟೆ ಕಾರ್ಯತಂತ್ರದ ಭಾಗವಾಗಿ ನಟಿ ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿಯನ್ನಾಗಿ ಮಾಡಲಾಗಿದೆ. ಒಂದು ವೇಳೆ ತಮನ್ನಾ ಅವರನ್ನು ವಿರೋಧ ಮಾಡುವುದಾದರೆ ಅವರ ಸಿನಿಮಾಗಳನ್ನೂ ನೋಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ನಟಿ ತಮನ್ನಾ ಭಾಟಿಯಾ ಬದಲು ಕನ್ನಡ ನಟಿಯರು ಉಚಿತವಾಗಿಯೇ ರಾಯಭಾರಿಗಳಾಗುತ್ತಿದ್ದರು. ಹೀಗಿರುವಾಗ ತಮನ್ನಾಗೆ ಕೋಟ್ಯಂತರ ರೂ. ಸಂಭಾವನೆ ಕೊಡುವುದು ಸರಿಯಲ್ಲ ಎಂಬುದು ಕನ್ನಡಿಗರ ಆಕ್ಷೇಪವಾಗಿದೆ.

Read More
Next Story