ರಾಜ್ಯಸಭಾ ಚುನಾವಣೆ | ಬಿಜೆಪಿ ಪಟ್ಟಿ ಬಿಡುಗಡೆ: ಬಾಂಡಗೆಗೆ ಒಲಿದ ಟಿಕೆಟ್, ರಾಜೀವ್ ಚಂದ್ರಶೇಖರ್, ಸೋಮಣ್ಣಗೆ ನಿರಾಸೆ
x
ಪ್ರಾತಿನಿಧಿಕ ಚಿತ್ರ

ರಾಜ್ಯಸಭಾ ಚುನಾವಣೆ | ಬಿಜೆಪಿ ಪಟ್ಟಿ ಬಿಡುಗಡೆ: ಬಾಂಡಗೆಗೆ ಒಲಿದ ಟಿಕೆಟ್, ರಾಜೀವ್ ಚಂದ್ರಶೇಖರ್, ಸೋಮಣ್ಣಗೆ ನಿರಾಸೆ

ರಾಜ್ಯಸಭೆಯ ಚುನಾವಣೆ ಹಿನ್ನೆಲೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಬಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.


ರಾಜ್ಯಸಭೆಯ ಚುನಾವಣೆ ಹಿನ್ನೆಲೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಿಂದ ಬಾಗಲಕೋಟೆ ಮೂಲದ ನಾರಾಯಣ ಬಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ.

ರಾಜೀವ್ ಚಂದ್ರಶೇಖರ್, ಜಿಸಿ ಚಂದ್ರಶೇಖರ್, ಎಲ್ ಹನುಮಂತಯ್ಯ, ನಸೀರ್ ಅಹಮದ್ ರವರ ಅವಧಿ ಮುಕ್ತಾಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ.

ಈ ಬಾರಿಯೂ ರಾಜೀವ್ ಚಂದ್ರಶೇಖರ್ ಅವರು ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಅದರಂತೆ ಮಾಜಿ ಸಚಿವ ವಿ.ಸೋಮಣ್ಣ ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸೋಮಣ್ಣ ಅವರು ಈ ಹಿಂದೆ ವರಿಷ್ಠರನ್ನು ಭೇಟಿಯಾದಾಗ ತಮ್ಮನ್ನು ರಾಜ್ಯಸಭೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ:-

1.ಧರ್ಮಶೀಲಾ ಗುಪ್ತಾ: ಬಿಹಾರ

2.ಡಾ.ಭೀಮ್ ಸಿಂಗ್: ಬಿಹಾರ

3.ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್

4.ಸುಭಾಷ್ ಬರಲಾ: ಹರಿಯಾಣ

5.ನಾರಾಯಾಣ ಭಾಂಡಗೆ: ಕರ್ನಾಟಕ

6.ಆರ್​​ಪಿಎನ್​​​ ಸಿಂಗ್: ಉತ್ತರ ಪ್ರದೇಶ

7.ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ

8.ಚೌಧರಿ ತೇಜ್​ವೀರ್ ಸಿಂಗ್: ಉತ್ತರ ಪ್ರದೇಶ

9.ಸಾಧನಾ ಸಿಂಗ್: ಉತ್ತರ ಪ್ರದೇಶ

10.ಅಮರಪಾಲ್ ಮೌರ್ಯ: ಉತ್ತರ ಪ್ರದೇಶ

11.ಸಂಗೀತಾ ಬಲ್ವಂತ್: ಉತ್ತರ ಪ್ರದೇಶ

12.ನವೀನ್ ಜೈನ್: ಉತ್ತರ ಪ್ರದೇಶ

13.ಮಹೇಂದ್ರ ಭಟ್: ಉತ್ತರಾಖಂಡ್

14.ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶದ 3 ಸ್ಥಾನ, ಬಿಹಾರ್ 6 ಸ್ಥಾನ, ಗುಜರಾತ್ 4 ಸ್ಥಾನ, ಹರಿಯಾಣ, ಚತ್ತೀಸ್​​ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಒಂದು ಸ್ಥಾನ, ಉತ್ತರ ಪ್ರದೇಶ 10 ಸ್ಥಾನ, ತೆಲಂಗಾಣ, ಒಡಿಸ್ಸಾ, ರಾಜಸ್ಥಾನದಲ್ಲಿ ಮೂರು ಸ್ಥಾನ, ಪಶ್ಚಿಮ ಬಂಗಾಳದಲ್ಲಿ 5 ಸ್ಥಾನ, ಮಹಾರಾಷ್ಟ್ರದಲ್ಲಿ 6 ಸ್ಥಾನ, ಮಧ್ಯ ಪ್ರದೇಶದಲ್ಲಿ 5 ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.

ರಾಜ್ಯದಿಂದ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಕಾಂಗ್ರೆಸ್ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಕಾರಣ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಬಹುದಾಗಿದೆ.

Read More
Next Story